ಕ್ರೈಂ
ಗೋಪಾಳದ ಮೋರ್ ಬಳಿ ಆಟೋ ಮತ್ತು ಬೈಕ್ ನಡುವೆ ಡಿಕ್ಕಿ ಬೈಕ್ ಸವಾರರಿಗೆ ಗಾಯ

ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗ ನಿನ್ನೆ ರಾತ್ರಿ ನಡೆದ ರಸ್ರೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರಿಗೆ ಗಾಯಗಳಾಗಿರುವ ಘಟನೆ ಗೋಪಾಳದ ಮೋರ್ ಬಳಿ ನಡೆದಿದೆ.
ನಿನ್ನೆ ರಾತ್ರಿ ಕೆಎ 17ವೈ 2896 ಕ್ರಮ ಸಂಖ್ಯೆಯ ಬೈಕ್ ನಲ್ಲಿ ಕಲೀಲ್ ಪಾಶ ಎಂಬ ವ್ಯಕ್ತಿ ಪತ್ನಿಯನ್ನ ಹಿಂಬದಿ ಕೂರಿಸಿಕೊಂಡು ಸೋಮಿನಕೊಪ್ಪದ ಕಡೆ ಹೋಗುವಾಗ ಗೋಪಾಳದ ಮೋರ್ ತಿರುವಿನ ಬಳಿ ಆಟೋಕ್ಕೆ ಗುದ್ದಿದ್ದಾನೆ.
ಕಲೀಲ್ ಪಾಶ ರಿಗೆ ಕಾಲಿನ ಮೂಳೆ ಮುರಿದಿದೆ. ಪತ್ನಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಮೋರ್ ತಿರುವಿನ ಬಳಿ ಆಟೋಗೆ ಗುದ್ದಿದ ಕಾರಣ ಬೈಕ್ ನುಜ್ಜುಗುಜ್ಜಾಗಿದೆ. ಆಟೋದ ಮುಂದಿನ ಗ್ಲಾಜು ಪುಡಿಯಾಗಿದೆ.
ಗಾತಾಳುಗಳನ್ನ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಲಾಗಿದೆ. ಪಶ್ಚಿಮ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
