ಚೋರ್ ಬಜಾರ್ ನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಸೆಂದಿಲ್ ಸಾವು

ಸುದ್ದಿಲೈವ್.ಕಾಂ/ಶಿವಮೊಗ್ಗ
ಬಟ್ಟೆ ಮಾರ್ಕೆಟ್ ನಲ್ಲಿ ಮಾರಕಾಸ್ತ್ರಗಳಿಂದ ಹಲ್ಲೆಗೊಳಗಾದ ಸೆಂದಿಲ್ ಇಂದು ಬೆಳಗ್ಗಿನ ಜಾವ ಸಾವನ್ನಪ್ಪಿದ್ದಾನೆ. ಮಣಿಪಾಲಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ಬಪ್ಪಿರುವುದಾಗಿ ತಿಳಿದು ಬಂದಿದೆ.
ಎರಡು ದಿನಗಳ ಹಿಂದೆ ಬಟ್ಟೆ ಮಾರುಕಟ್ಟೆಯಲ್ಲಿ ಜೋಗಿ ಸಂತೋಷ್, ರಮೇಶ್, ಲೋಕೇಶ್ ಮತ್ತು ಮತ್ತೋರ್ವ ಅಪರಿಚಿತನೋರ್ವ ಸೆಂದಿಲ್ ನ ಬಟ್ಟೆ ಮಾರುಕಟ್ಟೆ ಅಂಗಡಿಗೆ ನುಗ್ಗಿ ಚಾಕುವಿನಿಂದ ಮತ್ತು ಮಚ್ಚಿನಿಂದ ಹಲ್ಲೆ ನಡೆಸಿದ್ದರು.
ತಕ್ಷಣವೇ ಸೆಂದಿಲ್ ನ್ನ ಮೆಗ್ಗಾನ್ ಗೆ ದಾಖಲಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಗೆ ದಾಖಲಿಸಲಾಗಿತ್ತು. ಇಂದು ಬೆಳಗ್ಗೆನ ಜಾವ 2 ಗಂಟೆಗೆ ಸೆಂದಿಲ್ ಅಸುನೀಗಿದ್ದಾನೆ. ನಾಲ್ವರು ಆರೋಪಿಯರ ಬಂಧನಕ್ಕೆ ಪೊಲೀಸ್ ಬಲೆಬೀಸಿದ್ದಾರೆ.
ಹಣದ ವಿಚಾರದಲ್ಲಿ ಕಿರಿಕ್
ಸಾಲ ಮತ್ತು ಖರ್ಚಿಗೆ ಹಣ ಕೊಡು ಎಂದು ಜೋಗಿ ಸಂತು ಸೆಂದಿಲ್ ಗೆ ಪೀಡಿಸುತ್ತಿದ್ದನು ಎಂಬುದು ಮೇಲ್ನೋಟಕ್ಕೆ ನಿಜವಾದರೂ ಇಬ್ಬರೂ ರೌಡಿ ಗ್ಯಾಂಗ್ ಗಳಾ ಟೀಂನ ಜೊತೆ ಇಬ್ಬರಿಗೂ ನಂಟಿತ್ತು ಎಂದು ಹೇಳಲಾಗುತ್ತಿದೆ.
9 ತಿಂಗಳ ಹಿಂದೆ ಸೆಂದಿಲ್ ಜೋಗಿ ಸಂತುವಿಗೆ ಮಚ್ಚು ಬೀಸಿ ಜೈಲಿಗೆ ಹೋಗಿ ಬಂದಿದ್ದನು. ಇದೇ ದ್ವೇಷದ ಹಿನ್ಬಲೆಯಲ್ಲಿ ಸಂತು ಸೆಂದಿಲ್ ವಿರುದ್ಧ ಸೇಡಿಗೆ ಕಾಯುತ್ತಿದ್ದನು ಎಂದು ಹೇಳಲಾಗುತ್ತಿದೆ. ಜೂ. 7 ರಂದು ಸೇಡಿಗೆ ಮೂಹೂರ್ತ ಫಿಕ್ಸ್ ಮಾಡಿಕೊಂಡಿದ್ದು ಜೋಗಿ ಸಂತು ಸೆಂದಿಲ್ ಮೇಲೆ ವ್ಯವಸ್ಥಿತವಾಗಿ ದಾಳಿ ನಡೆಸಿದ್ದಾನೆ.
ಇಬ್ಬರೂ ಸಹ ಹಣ ಪಡೆದರೆ ವಾಪಾಸ್ ಕೊಡ್ತ ಇರಲಿಲ್ಲವೆಂದು ಹೇಳುತ್ತಿದ್ದಾರೆ. ಈ ಎಲ್ಲಾ ಸತ್ಯಗಳು ಚೋರ್ ಬಜಾರ್ ನಲ್ಲಿನ ಇತರೆ ಬಟ್ಟೆ ಅಂಗಡಿಗಳನ್ನ ನಡೆಸುವವರಿಗೆ ಗೊತ್ತಿದ್ದರೂ ಬಾಯಿಬಿಡುತ್ತಿಲ್ಲವೆಂದ ಆರೋಪವೂ ಕೇಳಿ ಬರುತ್ತಿದೆ.
