ಪರಿಸರ ದಿನಾಚರಣೆ ಎಂದರೆ ಗಿಡ ನೆಡೋದಾ? ಗಿಡ ಕೀಳೋದ?

ಸುದ್ದಿಲೈವ್. ಕಾಂ/ತೀರ್ಥಹಳ್ಳಿ
ಪರಿಸರ ದಿನಾಚರಣೆ ಎಂದರೆ ಪರಿಸರದ ಜಾಗೃತಿ ಹಿನ್ನಲೆಯಲ್ಲಿ ಗಿಡ ನೆಟ್ಟು ನೀರು ಎರೆಯುತ್ತಾರೆ. ಆದರೆ ತೀರ್ಥಹಳ್ಳಿ ಪಟ್ಟಣಪಂಚಾಯಿತಿಯವರು ದಿನಾಚರಣೆಯ ದಿನದಂದೇ ಗಿಡವನ್ನ ಕಿತ್ತು ಹಾಕಿರುವುದು ಭಾರಿ ಚರ್ಚೆಗೆ ಮತ್ತು ಸಾರ್ವಜನಿಕರ ಆಕ್ರೋಶಕ್ಕೆ ಎಡೆಮಾಡಿಕೊಟ್ಟಿದೆ.
ರಾಜ್ಯದೆಲ್ಲೆಡೆ ಪರಿಸರ ದಿನಾಚರಣೆಯಂಗವಾಗಿ ಅಧಿಕಾರಿಗಳು ಶಾಲಾ ಮಕ್ಕಳು ಸಾರ್ವಜನಿಕರು ಗಿಡ ನೆಟ್ಟು ಎಲ್ಲೆಡೆ ಉತ್ತಮ ಪರಿಸರಕ್ಕೆ ಗಿಡ ನೆಡುವಂತೆ ಜಾಗೃತಿ ಮೂಡಿಸಿ,ಗಿಡ ನೆಡುವ ಕಾರ್ಯಕ್ರಮ ನಡೆಸಿದರೆ, ತೀರ್ಥಹಳ್ಳಿ ಪಟ್ಟಣ ಪಂಚಾಯಿತಿ ಪರಿಸರ ದಿನಾಚರಣೆಗೆ ವಿರುದ್ಧವಾಗುವ ಕಾರ್ಯಕ್ಕೆ ಕೈಹಾಕಿದೆ.
ಇಲ್ಲಿನ ಪಪಂನ ಮುಖ್ಯಾಧಿಕಾರಿ ಹಾಗೂ ಆಡಳಿತ ಪೌರ ಕಾರ್ಮಿಕರನ್ನು ಕಳುಹಿಸಿ ಬೆಳೆದ ಗಿಡವನ್ನು ಕಡಿದು ಹಾಕಿದ ಘಟನೆ ನಡೆದಿದೆ. ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ನಂತರ ರಸ್ತೆ ಬದಿಯಲ್ಲಿ ಸುಂದರ ತೀರ್ಥಹಳ್ಳಿಯನ್ನಾಗಿಸಲು ಆಗಿನ ಎಂಜಿನಿಯರ್ ಬಾಲಕೃಷ್ಣರವರು ವಿಶೇಷ ಕಾಳಜಿ ಹೊಂದಿರುವ ಹಿನ್ನಲೆಯಲ್ಲಿ ಪಟ್ಟಣಗಳ ಒಂದಿಷ್ಟು ಗಿಡಗಳನ್ನು ನೆಟ್ಟಿದ್ದರು.
ಮನೆ ಮುಂದೆ ಗಿಡ ಇದೆ ತ್ಯಾಜ್ಯ ಹಾಕುತ್ತಾರೆಂದು
ಪರಿಸರ ದಿನಾಚರಣೆ ಸಂದರ್ಭದಲ್ಲಿ ಆಡಳಿತ ವರ್ಗ ಆ ಗಿಡವನ್ನು ಕಡಿದು ಸ್ಥಳೀಯ ವರ್ತಕರು ಸಾರ್ವಜನಿಕರ
ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಅಲ್ಲಿರುವ ಸ್ಥಳೀಯ ಮನೆಯವರಿಗೆ ತೊಂದರೆಯಾಗುತ್ತದೆ ಎಂದರೆ ಗಿಡದ ಎಲೆಗಳನ್ನು,ಒಂದೆರಡು ರೆಂಬೆ ಕೊಂಬೆ ಕಡೆದು ಅದಕ್ಕೊಂದು ಸೂಕ್ತ ಭದ್ರತೆ ಮಾಡಬಹುದಿತ್ತು ಅದನ್ನು ಬಿಟ್ಟು ಸುಂದರವಾಗಿ ಬೆಳೆದ ಗಿಡವನ್ನು ಇಂತಹ ಪರಿಸರ ದಿನಾಚರಣೆ ಸಂದರ್ಭದಲ್ಲಿ ಗಿಡ ನೆಡುವುದನ್ನು ಬಿಟ್ಟು ಇರುವ ಗಿಡವನ್ನೇ ಕಡಿದಿರುವುದಕ್ಕೆ ಪಟ್ಟಣ ಪಂಚಾಯಿತಿ ಆಡಳಿತದ ಇಚ್ಛಾಶಕ್ತಿ ಇಲ್ಲದಿರುವ ಕ್ರಮಕ್ಕೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
