ಜೂ.12 ರಂದು ಕಾರ್ಯನಿರತ ಪತ್ರಕರ್ತ ಸಂಘದಿಂದ ಪತ್ರಕರ್ತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಸುದ್ದಿ ಲೈವ್.ಕಾಂ/ಶಿವಮೊಗ್ಗ
ನಗರದ ಮೆಟ್ರೋ ಯುನೈಟೆಡ್ ಹೆಲ್ಸ್ ಕೇರ್ ಆಸ್ಪತ್ರೆ, ಹೃದಯ್ ಸ್ಪೆಷಾಲಿಟಿ ಕ್ಲೀನಿಕ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘಶಿವಮೊಗ್ಗ ಜಿಲ್ಲಾ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯ ಪತ್ರಕರ್ತರಿಗಾಗಿ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಒಂದು ದಿನದ ಈ ಶಿಬಿರದಲ್ಲಿ ವಿಶೇಷವಾಗಿ ಹೃದಯ, ಮೂತ್ರಪಿಂಡ, ರಕ್ತದೊತ್ತಡ, ಮಧು ಮೇಹ.. ಸೇರಿದಂತೆ ವಿವಿಧ ಸಂಗತಿಯಗಳ ಕುರಿತು ತಜ್ಞ ವೈದ್ಯರಿಂದ ಅತ್ಯಾಧುನಿಕ ಯಂತ್ರಗಳ ಸಹಾಯದಿಂದ ತಪಾಸಣೆ ನಡೆಸಲಾಗುತ್ತಿದೆ.
ಈ ಶಿಬಿರದ ನೇತೃತ್ವವನ್ನು ಮೆಟ್ರೋ ಯುನೈಟೆಡ್ ಹೆಲ್ಸ್ ಕೇರ್ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ. ಪೃಥ್ವಿ, ಹೃದಯ್ ಸ್ಪೆಷಾಲಿಟಿ ಕ್ಲೀನಿಕ್ನ ಡಾ. ಮಹೇಶ್ ಮೂರ್ತಿಯವರು ವಹಿಸಿಕೊಂಡಿದ್ದಾರೆ.
ಈ ಶಿಬಿರವನ್ನು ಜು. 12ರ ಭಾನುವಾರ ಬೆಳಿಗ್ಗೆ 9.00ಕ್ಕೆ ವಿಧಾನ ಪರಿಷತ್ ಸದಸ್ಯರಾದ ಎಸ್. ರುದ್ರೇಗೌಡರು ಉದ್ಘಾಟಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್, ಡಿ. ಎಸ್. ಅರುಣ್, ಉದ್ಯಮಿ ಹಾಗೂ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಕೆ. ಈ. ಕಾಂತೇಶ್, ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾ„ಕಾರದ ಮಾಜಿಅಧ್ಯಕ್ಷ ಎಸ್. ಎಸ್. ಜ್ಯೋತಿ ಪ್ರಕಾಶ್ ಪಾಲ್ಗೊಳ್ಳಲಿದ್ದಾರೆ.
ಅಧ್ಯಕ್ಷತೆಯನ್ನು ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯರು, ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ. ವಿ. ಶಿವಕುಮಾರ್ ವಹಿಸಲಿದ್ದಾರೆ. ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ರಾಜ್ಯ ಸಮಿತಿ ನಿರ್ದೇಶಕ ಎನ್. ರವಿಕುಮಾರ್, ವಿಶೇಷ ಆಹ್ವಾನಿತರಾದ ಜೆ. ಪದ್ಮನಾಭ್ ಉಪಸ್ಥಿತರಿರಲಿದ್ದಾರೆ.
ಆರೋಗ್ಯ ತಪಾಸಣೆಯು ಸವಳಂಗ ರಸ್ತೆಯ ಶಿವಮೂರ್ತಿ ವೃತ್ತದ ಸಮೀಪದ ಮೆಟ್ರೋ ಯುನೈಟೆಡ್ ಹೆಲ್ಸ್ ಕೇರ್ ಆಸ್ಪತ್ರೆ ಹಾಗೂ ದುರ್ಗಿಗುಡಿ ಮೊದಲ ಪ್ಯಾರಲಲ್ ರಸ್ತೆಯ ಹೃದಯ್ ಸ್ಪೆಷಾಲಿಟಿ ಕ್ಲೀನಿಕ್ಗಳಲ್ಲಿ ನಡೆಯಲಿದೆ.
ಜಿಲ್ಲೆಯ ಪತ್ರಕರ್ತ ಮಿತ್ರರು ಸಕಾಲದಲ್ಲಿ ಆಗಮಿಸಿ, ಯಶಸ್ವಿಗೊಳಿಸಬೇಕಾಗಿ ಪ್ರಧಾನ ಕಾರ್ಯದರ್ಶಿ ವಿ. ಟಿ. ಅರುಣ್, ನಗರ ಕಾರ್ಯದರ್ಶಿ ಕೆ. ಆರ್. ಸೋಮನಾಥ್ ಕೋರಿದ್ದಾರೆ.
