ಸ್ಥಳೀಯ ಸುದ್ದಿಗಳು
ಜೂ.11 ರಂದು ಎಂಆರ್ ಎಸ್,ಶುಗರ್ ಫ್ಯಾಕ್ಟರಿ ಮೊದಲಾದ ಕಡೆ ವಿದ್ಯುತ್ ವ್ಯತ್ಯಯ

ಸುದ್ದಿಲೈವ್. ಕಾಂ/ಶಿವಮೊಗ್ಗ
ಮಂಗಳೂರು ವಿದ್ಯುತ್ಚಕ್ತಿ ಸರಬರಾಜು ಕಂಪನಿಯು ಎಂಆರ್ಎಸ್ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯಲ್ಲಿ ಪರಿವರ್ತಕ ಸ್ಥಳಾಂತರ ಕಾಮಗಾರಿ ಕೈಗೆತ್ತಿಕೊಂಡಿರುವುದರಿಂದ ಜೂ.11 ರಂದು ನಗರದ ಕೆಲ ಭಾಗದಲ್ಲಿ ವಿದ್ಯುತ್ ವ್ಯತ್ಯಯ ವಾಗಲಿದೆ
ಈ ಪ್ರದೇಶದ ವ್ಯಾಪ್ತಿಗೊಳಪಡುವ ಪ್ರದೇಶಗಳಲ್ಲಿ ಜೂನ್ 11 ರಂದು ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ ಎಂಆರ್ಎಸ್ ಕ್ವಾಟ್ರಸ್, ಹರಿಗೆ, ಶುಗರ್ ಫ್ಯಾಕ್ಟರಿ, ಮಲವಗೊಪ್ಪ, ದುಮ್ಮಳ್ಳಿ ರಸ್ತೆ, ಮಾರಿಯಮ್ಮ ಕಾಲೋನಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನಗರ ಉಪವಿಭಾಗ -1ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
