ಕ್ರೈಂ
ಬಾಪೂಜಿ ಮೆಡಿಕಲ್ ಕಾಲೇಜಿನ ಮಾಲೀಕರಿಗೆ ಜೀವ ಬೆದರಿಕೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿರುವ ಬಾಪೂಜಿ ಮೆಡಿಕಲ್ ಕಾಲೇಜಿನಲ್ಲಿ 25 ಜನ ಅಪರಿಚಿತರು ಬಂದು ದಾಂಧಲೆ ನಡೆಸಿ ಕಾಲೇಜಿನಮಾಲೀಕರಿಗೆ ಜೀವ ಬೆದರಿಕೆ ಹಾಕಿರುವ ಘಟನೆ ವರದಿಯಾಗಿದೆ.
ಏಕಾಏಕಿ ದಿಡೀರನೇ 25 ಜನರ ಗುಂಪೊಂದು ಕಾಲೇಜಿನ ಬ್ಯಾನರ್ ಗಳನ್ನ ಹರಿದು ಸೆಕ್ಯುರಿಟಿಗಳಿಗೆ ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ನಂತರ ಸೆಕ್ಯೂರಿಟಿ ರೂಂ ಬಳಿ ಬಂದು ಕಾಲೇಜಿನ ಮಾಲೀಕ ಎಂ ವಿ ಪಿ ಆರಾಧ್ಯರಿಗೆ ಹೊರಗೆ ಬಂದರೆ ಕಲ್ಲಿನಲ್ಲಿ ಹೊಡೆದು ಸಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಈ ಹಿಂದೆ ಕಾಲೇಜಿನ ಗೋಡೆಯ ಮೇಲಿನ ಬರಹ ವಿಚಾರದಲ್ಲಿ ಕಿರಿಕ್ ಆಗಿತ್ತು. ಆಗಲೂ ಎಫ್ಐಆರ್ ದಾಖಲಿಸಿ ವಿದ್ಯಾರ್ಥಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿತ್ತು. ಮತ್ತೆ ಕಾಲೇಜಿನ ಮಾಲೀಕರಿಗೆ ಈಗ ಜೀವ ಬೆದರಿಕೆ ಹಾಕಲಾಗಿದೆ. ಈ ರೀತಿಯ ಘಟನೆಗಳು ಪದೇ ಪದೇ ನಡೆಯುತ್ತಿರುವುದು ಆತಂಕ ಮೂಡಿಸಿದೆ.
