ಬಿಜೆಪಿಯ ಮೂವರು ಅಭ್ಯರ್ಥಿಗಳ ಗೆಲವಿಗೆ ಸಿದ್ದರಾಮಯ್ಯನವರ ಕಾಣಿಕೆಯೂ ಇದೆ-ಈಶ್ವರಪ್ಪ

ಸುದ್ದಿಲೈವ್. ಕಾಂ/ಶಿವಮೊಗ್ಗ
ರಾಜಸಭೆ ಚುನಾವಣೆಯಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿ ಗೆದ್ದಿದ್ದಾರೆ ಅವರಿಗೆ ಅಭಿನಂದಿಸುವೆ. ಅದರಂತೆ ಬಿಜೆಪಿಯ ಅಭ್ಯರ್ಥಿಯನ್ನ ಗೆಲಿಸಲು ಸಿದ್ದರಾಮಯ್ಯನವರೂ ಕಾರಣವಾಗಿದ್ದು ಅವರಿಗೂ ಅಭಿನಂದಿಸುವೆ ಎಂದು ಸಚಿವ ಈಶ್ವರಪ್ಪ ಟಾಂಗ್ ನೀಡಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜೊತೆಗೆ ಪ್ರಧಾನಿ ಮೋದಿ ಯ ಸ್ಪೂರ್ತಿಯೂ ರಾಜ್ಯ ಮೂವರು ಅಭ್ಯರ್ಥಿಗಳ ಗೆಲವಿಗೆ ಕಾರಣವಾಗಿದೆ ಎಂದರು.
ಸಿದ್ದರಾಮಯ್ಯನಿಗೆ ಅಭಿನಂದನೆಗಳು. ರಾಜ್ಯ ಸಭೆಯಲ್ಲಿ ಬಿಜೆಪಿಯ ಮೂವರು ಅಭ್ಯರ್ಥಿಗಳ ಗೆಲವಿಗೆ ಅವರದೂ ಪ್ರಮುಖಪಾತ್ರವಿದೆ ಹಾಗಾಗಿ ಅಭಿನಂದನೆಗಳು. ಮುಸ್ಲೀಂರ ಮನ್ಸೂರ್ ರವರನ್ನ ಸೋಲಿಸುವ ಮೂಲಕ ಸಮುದಾಕ್ಕೆ ಸಿದ್ದರಾಮಯ್ಯ ದ್ರೋಹ ಬಗೆದಿದ್ದಾರೆ. ಮುಸ್ಲೀಂ ಸಮುದಾಯ ಕಾಂಗ್ರೆಸ್ ನ್ನ ಅರ್ಥ ಮಾಡಿಕೊಳ್ಳಬೇಕು ಎಂದು ಟಾಂಗ್ ನೀಡಿದರು.
ಬಿಜೆಪಿ ಕೋಮು ಶಕ್ತಿಯೆಂದು ಹೇಳುವುದನ್ನ ಕಾಂಗ್ರೆಸ್ ಸುಳ್ಳು ಮಾಡಿದೆ. ತಮ್ಮ ಪಕ್ಷದ ಮುಸ್ಲೀಂ ಅಭ್ಯರ್ಥಿ ಸೋಲಿಗೆ ಮಾತ್ರವಲ್ಲದೆ, ಜಾತ್ಯಾತೀತ ಜನತಾದಳದ ಅಭ್ಯರ್ಥಿ ಸೋಲಿಗೂ ಕಾಂಗ್ರೆಸ್ ಕಾರಣವಾಗಿದೆ. ಸಿದ್ದರಾಮಯ್ಯ ಮತ್ತು ಡಿಕೆಶಿಯ ನಿಲುವಿನಿಂದ ಜಾತ್ಯಾತೀತ ಶಕ್ತಿಗಳ ಸೋಲಿಗೆ ಕಾರಣವೆಂದರು.
ಸಂಘಟನೆ ಶಕ್ತಿಯಿಂದ ಮೂರನೇ ಅಭ್ಯರ್ಥಿ ಗೆಲುವಾಗಿದೆ. ಬರುವ ವಿಧಾನ ಸಭೆ ಚುನಾವಣೆಯಲ್ಲಿ ಪೂರ್ಣ ಬಹುಮತ ನೀಡಿದರೆ ಅಭಿವೃದ್ಧಿ ಕೆಲಸ ಆಗಲು ಪೂರ್ಣ ಬಹುಮತ ನೀಡಬೇಕಿದೆ ಎಂದು ಪ್ರಾರ್ಥಿಸಿದರು. ಬೂತ್ ಮಟ್ಟದ ಕಾರ್ಯಕರ್ತರಿಂದ ಹಿಡಿದು ವಿಧಾನಸಭೆಯ ಶಾಸಕರ ವರೆಗೂ ಸಂಘಟನಾತ್ಮಕ ಶಕ್ತಿಯ ಪ್ರದರ್ಶನವಾಗಿದೆ.
ಸಿದ್ದರಾಮಯ್ಯ ಯಾವಾಗ ಯಾರಿಗೆ ಒಳ್ಳೆಯದನ್ನ ಮಾಡಿದ್ದಾರೆ? ಕುರುಬರ ಸಮಾಜದ ನಾಯಕರಾದ ವಿಶ್ವಾನಾಥ್ ವೈ.ಟಿ.ಮೇಟಿ,ರೇವಣ್ಣ, ಎಂಟಿಬಿ, ನಾಗರಾಜ್ ಬೈರತಿಬಸವರಾಜ್ ಯನ್ನ ಕೈಬಿಟ್ಟರು.ಚಿಮ್ಮನ್ ಕಟ್ಟೆಯನ್ನೇ ಬೆಳಸಲಿಲ್ಲ. ವೀರಶೈವ ಲಿಂಗಾಯಿತರನ್ನ ಒಡೆದರು ಎಂದು ಆರೋಪಿಸಿದರು.
