ಕ್ರೈಂ

ಅತ್ಲಾಗೆ ಫೈನಾನ್ಸು ಇಲ್ಲ ಇತ್ತಾಗೆ ಪಿಗ್ಮಿ ಹಣವೂ ಇಲ್ಲ!

ಸುದ್ದಿಲೈವ್. ಕಾಂ/ಶಿವಮೊಗ್ಗ

ವಿನೋಬನಗರದ 60 ಅಡಿ ರಸ್ತೆಯಲ್ಲಿರುವ ಶ್ರೀದುರ್ಗಾಂಬ ಫೈನಾನ್ಸ್ ನವರು ಗ್ರಾಹಕರೊಬ್ಬರು ಕಟ್ಟಿದ ಪಿಗ್ಮಿ ಹಣ ಮೆಚ್ಯೂರಿಟಿ ಆದರೂ ಹಣ ನೀಡದೆ ವಂಚಿಸಿದ್ದು, ನಂತರ ಫೈನಾನ್ಸ್ ನ್ನೇ ಮುಚ್ಚಿಕೊಂಡು ಹೋಗಿರುವ ಘಟನೆ ವರದಿಯಾಗಿದೆ.

ಫೈಸ್ಟಾರ್ ಚಿಕನ್ ಅಂಗಡಿಯ ಮಾಲೀಕ ಸಿಂಧೂಧರ ಎಂಬುವರು 8 ತಿಂಗಳ ಕಾಲ ಕಟ್ಟಿದ 1 ಲಕ್ಷದ 3 ಸಾವಿರ ಹಣವನ್ನ ಬಿಡಿಸಿಕೊಳ್ಳಲು ಹೋದಾಗ ಅವರಿಗೆ ಫೈನಾನ್ಸ್ ಮ್ಯಾನೇಜರ್ 66,777 ರೂ. ಹಣವನ್ನ ಪೂರ್ಣೇಶ್ ಎಂಬುವರ ಹೆಸರಿನ ಯೂನಿಯನ್ ಬ್ಯಾಂಕ್ ನ ಚೆಕ್ ನ್ನ ನೀಡಿರುತ್ತಾರೆ.

ಈ ಎರಡೂ ಚೆಕ್ ಗಳು ಬೌನ್ಸ್ ಆಗಿದ್ದರಿಂದ ಸಿಂಧೂಧರ್ ಪೈನಾನ್ಸ್ ನ ಮಾಲೀಕ ನಾಹರಾಜ್ ಬಳಿ ಹೋದಾಗ, ಹಣ ಕೊಡುವೆ ಎಂದು ಹೇಳಿ ತಳ್ಳಿಕೊಂಡು ಬಂದಿದ್ದಾರೆ.ಮೂರು ತಿಂಗಳಾದರೂ ಹಣ ಕೊಡದೆ ಸತಾಯಿಸಿದ್ದಾರೆ.

ಮೇ ತಿಂಗಳಲ್ಲಿ ಫೈನಾನ್ಸ್ ಬೀಗಹಾಕಲಾಗಿತ್ತು. ಈ ಹಿನ್ಬಲೆಯಲ್ಲಿ ಸಿಂಧೂಧರ್ ಫೈನಾನ್ಸ್ ನ ಮ್ಯಾನೇಜರ್ ಮತ್ತು ಮಾಲೀಕರ ವಿರುದ್ಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button