ಮಹಿಳೆಯನ್ನ ಕೆಟ್ಟದೃಷ್ಠಿಯಿಂದ ನೋಡಿದ ವ್ಯಕ್ತಿ ಮಾಡಿದ್ದೇನು?

ಸುದ್ದಿಲೈವ್.ಕಾಂ/ಭದ್ರಾವತಿ
ವಿವಾಹಿತ ಮಹಿಳೆಯನ್ನ ಕೆಟ್ಟದೃಷ್ಠಿಯಿಂದ ನೋಡಿದ ವ್ಯಕ್ತಿ ಆಕೆಗೆ ತೊಂದರೆಕೊಡುವುದಲ್ಲದೆ ದೂರು ಕೊಟ್ಟರೆ ಜೀವ ಸಮೇತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಹೊಸಮನೆ ಪೊಲೀಸ್ ಠಾಣ ವ್ಯಾಪ್ತಿಯ ಭದ್ರ ಕಾಲೋನಿಯಲ್ಲಿ ವಿವಾಹಿತ ಮಹಿಳೆಗೆ ಅದೇ ಕಾಲೋನಿಯ ಮುಂದಿನ ಸಾಲಿನ ನಿವಾಸಿ ನರಸಿಂಹ ಎಂಬಾತ ಮನೆ ಮುಂದೆ ಹೋಗುವಾಗ ಹಾಗೂ ಬೇರೆಡೆ ಸ್ಥಳಗಳಲ್ಲಿ ಕೆಟ್ಟದೃಷ್ಟಿಯಿಂದ ನೋಡುವ ಮೂಲಕ ಕಿರಿಕ್ ಉಂಟು ಮಾಡುತ್ತಿದ್ದನು.
ಮೇ.26 ರಂದು ಹನುಮಂತ ನಗರದ ಕ್ರಾಸ್ ಬಳಿ ಮಹಿಳೆ ಮತ್ತು ಪತಿ ಲಿಂಗರಾಜು ಒಟ್ಟಿಗೆ ವಾಹನದಲ್ಲಿ ಹೋಗುವಾಗ ರಸ್ತೆ ಅಡ್ಡಗಟ್ಟಿ ಲಿಂಗರಾಜುವಿನಗೆ ಅವ್ಯಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡು ತೋರಿಸಿ ಇದರಿಂದಲೇ ಹೊಡೆದು ಸಾಯಿಸುವುದಾಗಿ ಬೆದರಿಸಿದ್ದನು.
ಈ ಘಟನೆಗೆ ಕುರಿತಂತೆ ಮಹಿಳೆ ಮತ್ತುಲಿಂಗರಾಜು ಬಂದೋಬಸ್ತ್ ನೀಡಬೇಕೆಂದು ಕೋರಿ ಹೊಸಮನೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಆದರೆ ಈಪ್ರಕರಣ ರಾಜೀ ಆಗುವಮೂಲಕ ಸಮಸ್ಯೆ ಬಗೆಹರಿದಿತ್ತು.
ಆದರೆ ನಿನ್ನೆ ಮಹಿಳೆಯ ಮನೆಗೆ ಏಕಾಏಕಿ ನುಗ್ಗಿದ ನರಸಿಂಹ ಅಳವಡಿಸಿದ ಸಿಸಿ ಟಿವಿಯನ್ನ ಕಿತ್ತು ಹಾಕಿದ್ದಾನೆ. ಮಹಿಳೆಯ ಹತ್ತಿರ ಬಂದು ಅವ್ಯಾಚ್ಯ ಪದಗಳಿಂದ ಕರೆದು ನನ್ನ ವಿರುದ್ಧ ಇನ್ನೊಮ್ಮೆ ದೂರು ನೀಡಿದರೆ ಸುಮ್ಮನೆ ಬಿಡುವುದಿಲ್ಲವೆಂದು ಬೆದರಿಕೆ ಹಾಕಿ ಹೋಗಿದ್ದಾನೆ ಎಂದು ಮಹಿಳೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
