ಕ್ರೈಂ

ಅಪ್ರಾಪ್ತೆ ಬಾಲಕಿಯ ಅಪಹರಣ-ಪತ್ತೆಗಾಗಿ ತೀವ್ರಗೊಂಡ ಶೋಧಕಾರ್ಯ

ಹೈಕೋರ್ಟ್ ನಲ್ಲಿ ದಾಖಲಾಯಿತು ಹೇಬಿಯಸ್ ಕಾರ್ಪಸ್

ಸುದ್ದಿಲೈವ್.ಕಾಂ/ಶಿವಮೊಗ್ಗ

ಅಪ್ರಾಪ್ತೆ ಬಾಲಕಿಯನ್ನ ಅಪಹರಣ ಮಾಡಿದ ಪ್ರಕರಣ ಈಗ ಹೈಕೋರ್ಟ್ ನ ಮೆಟ್ಟಿಲೇರಿದೆ. ಬಾಲಕಿಯ ಮನೆಯವರು ಹೈಕೋರ್ಟ್ ನಲ್ಲಿ  ಹೇಬಿಯಸ್ ಕಾರ್ಪಸ್ ಪ್ರಕರಣವನ್ನ ದಾಖಲಿಸಿದ್ದು, ಅಪಹರಣಕ್ಕೊಳಗಾದ ಮತ್ತು ಅಪಹರಣಕಾರರ ಪತ್ತೆಗಾಗಿ  ಪೊಲೀಸರು  ತಮ್ಮ ಶೋಧಕಾರ್ಯವನ್ನ ತೀವ್ರಗೊಳಿಸಿದ್ದಾರೆ.

ಶಿವಮೊಗ್ಗ ನಗರದಿಂದ ವರ್ಷಿತಾ ಎಂಬ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಬೆಂಗಳೂರು ವಾಸಿ ಲಿಂಗರಾಜ್ ಯಾಣೆ ವಿರಾಟ್ ಯಾನೆ ರಾಜು ಎಂಬ ಯುವಕ ಅಪಹರಣ ಮಾಡಿರುವುದಾಗಿ ಶಿವಮೊಗ್ಗ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಕುರಿತು ಅಪಹರಣವಾಗಿರುವ ಬಾಲಕಿ ಹಾಗೂ ಅಪರಾಧಿಯ ಕುರಿತು ಮಾಹಿತಿಯಿದ್ದಲ್ಲಿ ಪೊಲೀಸ್ ನಿರೀಕ್ಷಕರು, ಮಹಿಳಾ ಪೊಲೀಸ್ ಠಾಣೆ -9480803349/9449584739 ಅಥವಾ ಶಿವಮೊಗ್ಗ ಪೊಲೀಸ್ ನಿಯಂತ್ರಣ ಕೊಠಡಿ -9480803300 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

ಬಾಲಕಿ ಹರ್ಷಿತಾ ವಯಸ್ಸು ಸುಮಾರು 16 ವರ್ಷ, ಎತ್ತರ 135 ಸೆ.ಮೀ., ಗೋಧಿ ಮೈಬಣ್ಣ, ದುಂಡು ಮುಖ, ಸಾಧಾರಣ ಮೈಕಟ್ಟು ಹೊಂದಿರುತ್ತಾಳೆ.
ಲಿಂಗರಾಜ್ ವಯಸ್ಸು ಸುಮಾರು 26 ವರ್ಷ, ಎತ್ತರ 5.5 ಅಡಿ, ಸಾಧಾರಣ ಮೈಕಟ್ಟು, ದುಂಡುಮುಖ, ಎಣ್ಣೆಗೆಂಪು ಮೈಕಟ್ಟು, ಎಡಗೈ ಹಾಗೂ ಬಲಗೈ ಮೊಣಕೈ ಮೇಲೆ ಹಳೆಯ ಗಾಯನದ ಕಲೆಗಳಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾನೆ.

ಅಪಹರಣಕ್ಕೊಳಗಾದ ಬಾಲಕಿ ಹಾಗೂ ಅಪಹರಣಗಾರ ಲಿಂಗರಾಜ್ ಕುರಿತು ಮಾಹಿತಿ ನೀಡಿದವರಿಗೆ, ಹೆಸರನ್ನು ಗೌಪ್ಯವಾಗಿಟ್ಟು ಸೂಕ್ತ ನಗದು ಬಹುಮಾನ ನೀಡಲಾಗುವುದೆಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button