ಕ್ರೈಂ

ಯಡೂರು ಮಾಸ್ತಿಕಟ್ಟೆ ರಸ್ತೆಯ ಕರೆ ಕತ್ತಲೆಯ ಸೇತುವೆ ಸಮೀಪ ಲಾರಿ ಪಲ್ಟಿ

ಸುದ್ದಿಲೈವ್.ಕಾಂ/ಹೊಸನಗರ

ಯಡೂರು ಮಾಸ್ತಿಕಟ್ಟೆ ರಸ್ತೆಯ ಸುಳುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕರೆ ಕತ್ತಲು ಸೇತುವೆಯ ಸಮೀಪ ಟಿಂಬರ್ ಲಾರಿಯೊಂದು ಪಲ್ಟಿ ಹೊಡೆದಿದೆ.

ನಿರಂತರ ಅಪಘಾತಗಳು ಆಗುತ್ತಿದ್ದು ಇದೊಂದು ಅಪಘಾತವಾಗುವ ಅಪಾಯಕಾರಿ ಸ್ಥಳವಾಗಿರುತ್ತದೆ. ಪರಿಣಮಿಸಿದೆ.

ಈ ಪ್ರದೇಶದಲ್ಲಿ ಈ ತಿಂಗಳಲ್ಲಿ ಇದು ಮೂರನೆಯ ಅಪಘಾತ ವಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಈ ಪ್ರದೇಶದಲ್ಲಿ ಅನೇಕ ಅಪಘಾತವಾಗಿ ಜನರ ಜೀವಕ್ಕೆ ಹಾನಿಯಾಗಿರುತ್ತದೆ. 1ತಿಂಗಳ ಹಿಂದೆ ಬಸ್ಸೊಂದು ಅಪಘಾತವಾಗಿ ಓರ್ವರ ಪ್ರಾಣಾಪಾಯಕ್ಕೂ ಗಂಭೀರದ ಸ್ಥಿತಿಯಾಗಿತ್ತು.

ಲೋಕೋಪಯೋಗಿ ಇಲಾಖೆಯು ತಕ್ಷಣ ಈ ಬಗ್ಗೆ ಗಮನಹರಿಸಬೇಕು ಗ್ರಾಮಸ್ಥರ ಒತ್ತಾಯವಾಗಿದೆ .ಈ ಭಾಗದಲ್ಲಿ ಬ್ಯಾರಿಕೇಡ್ ಅಥವಾ ತಡೆಗೋಡೆ ನಿರ್ಮಿಸುವ ಅತಿ ಅಗತ್ಯ ಇದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ .

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button