ರಾಜಕೀಯ

ನೂಪೂರ್ ಶರ್ಮಾ ಮತ್ತು ಜಿಂದಾಲ್ ನ್ನ ಬಂಧಿಸುವಂತೆ ಆಗ್ರಹಿಸಿ ಬೃಹತ್ ಪ್ರತಿಭಟನೆ

IMG_20220610_154814

ಸುದ್ದಿಲೈವ್. ಕಾಂ/ಶಿವಮೊಗ್ಗ

ಪ್ರವಾದಿ ಮೊಹ್ಮದ್ ಪೈಗಂಬರ್ ವಿರುದ್ಧ ಅವಹೇಳನ ಹೇಳಕೆ ನೀಡಿರುವ ಬಿಜೆಪಿ ವರ್ಕಾರೆ ನೂಪೂರ್ ಶರ್ಮ ಮತ್ತು ನವೀನ್ ಕುಮಾರ್ ಜಿಂದಾಲ್ ರನ್ನ ತಕ್ಷಣವೇ ಬಂಧಿಸಬೇಕೆಂದು ಆಗ್ರಹಿಸಿ ಮರ್ಕಾಜಿ ಸುನ್ನಿ ಜಮೈತುಲ್ ಉಲ್ಮ ಕಮಟಿ ಡಿಸಿ ಕಚೇರಿ ಎದುರಿನ ಮೈದಾನದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ನಾ.. ಗಬರಾವೋ.. ಮುಸಲ್ಮಾನೋ.. ಈ ಹಿಂದೂ ಸ್ಥಾನ್ ಹಮಾರ ಹೈ, ನರೇ ತಕ್ಬೀರ್ ಅಲ್ಲೋ ಹೋ ಅಕ್ಬರ್…, ಮುರ್ದಾಬಾದ್ ಮುರ್ದಾಬಾದ್ ಆರ್ ಎಸ್ ಎಸ್ ಮುರ್ದಾಬಾದ್ ಎಂಬ ಘೋಷಣೆ ಕೂಗಲಾಯಿತು. ನಂತರ ನೂಪೂರು ಶರ್ಮಾ ಮತ್ತು ಜಿಂದಾಲರವರ ಭಾವಚಿತ್ರಕ್ಕೆ ಚಪ್ಪಲಿಯಲ್ಲಿ ಹೊಡೆದು ಕಾಲಿನಲ್ಲಿ ತುಳಿಯುವ ಮೂಲಕ, ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.

ಅಫ್ತಾಬ್ ಪರ್ವೇಜ್ ಮಾತನಾಡಿ ಹಿಂದೂ ಮತ್ತು ಮುಸ್ಲೀಂ ಎಂದರೆ ಏನೆಂದು ತಿಳಿದುಕೊಂಡಿದ್ದೀರ ಭಾವೈಕ್ಯತೆಯ ಸಂಕೇತವಾಗಿದ್ದೇವೆ. ಇದನ್ನ ಒಡೆಯುವ ಕೆಲಸ ಮಾಡಬೇಡಿ. ಒಡೆಯಲು ಪ್ರಯತ್ನಿಸಬೇಡಿ ಎಂದು ಎಚ್ಚರಿಸಿದರು.IMG_20220610_154111

ಪ್ರವಾದಿ ಮೊಹ್ಮದ್ ರ ಬಗ್ಗೆ ಟೈಮ್ಸ್ ನೌವ್ ಡಿಬೇಟಿನಲ್ಲಿ ನೂಪರ್ ಶರ್ಮಾ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ. ಇದನ್ನ ನವೀನ್ ಕುಮಾರ್ ಜಿಂದಾಲ್ ಬೆಂಬಲಿಸಿದ್ದಾರೆ. ಇವರನ್ನ ತಕ್ಷಣ ಬಂಧಿಸಬೇಕೆಂದು ಆಗ್ರಹಿಸಿದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button