ಪತಿಯ ಕಿರುಕುಳಕ್ಕೆ ಪತ್ನಿ ಆತ್ಮಹತ್ಯೆ-ಪತಿ ನ್ಯಾಯಾಂಗ ಬಂಧನಕ್ಕೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಗೋಪಾಳದ ರಾಜ ರಾಜೇಶ್ವರಿ ಶಾಲೆಯ ಬಳಿಯಿರುವ ಮನೆಯೊಂದರಲ್ಲಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದ್ದು, ಆತ್ಮಹತ್ಯೆಗೆ ಕಾರಣನಾದ ಪತಿಯನ್ನ ತುಂಗನಗರ ಪೊಲೀಸರು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
13 ವರ್ಷಗಳ ಹಿಂದೆ ತನುಜಾ ಶೆಟ್ಟಿಯನ್ನ ರತ್ನಗಿರಿ ನಿವಾಸಿ ರಮೇಶ್ ಶೆಟ್ಟಿಯೊಂದಿಗೆ ಮದುವೆ ಮಾಡಿಕೊಡಲಾಗಿತ್ತು. ಅನೂನ್ಯವಾಗಿದ್ದ ಸಂಸಾರದಲ್ಲಿ ಕೆಲ ಅನುಮಾನಗಳು ಮತ್ತು ದಬ್ಬಾಳಿಕೆಯ ಹಿನ್ನಲೆಯಲ್ಲಿ ತನುಜಾಶೆಟ್ಟಿ ಶಿವಮೊಗ್ಗದ ರಾಜರಾಜೇಶ್ವರಿ ಶಾಲೆಯ ಎದುರಿನ ಮನೆಯನ್ನ ಬಾಡಿಗೆ ಪಡೆದು ವಾಸವಾಗಿದ್ದರು.
ಈ ರೀತಿ ಏಕಾಂಗಿಯಾಗಿ ತನುಜಾ ಶೆಟ್ಟಿ ಏಕಾಏಕಿ ಶಿವಮೊಗ್ಗಕ್ಕೆ ಬಂದು ನೆಲೆಸಿರುವುದಕ್ಕೆ ಕುತೂಹಲ ಮೂಡಿಸಿತ್ತು. ಕೆಲಸಕ್ಕೆ ಸೇರಿರುವುದಾಗಿ ಸಮ್ಜಾಯಿಷಿ ನೀಡಿದ್ದರು. ಆದರೆ ಮೊನ್ನೆ ಮಹಿಳೆ ನೇಣುಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು.
ಈ ಬಗ್ಗೆ ವಿಷಯ ತಿಳಿದ ತನುಜಾಶೆಟ್ಟಿ ಸಹೋದರ ರವಿ ನಾರಾಯಣ ಶೆಟ್ಟಿ ತಂಗಿಯ ಆತ್ಮಹತ್ಯೆಯ ಕುರಿತು ಅನುಮಾನ ವ್ಯಕ್ತಪಡಿಸಿದ್ದರು. ಪತ್ನಿಯನ್ನ ಅನುಮಾನಿಸಿ ಹೊಡೆಯುವುದು, ಕಿರಿಕಿರಿ ಉಂಟು ಮಾಡುತ್ತಿದ್ದ ರಮೇಶ್ ಕಿರುಕುಳವನ್ನ ಸಹಿಸದ ಸಹೋದರಿ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಎಫ್ಐಆರ್ ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ತುಂಗನಗರ ಪೊಲೀಸರು ಪತಿ ರಮೇಶ್ ಶೆಟ್ಟಿರನ್ನ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಒಡಿಸಿದ್ದರು. ರಮೇಶ್ ಶೆಟ್ಟಿಗೆ ನ್ಯಾಯಾಲಯ ನ್ಯಾಯಾಂಗ ಬಂಧನಕ್ಕೊಳಪಡಿಸಿದೆ.
