ಸ್ಥಳೀಯ ಸುದ್ದಿಗಳು

ರಾಜ್ಯದಲ್ಲಿ ದಿಡೀರ್ ನೇ ಶೇ.3 ರ ಸನಿಹಕ್ಕೆ ಬಂದ ಕೊರೋನ-ಹಾಗಾದರೆ ಶಿವಮೊಗ್ಗದಲ್ಲಿ ಏನಾಗಿದೆ?

ಸುದ್ದಿಲೈವ್. ಕಾಂ/ಶಿವಮೊಗ್ಗ

ದಿಡೀರನೇ ಪ್ರಕರಣಗಳು ಹೆಚ್ಚಳದಿಂದಾಗಿ ಕೋರೋನ ನಾಲ್ಕನೇ ಅಲೆಯ ಭೀತಿ ಆರಂಭಗೊಂಡಿದೆ. ಹಾಗಂತ ಕೊರೋನ ಮತ್ತೆ ಬುಗಿಲೆದ್ದಿದೆಯಾ ಎಂಬ ಮಾತಿಗೆ ಈಗಲೇ ಸ್ಪಷ್ಟತೆ ಇಲ್ಲ.

ಆದರೂ ಬೆಂಗಳೂರಿನಲ್ಲಿ 474 ಕೊರೋನ ಪಾಸಿಟಿವ್ ಕಂಡುಬಂದಿದೆ. ಇದರಿಂದ ರಾಜ್ಯದ ಕೊರೋನ ಪಾಸಿಟಿವ್ ಶೇ.3 ರಷ್ಟು ಏರಿಕೆಯಾಗಿರುವುದು ಈ ಭೀತಿಗೆ ಕಾರಣವಾಗಿದೆ.

ಅದರಂತೆ ಶಿವಮೊಗ್ಗದಲ್ಲಿ ಅಂತಹದ್ದೇನು ಆತಂಕ ಕಂಡು ಬಂದಿಲ್ಲ. ಒಂದು ತಿಂಗಳಲ್ಲಿ ಅಂತಹ ಸಂಖ್ಯೆಯಲ್ಲಿ ಸೋಂಕು ಪತ್ತೆಯಾಗಿಲ್ಲ. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಮಾತನಾಡಿ ನಾಲ್ಕು ದಿನಗಳ ಹಿಂದೆ ಶಿವಮೊಗ್ಗ ನಗರದಲ್ಲಿ ಒಬ್ಬರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಹೇಳಿದ್ದಾರೆ.

ಒಂದು ತಿಂಗಳಲ್ಲಿ ಒಬ್ಬರಲ್ಲಿ ಈ ಸೋಂಕು‌ ಪತ್ತೆಯಾಗಿರುವುದು ಆತಂಕವಲ್ಲದಿದ್ದರೂ ಎಚ್ಚರಿಕೆ ಅಗತ್ಯವಿದೆ. ಮಧ್ಯ ವಯಸ್ಕರೋರ್ವಲ್ಲಿ ಈ ಸೋಂಕು ಪತ್ತೆಯಾಗಿದೆ. ಹೋಂ ಕ್ವಾರಂಟೈನ್ ನಲ್ಲಿಸಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button