ಸುದ್ದಿ
ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಾವಲಿನಲ್ಲಿ ಯುವತಿ ಬೆಂಗಳೂರಿಗೆ ಶಿಫ್ಟ್

ಸುದ್ದಿಲೈವ್.ಕಾಂ/ಶಿವಮೊಗ್ಗ
ಭದ್ರಾವತಿಯ 18 ವರ್ಷದ ಯುವತಿ ರಾಧಿಕ ಎಂಬ ವಿದ್ಯಾರ್ಥಿನಿಗೆ ತುರ್ತು ಲಿವರ್ ಕಸಿ ಅವಶ್ಯಕತೆ ಇದ್ದ ಹಿನ್ನಲೆಯಲ್ಲಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಅಂಬ್ಯಲೆನ್ಸ್ ನ ಬೆಂಗಾವಲಿನಲ್ಲಿ ಸಾಗಿಸಲಾಯಿತು.
ನಗರದ ಎನ್ ಹೆಚ್ ಆಸ್ಪತ್ರೆಯಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಮೂರು ಖಾಸಗಿ ಅಂಬ್ಯುಲೆನ್ಸ್ ಮೂಲಕ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಯಿತು.
ಈ ಮೊದಲು ಭದ್ರಾವತಿಯ ನಿರ್ಮಲ ಆಸ್ಪತ್ರೆಗೆ ರಾಧಿಕಾರನ್ನ ಸೇರಿಸಲಾಗಿತ್ತು. ರಕ್ತದ ಪರೀಕ್ಷೆ ನಡೆಸಿದ ನಂತರ ಯುವತಿಯ ಖಾಯಿಲೆ ಬಗ್ಗೆ ತಿಳಿದು ಬಂದಿದೆ. ಈ ಹಿನ್ನಲೆಯಲ್ಲಿ ಅವರನ್ನ ಎನ್ ಹೆಚ್ ಗೆ ಬರಲಾಯಿತು.
ಆಮೇಲೆ ಎನ್ ಹೆಚ್ ನಲ್ಲಿ ಚಿಕಿತ್ಸೆ ನೀಡಲಾಯಿತು ಲಿವರ್ ಡ್ಯಾಮೇಜಿನ ಬಗ್ಗೆ ಶಂಕಿಸಲಾಯಿತು. ನಂತರ ವೈದ್ಯರು ಐದು ದಿನದ ನಂತರ ವಾಸಿಯಾಗದಿದ್ದರೆ ಲಿವರ್ ಕಸಿ ಮಾಡಬೇಕಿದೆ ಎಂದು ತಿಳಿಸಿದ್ದರು. ಅದರಂತೆ ಇಂದು ಯವತಿಯನ್ನ ಜಿರೋ ಟ್ರಾಫಿಕ್ ನಲ್ಲಿ ಬೆಂಗಳೂರಿಗೆ ಸಾಗಿಸಲಾಗಿದೆ.
