ಮನೋರಂಜನೆ

ಈಶ್ವರಪ್ಪನವರ 74 ನೇ ಹುಟ್ಟುಹಬ್ಬಕ್ಕೆ ಸೈಕಲ್ ಜಾಥ-ಸೈಕಲ್ ತುಳಿದುಕೊಂಡೇ ಬಂದ ಪುತ್ರ ಕಾಂತೇಶ್

ಸುದ್ದಿಲೈವ್.ಕಾಂ/ಶಿವಮೊಗ್ಗ

ಶಾಸಕ  ಕೆ.ಎಸ್.ಈಶ್ವರಪ್ಪನವರ 74 ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಇಂದು ಬೆಳಿಗ್ಗೆ ಸೈಕಲ್ ಜಾಥವನ್ನ ಹಮ್ಮಿಕೊಳ್ಳಲಾಯಿತು.

ಬೆಕ್ಕಿನ ಕಲ್ಮಠದಲ್ಲಿ ಇಂದು ಮಾಜಿ ಸಚಿವರ ಹುಟ್ಟುಹಬ್ಬಕ್ಕೆ ಸಂಭ್ರಮ ಮತ್ತು ಸಡಗರ ತುಂಬಿತ್ತು. ಬೆಕ್ಕಿನಕಲ್ಮಠದ ಶ್ರೀಗಳಾದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು ನೇರಳೆ ಗಿಡ ನೆಡುವ ಮೂಲಕ

ಹಾಗೂ ಬಲೂನ್ ಹಾರಿಸುವ ಮೂಲಕ ಸೈಕಲ್ ಜಾಥಕ್ಕೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಶ್ರೀಗಳು ಹುಟ್ಟುಹಬ್ವದ ಜೊತೆ ಪರಿಸರದ ಕಾಳಜಿ ಅಗತ್ಯವೆಂದರು.

ನಂತರ ಪುತ್ರ ಕಾಂತೇಶ್, ವಿವಿಧ ಶಾಲೆಯ ಮಕ್ಕಳು ಜಾಥದಲ್ಲಿ ಭಾಗಿಯಾಗಿ ಜಾಥಕ್ಕೆ ಕಳೆತುಂಬಿದ್ದಾರೆ. ಜಾಥ ಕೋಟೆ ರಸ್ತೆ,ರಾಮಣ್ಣ ಶ್ರೇಷ್ಠಿ ಪಾರ್ಕ್,ಗಾಂಧಿ ಬಜಾರ್,ಏ ವೃತ್ತ, ನೆಹರೂ ರಸ್ತೆ ಮೂಲಕ ವೀರಶೈವ ಕಲ್ಯಾಣ ಮಂದಿರದಲ್ಲಿ ಜಾಥ ಕೊನೆಗೊಂಡಿದೆ.

ಈಶ್ವರಪ್ಪ ಮತ್ತು ಪುತ್ರ ಕಾಂತೇಶ್ ರವರ ಫೊಟೊ ಇರುವ ಟಿ ಶರ್ಟ್ ಧರಿಸಿ ಸೈಕಲ್ ಜಾಥದಲ್ಲಿ ಪಾಲ್ಗೊಂಡರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button