ಕ್ರೈಂ

ಕೆಪಿಎಸ್ ಸಿ ಮೊರಾರ್ಜಿ ಶಾಲೆ ಸಹಶಿಕ್ಷಕರ ಹುದ್ದೆ ಮತ್ತು ಜಲಸಂಪನ್ಮೂಲ ಹದ್ದೆಯಲ್ಲಿ ಅಕ್ರಮ ದೂರು ದಾಖಲು

ಸುದ್ದಿಲೈವ್. ಕಾಂ/ಶಿವಮೊಗ್ಗ

2017 ರಲ್ಲಿ ಕೆಪಿಎಸ್ ಸಿ ವತಿಯಿಂದ ನಡೆದ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಸಹಶಿಕ್ಷಕರುಗಳ ಮತ್ತು‌ ಜಲಸಂಪನ್ಮೂಲ ವಿವಿಧ ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಇಬ್ಬರು ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್‌ ದಾಖಲಾಗಿದೆ.

2017 ದಾವಣಗೆರೆಯ ಬಾಷಾ ನಗರದ ಎಸ್.ಕೆ.ಎ.ಹೆಚ್‌. ಪಿ.ಯು ಕಾಲೇಜಿನಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಗಳ ಸಹಶಿಕ್ಷಕರುಗಳ ವಿವಿಧ ಹುದ್ದೆಗಳಿಗೆ ಕೆ.ಪಿ.ಎಸ್.ಸಿ ವತಿಯಿಂದ ನಡೆಯುತ್ತಿದ್ದ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿರುವ ಬಗ್ಗೆ ಉಪ ವಿಭಾಗಾಧಿಕಾರಿಗಳಿಗೆ ಮಾಹಿತಿ ಬಂದಿತ್ತು.

ಉಪವಿಭಾಗಾಧಿಕಾರಿಗಳು ಕಾಲೇಜಿಗೆ ಭೇಟಿ ನೀಡಿ ನೊಂದಣಿ ಸಂಖ್ಯೆ 1272102 ರ ಅಭ್ಯರ್ಥಿಯಾದ ತಿಪ್ಪೇಶ್ ನಾಯ್ಕ ಈತನು ತಾನು ಧರಿಸಿದ್ದ ಅಂಗಿಯ ಒಳಭಾಗದಲ್ಲಿ ಮೊಬೈಲ್ ಮದರ್ ಬೋರ್ಡ್, ಸ್ಪೀಕರ್ ಮತ್ತಿತರ ಎಲೆಕ್ಟ್ರಾನಿಕ್ ವಸ್ತುಗಳ ಸಹಾಯದಿಂದ ಪರೀಕ್ಷಾ ಅಕ್ರಮ ನಡೆಸುತ್ತಿದ್ದು, ಇದಕ್ಕೆ ಪ್ರದೀಪ ಮತ್ತು ಕೃಷ್ಣಾನಾಯ್ಕ ರವರುಗಳು ಸಹಕರಿಸಿರುತ್ತಾರೆ ಎಂದು ಆರೋಪ ಕೇಳಿ ಬಂದಿತ್ತು.

ಈ ಆರೋಪದ ಅಡಿಯಲ್ಲಿ ಅಭ್ಯರ್ಥಿ ತಿಪ್ಪೇಶ್ ನಾಯ್ಕ್ ವಿರುದ್ಧ ದಾವಣಗೆರೆ ಆಜಾದ್‌ ನಗರ ಪೊಲೀಸ್‌ ಠಾಣೆಯಲ್ಲಿ ಐ.ಟಿ ಕಾಯ್ದೆ ಹಾಗೂ ಐಪಿಸಿ ರೀತ್ಯಾ ಪ್ರಕರಣ ದಾಖಲಾಗಿರುತ್ತದೆ. ಪ್ರಕರಣದ ತನಿಖಾ ಕಾಲದಲ್ಲಿ, ಆರೋಪಿತರ ವಿಚಾರಣೆಯಿಂದ 2017 ರ ಸೆಪ್ಟೆಂಬರ್ ತಿಂಗಳಲ್ಲಿ,

ಕೆ.ಪಿ.ಎಸ್.ಸಿ. ವತಿಯಿಂದ ನಡೆದ ಜಲ ಸಂಪನ್ಮೂಲ ಇಲಾಖೆಯ ಸಹಾಯಕ/ಕಿರಿಯ ಅಭಿಯಂತರರ ನೇಮಕಾತಿ ಪರೀಕ್ಷೆಯಲ್ಲಿಯೂ ಸಹ ಅಭ್ಯರ್ಥಿಗಳಾದ ಹನುಮಂತನಾಯ, ಪಾಂಡುರಂಗನಾಯ್ಕ ಬಸವರಾಜ ನಾಯ್ಕ, ಲೋಕೇಶ್ ನಾಯ್ಕ, ಕುಕೀರ್ತಿ ಮತ್ತು ಪ್ರಕಾಶ್ ರವರುಗಳೂ ಸಹ ಆರೋಪಿತರೊಂದಿಗೆ ಶಾಮೀಲಾಗಿ ಡಿವೈಸ್ ಇರುವ ಬನಿಯನ್ ಹಾಕಿಕೊಂಡು ಪರೀಕ್ಷಾ ಅಕ್ರಮದಲ್ಲಿ ಭಾಗಿಯಾಗಿರುತ್ತಾರೆ.

ಅಲ್ಲದೆ ನೇಮಕಾತಿಯ ಪ್ರಾವಿಜನಲ್ ಆಯ್ಕೆ ಪಟ್ಟಿಯಲ್ಲಿ ಮೇಲ್ಕಂಡವರ ಹೆಸರು ಪ್ರಕಟವಾಗಿರುತ್ತದೆ. 2018 ರಲ್ಲಿ ಆಯ್ಕೆ ಪಟ್ಟಿಯನ್ನು ತಡೆ ಹಿಡಿಯುವ ಸಲುವಾಗಿ ವರದಿಯನ್ನು ಕೆ.ಪಿ.ಎಸ್.ಸಿ.ಗೆ ಸಲ್ಲಿಸಲಾಗಿರುತ್ತದೆ. ನಂತರ ಆರೋಪಿತರು ಪ್ರಕರಣವನ್ನು ಖುಲಾಸೆ ಮಾಡುವಂತೆ ಘನ ಉಚ್ಛ ನ್ಯಾಯಾಲಯಕ್ಕೆ ರಿಟ್ ಪೆಟಿಷನ್ ಸಲಿಸಿರುತ್ತಾರೆ,

ಘನ ನ್ಯಾಯಾಲಯವು 2021 ರಂದು ಆರೋಪಿತರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ, ಆರೋಪಿತರ ವಿರುದ್ಧ ಸಂಬಂಧಪಟ್ಟ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸುವಂತೆ ಆದೇಶಿಸಿದಾಗಿರುತ್ತದೆ.

ಘನ ನ್ಯಾಯಾಲಯದ ಆದೇಶದಂತೆ 2017 ರ ಸೆಪ್ಟೆಂಬರ್ ತಿಂಗಳಲ್ಲಿ ಕೆ.ಪಿ.ಎಸ್.ಸಿ. ವತಿಯಿಂದ ನಡೆದ ಜಲ ಸಂಪನ್ಮೂಲ ಇಲಾಖೆಯ ಸಹಾಯಕ/ಕಿರಿಯ ಅಭಿಯಂತರರ ನೇಮಕಾತಿ ಪರೀಕ್ಷೆಗೆ ಸಂಬಂಧಿಸಿದಂತೆ ಶಿವಮೊಗ್ಗದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಬಿ.ಹೆಚ್.ರಸ್ತೆ, ಶಿವಮೊಗ್ಯದಲಿ (ಪರೀಕ್ಷಾ ಕೇಂದ್ರ ಕೋಡ್ -10) ಪರೀಕ್ಷೆ ಬರೆದಿದ್ದ ನೊಂದಣಿ ಸಂಖ್ಯೆ. 1076819 ರಲಿ, ಕಂಡ ಕುಕೀರ್ತಿ ಬಿ.ಎಂ. ಮತ್ತು ನೊಂದಣಿ ಸಂಖ್ಯೆ 1076509 ರಲ್ಲಿ ಕಂಡ ಪ್ರಕಾಶ್ ರವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಾನ್ಯ ಕಾರ್ಯದರ್ಶಿಗಳು, ಕರ್ನಾಟಕ M ಲೋಕಸೇವಾ ಆಯೋಗ, ಬೆಂಗಳೂರು ರವರು ತಮ್ಮ ಪತ್ರ ಬರೆದಿದ್ದಾರೆ.

ಈ ಹಿನ್ನಲೆಯಲ್ಲಿ ಮಾನ್ಯ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಜಿಲ್ಲೆ ಶಿವಮೊಗ್ಗ ರವರು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಿ ಈಮೇಲ್ ಮುಖೇನ ಕಳುಹಿಸಿಕೊಟ್ಟ ಲೋಕಸೇವಾ ಆಯೋಗದ ಪತ್ರದ ಆಧಾರದ ಮೇಲೆ ಇಬ್ಬರ ವಿರುದ್ಧ ಕೋಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button