ಕ್ರೈಂ

ಆತ್ಮಹತ್ಯೆಗೆ ಮುಂದಾಗಿದ್ದ ಮಹಿಳೆಯ ರಕ್ಷಣೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಆತ್ಮಹತ್ಯೆ ಮಾಡಿಕೊಳ್ಳಲು ಹೊರಟ ಮಹಿಳೆಯನ್ನ ಸಾರ್ವಜನಿಕರು ರಕ್ಷಿಸಲಾಗಿದೆ. ರೈಲ್ವೆ ಹಳಿಗೆ ತಲೆಕೊಟ್ಟು ಸಾವನ್ನಪ್ಪಲು ಹೊರಟಿದ್ದ ಮಹಿಳೆಯ ಮನವೊಲಿಸಿ ಮಹಿಳಾ ಪೊಲೀಸ್ ಠಾಣೆಗೆ ಕರೆತಂದು ಬಿಡಲಾಗಿದೆ.

ಹೊರನಾಡಿನ ದೇವಸ್ಥಾನದಲ್ಲಿ ಕೆಲಸ ಮಾಡಿಕೊಂಡಿದ್ದ  ಮಂಜುಳಾ ಕೋಂ ಶಿವಕುಮಾರ್ ಭಟ್ ಕೌಟುಂಬಿಕ ಸಮಸ್ಯೆಯಿಂದ ಬೇಸತ್ತು ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಮುಂದಾಗಿದ್ದರು.

ಪತಿ ಪತ್ನಿ ಸಂಸಾರದಲ್ಲಿ ತನ್ನ ಅತ್ತೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿರುವ ಮಹಿಳೆ  ಗಂಡನೂ ಅತ್ತೆಯ ಮಾತನ್ನ ಕೇಳಿ ಆಗಾಗ ಹೊಡೆದು ಬಡಿದು ಮಾಡುತ್ತಿದ್ದನು ಎಂದು ದೂರಿದ್ದಾರೆ.

ಶಿವಮೊಗ್ಗದಲ್ಲಿ ಬೊಮ್ಮನಕಟ್ಟೆ ತನ್ನ ಅಕ್ಕನ ಮನೆಗೆ ಬಂದಿದ್ದ ಮಹಿಳೆ ಅಕ್ಕನ ಮಗಳು ಬೆಂಗಳೂರಿಗೆ ಹೋಗಿದ್ದಾಗ ತನ್ನ ಅತ್ತೆಯ ಕಿರುಕುಳ ತಾಳಲಾರದೆ ಶಿವಮೊಗ್ಗ ನಗರದ ಸೋಮಿನಕೊಪ್ಪಕ್ಕೆ ಹೋಗುವ ದಾರಿಯಲ್ಲಿ ಸಿಗುವ ರೈಲ್ವೆ ಹಳಿಯಮೇಲೆ ಪಶು ಕಾಲೇಜು ಪಕ್ಕದಲ್ಲಿ ಹೋಗುತ್ತಿದ್ದಾಗ ಸಾರ್ವಜನಿಕರು ತಡೆದು  ಶಿವಮೊಗ್ಗ ನಗರದ ಮಹಿಳಾ ಠಾಣೆಗೆ ಕರೆದುಕೊಂಡು ಬಂದು ಬಿಡಲಾಗಿದೆ.

ಮಹಿಳಾ ಠಾಣೆಯ ಸಿಬ್ಬಂದಿಗಳು ತ್ವರಿತಗತಿಯಲ್ಲಿ ಪತಿ ಮತ್ತು ಅವರ ಸಂಬಂಧಪಟ್ಟವರಿಗೆ ದೂರವಾಣಿ ಕರೆಮಾಡಿ ವಿಷಯಗಳನ್ನು ತಿಳಿಸಿದ್ದು ಮುಂದಿನ ಕ್ರಮ ಕರುಗಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button