ಸರಗಳ್ಳತನ ಮಾಡಿದ ಮೂವರು ಆರೋಪಿಗಳು ಅರೆಸ್ಟ್

ಸುದ್ದಿಲೈವ್.ಕಾಂ/ಶಿವಮೊಗ್ಗ
ಹೊಳೆ ಬಸ್ ನಿಲ್ದಾಣದ ಬಳಿ ನಡೆದ ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನ ಕೋಟೆ ಪೊಲೀಸರು ಬಂಧಿಸಿದ್ದು ಎರಡು ದ್ವಿಚಕ್ರವಾಹನ, 225 ಗ್ರಾಂ ಬಂಗಾರದ ಆಭರಣಗಳನ್ನ ಅಮನತ್ತು ಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳು ರಾಜಸ್ಥಾನದವರಾಗಿದ್ದರೂ ವಿನೋಬ ನಗರ, ದೊಡ್ಡಪೇಟೆ, ಕೋಟೆ ಮತ್ತು ತುಂಗನಗರ ಪೊಲೀಸ್ ಠಾಣೆಗಳಲ್ಲಿ 6 ಸರಗಳ್ಳತನ ಪ್ರಕರಣ ದಾಖಲಾಗಿದ್ದವು. ಮೇ. 23 ರಂದು ಶೇಷಾದ್ರಿಪುರಂ ಮಹಿಳೆ ಶುಭಾರವರು ಅಂಗಡಿಯಿಂದ ಮನೆಗೆ ಹೋಗುವಾಗ ಇಬ್ವರು ಅಪರಿಚಿತರು ಬೈಕ್ ನಲ್ಲಿ ಬಂದು ಚಿನ್ನ ಅಪಹರಣ ಮಾಡಿ ಪರಾರಿಯಾಗಲು ಯತ್ನಿಸಿದ್ದರು.
ಒಬ್ಬನನ್ನ ಸಾರ್ವಜನಿಕರೇ ಬಂಧಿಸಿದ್ದು, ಇನ್ನೋರ್ವ ತುಂಗನದಿಯ ಸೇತುವೆ ಓಡಿ ಹೋಗಿ ಪರಾರಿಯಾಗಿದ್ದನು. ಇಬ್ವರನ್ನೂ ಕೋಟೆ ಪೊಲೀಸರು ಈಗ ಬಂಧಿಸಿದ್ದಾರೆ. ರಾಜಸ್ಥಾನದ ಜಾಲೋರ್ ಜಿಲ್ಲೆಯ ಸ್ಯಾಂಚೋರ್ ತಾಲೂಕಿನ ಬಾವರ್ಲ ಗ್ರಾಮದ ಅಶೋಕ್ ಕುಮಾರ್, ಇದೇ ರಾಜ್ಯದ ಮತ್ತೋರ್ವ ಆರೋಪಿ ಅಶ್ವನ್ ಪ್ರಜಾಪತಿ ಎಂದು ಗುರುತಿಸಲಾಗಿದೆ
ಇಂದು ಇನ್ನೊಬ್ಬ ಆರೋಪಿ ವಿಕಾಸ್ ಕುಮಾರ್,22 ವರ್ಷ, ದಸ್ತಗಿರಿ ಮಾಡಲಾಗಿದೆ. ಕೋಟೆ ಮತ್ತು ವಿನೋಬನಗರ ಪೊಲೀಸ್ ಠಾಣೆಯ ತಲಾ 01 ದ್ವಿ ಚಕ್ರ ವಾಹನ ಕಳವು ಪ್ರಕರಣವೂ ಸಹ ದಾಖಲಾಗಿದೆ. ಒಟ್ಟು 225 ಗ್ರಾಂ ತೂಕದ ಬಂಗಾರದ ಆಭರಣಗಳು ಮತ್ತು ಎರಡು ದ್ವಿ ಚಕ್ರ ವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿದೆ.
