ಕ್ರೈಂ

ಚೋರ್ ಬಜಾರ್ ನಲ್ಲಿ ಸೆಂದಿಲ್ ಮೇಲೆ ನಡೆದ ಮಾರಕಾಸ್ತ್ರಗಳಿಂದ ನಡೆದ ದಾಳಿಯಲ್ಲಿ ನಾಲ್ವರ ವಿರುದ್ಧ ಎಫ್ಐಆರ್

ಸುದ್ದಿಲೈವ್.ಕಾಂ/ಶಿವಮೊಗ್ಗ

ನಿನ್ನೆ ಚೋರ್ ಬಜಾರ್ ನಲ್ಲಿ ಸೆಂದಿಲ್ ಎಂಬ ವ್ಯಾಪರಿಯ ಮೇಲೆ ಮಾರಕಾಸ್ತ್ರಗಳಿಂದ ನಡೆದ ದಾಳಿಗೆ ಸಂಬಂಧಿಸಿದಂತೆ ಜೋಗಿ ಸಂತು, ರಮೇಶ್, ಲೋಕೇಶ್ ಮತ್ತು ಅಪರಿಚಿತ ವ್ಯಕ್ತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸೆಂದಿಲ್ ನ ಅಂಗಡಿ ಪಕ್ಕದ ಅಂಗಡಿಯವನಾದ ಲೋಕೇಶ್, ಸಹ ಈ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಈತ ಜೋಗಿ ಸಂತು ಮತ್ತು ರಮೇಶ್ ಹಾಗೂ ಅಪರಿಚಿತನಿಗೆ ಸಾಥ್ ನೀಡಿದ್ದಾನೆ.

ಚೋರ್ ಬಜಾರ್ ನಲ್ಲಿ ಸೆಂದಿಲ್ ಮನೋಜ್ ಟೆಕ್ಸ್ ಟೈಲ್ಸ್ ಎಂಬ ಅಂಗಡಿಯನ್ನ ನಡೆಸಿಕೊಂಡು ಬರುತ್ತಿದ್ದನು. ಇವರ ಅಂಗಡಿಯ ಮುಂದೆ ಜೋಗಿ ಸಂತು ಎಂಬುವನು ಅಂಗಡಿ ಹಾಕಿದ್ದನು. ಸಂತು ಎರಡು ವರ್ಷದ ಹಿಂದೆ ಈತ ಅಂಗಡಿ ಖಾಲಿ ಮಾಡಿಕೊಂಡು ಹೋಗಿದ್ದನು.

ಆದರೆ ಪದೇ ಪದೇ ಸೆಂದಿಲ್ ಬಳಿ ಬಂದು ಸಾಲ ಮತ್ತು ಖರ್ಚಿಗಾಗಿ ಹಣಕೊಡುವಂತೆ ಪೀಡಿಸಲು ಆರಂಭಿಸಿದ್ದಾನೆ. ಹಣ ಇಲ್ಲವೆಂದರೆ ಗಲಾಟೆ ಮಾಡುತ್ತಿದ್ದನು. ಇದಾದ ನಂತರ ಸೆಂದಿಲ್ ನ ಪಕ್ಕದಲ್ಲಿ ಲೋಕೇಶ್ ಎಂಬಾತನು ಅಂಗಡಿ ಹಾಕುವ ವಿಚಾರದಲ್ಲಿ ಗಲಾಟೆ ಮಾಡುತ್ತಿರುವುದಾಗಿ ಸೆಂದಿಲ್ ಎಫ್ಐಆರ್ ದಾಖಲಿಸಿದ್ದಾರೆ.

ನಿನ್ನೆ ಬೆಳಿಗ್ಗೆನೇ ಲೋಕೇಶ್ ಅಂಗಡಿಗೆ ಜೋಗಿ ಸಂತು,ರಮೇಶ್ ಮತ್ತು ಅಪರಿಚಿತನು ಬಂದು ಬೆಳಗ್ಗಿಂದಲೇ ಸೆಂದಿಲ್ ಅಂಗಡಿ ಸುತ್ತಮುತ್ತ ತಿರುಗಾಡುತ್ತಿರುವುದನ್ನ ಸೆಂದಿಲ್ ಗಮನಿಸಿದ್ದಾರೆ. ಆದರೆ ಸಂಜೆ 7 ಗಂಟೆಯ ವೇಳೆಗೆ ಜೋಗಿ ಸಂತು, ರಮೇಶ್ ಮತ್ತು ಅಪರಿಚಿತ ಏಕಾಏಕಿ ಸೆಂದಿಲ್ ಅಂಗಡಿಗೆ ನುಗ್ಗಿದ್ದಾರೆ.

ಜೋಗಿ ಸಂತು ಸೆಂದಿಲ್ ನ ಎದೆಗೆ ಮಚ್ಚು ಬೀಸಿದ್ದಾನೆ. ರಮೇಶ್ ಕಿಬ್ಬುಹೊಟ್ಟೆಗೆ ಭರ್ಜಿ ಇರಿದಿದ್ದಾನೆ. ಅಪರಿಚತನು ಎಡ ತೊಡೆಗೆ ಇರಿದಿದ್ದಾನೆ. ಹಣಕೊಡದೆ ಇರುವ ಹಿನ್ನಲೆಯಲ್ಲಿ, ಹಳೇದ್ವೇಷದ ಹಿನ್ನಲೆಯಲ್ಲಿ ಈ ಘಟನೆ ನಡೆದಿದೆ ಎಂದು ಸಂತ್ರಸ್ತ ಸೆಂದಿಲ್ ಹೇಳಿಕೆ ಮೇರೆ ಅಪರಿಚಿತ, ಜೋಗಿ ಸಂತು, ರಮೇಶ್‌ ಮತ್ತು ಲೋಕೇಶ್ ವಿರುದ್ಧವೂ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button