ಸ್ಥಳೀಯ ಸುದ್ದಿಗಳು

7 ಗ್ರಾಮದ ಶಕ್ತಿದೇವಿಯ ಸಿಡಿ ಮಹೋತ್ಸವ-ಕಿಕ್ಕಿರಿದ ಜನ

ಸುದ್ದಿಲೈವ್.ಕಾಂ/ಶಿವಮೊಗ್ಗ

24 ವರ್ಷಗಳ ನಂತರ ನಡೆದ 7 ಗ್ರಾಮಗಳ ಶಕ್ತಿ ದೇವತೆಯಾದ ಹಿರೇಮಾವುದರಮ್ಮ ಸಿಡಿ ಜಾತ್ರೆಯು ಅದ್ಧೂರಿಯಿಂದ ನಡೆದಿದೆ. ದೇವಿಯು ಸಿಡಿ ಜಾತ್ರೆಗೆ ಅಪ್ಪಣೆ ನೀಡಿದ ಶ್ರೀನಿವಾಸ್ ಇಂದು ಸಿಡಿ ಕಟ್ಟಿಕೊಂಡು ಆಡಿದ್ದಾರೆ.

ಒಂದೇ ಕೊಂಡಿಯನ್ನ ಬೆನ್ನಿನ ಚರ್ಮಕ್ಕೆ ಕಟ್ಟಿಕೊಂಡು ಎತ್ತರಕ್ಕೆ ಹೋಗಿ ಅಲ್ಲಿ ಐದು ಸುತ್ತು ಬರುವುದೇ ಈ ಸಿಡಿ ಜಾತ್ರೆಯ ವಿಶೇಷವಾಗಿದೆ.

ಹೊನ್ನಾಳಿ ತಾಲೂಕು ಸಾಸ್ವಿಹಳ್ಳಿಯ ಶ್ರೀನಿವಾಸರಿಗೆ ಈ ಬಾರಿ ಸಿಡಿ‌ಆಡಿಸಲು ದೇವಿಯ ಬಳಿ ಅನುಮತಿ ಪಡೆದಿದ್ದಾರೆ. ಇಂದು ಶ್ರೀನಿವಾಸ‌ಬರೊಬ್ಬರಿ ಎರಡು ವರೆ ನಿಮಿಷ ಬೆನ್ನಿಗೆ ಕಬ್ಬಿಣದ ಹುಕ್ಕು ಸೇರಿಸಿಕೊಂಡು ಸಿಡಿ ಆಡಿದ್ದಾರೆ. ಈ ವೇಳೆ ಭಕ್ತರ ಮೇಲೆ ಭಂಡಾರವನ್ನ ಉಗ್ಗುವುದು ಉತ್ಸವದ ವಿಶೇಷವಾಗಿದೆ.

ಈ ಜಾತ್ರೆ ನೋಡಲು ಸುತ್ತಮುತ್ತಲಿನ ಗ್ರಾಮ, ದೂರದ ಊರಿನವರು ಸೇರಿದ್ದಾರೆ. ದೇವಿಯ ಸಿಡಿ ಮಹೋತ್ಸವವನ್ನ ಕಣ್ಣು ತುಂಬಿಸಿಕೊಂಡಿದ್ದಾರೆ. ಲಕ್ಷಾಂತರ ಭಕ್ತರು ಪಾಲ್ಗೊಂಡಿರ ಬಹುದು ಎಂದು ನಿರೀಕ್ಷಿಸಲಾಗಿದೆ.

ಈ ಜಾತ್ರೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ,ಗ್ರಾಮಾಂತರ ಶಾಸಕ ಅಶೋಕ್ ನಾಯ್ಕ್, ಎಂಎಲ್ ಸಿ ಅರುಣ್,ರುದ್ರೇಗೌಡ, ಆಯನೂರು ಮಂಜುನಾಥ್ ಮಾಜಿ ಶಾಸಕಿ ಶಾರದಾ ಪೂರ್ಯನಾಯ್ಕ್ ಮೊದಲಾದವರು ಭಾಗಿಯಾಗಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button