ಸುದ್ದಿ
ಬುಲೆಟ್ ಏರಿ ಬಂದ ರಾಘಣ್ಣ!

ಸುದ್ದಿಲೈವ್.ಕಾಂ/ಶಿಕಾರಿಪುರ
ಅಭಿವೃದ್ಧಿಯ ಹರಿಕಾರ ಸಂಸದ ಬಿ.ವೈ.ರಾಘವೇಂದ್ರ ಬುಲೆಟ್ ಚಲಾಯಿಸಿಕೊಂಡು ಬರುವ ಮೂಲಕ ಶಿಕಾರಿಪುರದ ಬಿಜೆಪಿ ಯುವಮೋರ್ಚಾದ ವತಿಯಿಂದ ಹಮ್ಮಿಕೊಳ್ಳಲಾದ ವಿಕಾಸ ತೀರ್ಥ ಬೈಕ್ ರ್ಯಾಲಿಗೆ ಚಾಲನೆ ನೀಡಿದರು.
ಶ್ರೀ ಹುಚ್ಚರಾಯ ಸ್ವಾಮಿ ದೇವಸ್ಥಾನದಿಂದ ಚುರ್ಚಿಗುಂಡಿ
ಸನ್ಯಾಸಿ ಕೊಪ್ಪದ ವರೆಗೆ ‘ವಿಕಾಸ ತೀರ್ಥ ಬೈಕ್ ರ್ಯಾಲಿಯಲ್ಲಿ ಗಾಗಲ್ಸ್ ಧರಿಸಿ ಸಂಸದರಾದ ಬಿ. ವೈ ರಾಘವೇಂದ್ರ ಅವರು ಉದ್ಘಾಟಿಸಿ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದರು.
ನಗರ ಯುವ ಮೋರ್ಚಾ ಅಧ್ಯಕ್ಷರಾದ ಬೆಣ್ಣೆ ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿನಯ್,ರಾಜು,ಸೂರ್ಯ, ಸೀನಣ್ಣ, ರವಿಕಾಂತ್ ಪುಟ್ಟ, ದಾದು,ರಾಘವೇಂದ್ರ, ಪೃಥ್ವಿ ನಾಗರಾಜ್ ವಸಂತ್, ಶ್ರೀನಿವಾಸ್, ತೇಜು, ಹೇಮಂತ್. ಹಾಲೇಶ್. ಮನೋಜ್ ಮತ್ತಿತರು ಉಪಸ್ಥಿತರಿದ್ದರು.
