ತಾಲ್ಲೂಕು ಸುದ್ದಿ

ಕೆಎಸ್ಆರ್ ಪಿ 8 ನೇ ಬೆಟಾಲಿಯನ್ ನಲ್ಲಿ ನಡೆದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚನ

IMG-20220611-WA0027

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಿವಮೊಗ್ಗದಲ್ಲಿ ಕೆಎಸ್ ಆರ್ ಪಿ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆದಿದೆ. ಮಾಚೇನಹಳ್ಳಿಯಲ್ಲಿರುವ ಕೆಎಸ್ಆರ್ಪಿ 8ನೇ ಪಡೆಯ ಆವರಣದಲ್ಲಿ ತರಬೇತುದಾರರ ನಿರ್ಗಮನ ಪಥಸಂಚಲನ ನಡೆದಿದೆ.

ಮಂಗಳೂರು, ಶಿವಮೊಗ್ಗ ತರಬೇತಿ ಶಾಲೆಗಳ ವಿಶೇಷ ಮೀಸಲು ಪೊಲೀಸ್ ಕಾನ್ ಸ್ಟೇಬಲ್ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ನಡೆದಿದ್ದು, ಕಾರ್ಯಕ್ರಮದಲ್ಲಿ ಕೆಎಸ್ಆರ್ ಪಿ ಹೆಚ್ಚುವರಿ ಮಹಾನಿರ್ದೇಶಕ ಆರ್. ಹಿತೇಂದ್ರ, ಉಪ ಮಹಾನಿರ್ದೇಶಕ ಎಂ.ವಿ.ರಾಮಕೃಷ್ಣ ಪ್ರಸಾದ್ ಭಾಗಿಯಾಗಿದ್ದಾರೆ.

ನಿರ್ಗಮನ ಪಥ ಸಂಚಲನದಲ್ಲಿ ಮಂಗಳೂರು ಹಾಗೂ ಶಿವಮೊಗ್ಗದ 224 ಪ್ರಶಿಕ್ಷಣಾರ್ಥಿಗಳು ಭಾಗಿಯಾಗಿದ್ದು, ಮಂಗಳೂರಿನ 75, ಶಿವಮೊಗ್ಗದ 149 ಪ್ರಶಿಕ್ಷಣಾರ್ಥಿಗಳ ಐಆರ್ಬಿಯ 3 ಹಾಗೂ ಕೆಎಸ್ಆರ್ಪಿಯ 5 ಪಡೆ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚನ ನಡೆದಿದೆ.

ಮಂಗಳೂರು ಹಾಗೂ ಶಿವಮೊಗ್ಗದ ಪ್ರಶಿಕ್ಷಣಾರ್ಥಿಗಳು. ಕಳೆದ 9 ತಿಂಗಳಿಂದ ಬುನಾದಿ ತರಬೇತಿ ಪಡೆದಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button