ಸುದ್ದಿ

ಕೇಂದ್ರ ಪಠ್ಯದಲ್ಲಿ ಕನ್ನಡ ಭಾಷೆಯನ್ನ ದ್ವಿತೀಯ ಅಥವಾ ತೃತೀಯ ಸ್ಥಾನಕ್ಕಿಳಿಸಿರುವುದನ್ನ ಖಂಡಿಸಿ ಸಿಎಂಗೆ ಮನವಿ

ಸುದ್ದಿಲೈವ್. ಕಾಂ/ಶಿವಮೊಗ್ಗ

ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಪ್ರಥಮ ಭಾಷೆಯ ಬದಲು 23ನೇ ಭಾಷೆಯಾಗಿ ಕನ್ನಡ ಕಲಿಸಲು ನಿಯಮ ರೂಪಿಸಿರುವುದನ್ನು ವಿರೋಧಿಸಿ.ಕರ್ನಾಟಕ ರಕ್ಷಣ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿತು.

ರಾಜ್ಯದ ಎಲ್ಲಾ ಕೇಂದ್ರಿಯ ಪಠ್ಯಕ್ರಮದ (ಸಿ.ಬಿ.ಎಸ್.ಇ., ಐ.ಸಿ.ಎಸ್.ಇ. ಮತ್ತು ಅಂತಾರಾಷ್ಟ್ರೀಯ ಮಂಡಲಿ) ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕಲಿಸಬೇಕೆಂದು ಈವರೆಗೆ ಇದ್ದ ನಿಯಮಕ್ಕೆ ತಿದ್ದುಪಡಿತಂದು ಇನ್ನು ಮುಂದೆ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಕಲಿಸಬೇಕೆಂಬ ಕರಡು ನಿಯಮಾವಳಿ ರೂಪಿಸಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ತಮ್ಮ ಸರ್ಕಾರವು ಕನ್ನಡ ಭಾಷೆಗೆ ತೀವ್ರ ಹಿನ್ನಡೆಯನ್ನುಂಟು ಮಾಡಿದ್ದು ಇದರಿಂದ ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಕಲಿಯುತ್ತಿರುವ ಮಕ್ಕಳ ಭವಿಷ್ಯವನ್ನು ಹಾಳುಮಾಡುವುದಲ್ಲದೆ ಆ ಶಾಲೆಗಳ ಮೇಲಿನ ಸರ್ಕಾರದ ನಿಯಂತ್ರಣ ಹೆಚ್ಚಿನ ರೀತಿಯಲ್ಲಿ ಕೈತಪ್ಪಲು ತಮ್ಮ ಸರ್ಕಾರವೇ ದಾರಿ ಮಾಡಿಕೊಡುತ್ತಿದೆ.

ಇದುವರೆಗೆ ಕನ್ನಡವನ್ನು ಪ್ರಥಮ ಹಾಗೂ ದ್ವುತೀಯ ಭಾಷೆಯಾಗಿ ಕಲಿಸಬೇಕೆಂಬ ನಿಯಮ ಇತ್ತು. ಬಹುತೇಕ ಶಾಲೆಗಳಲ್ಲಿ ಇಂಗ್ಲೀಷನ್ನು ಪ್ರಥಮ ಭಾಷೆಯಾಗಿ, ದ್ದುತೀಯ ಭಾಷೆ ಕನ್ನಡ ಆಗಿತ್ತು. ಕೇಂದ್ರಿಯ ನಿಯಮಾವಳಿಗಳ ಪ್ರಕಾರ ದ್ವುತೀಯ ಭಾಷೆಯನ್ನು 10 ವರ್ಷ ಕಡ್ಡಾಯವಾಗಿ ಓದಬೇಕೆಂಬ ನಿಯಮವಿದೆ.

ತೃತೀಯ ಭಾಷೆಯನ್ನು 4 ವರ್ಷ ಕಲಿಯಬೇಕೆಂಬ ನಿಯಮವಿದೆ. ಈಗ ತಮ್ಮ ನೀತಿಯಿಂದ ಕನ್ನಡ ಭಾಷೆ 3ನೇ ಸ್ಥಾನಕ್ಕೆ ಇಳಿದು ಕೇವಲ 4 ವರ್ಷಕ್ಕೆ ಸೀಮಿತ ಶಿಕ್ಷಣವಾಗುವುದನ್ನು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನ ಬಣ ತೀವ್ರವಾಗಿ ಖಂಡಿಸುತ್ತದೆ.ಬೇರೆ ರಾಜ್ಯಗಳಲ್ಲಿ ದ್ವಿತೀಯ ಭಾಷೆಯಾಗಿ ಎರಡು ಭಾಷೆಗಳನ್ನು ಅವಕಾಶ ಕಲ್ಪಿಸಲಾಗಿದೆ ಎಂದು ಆರೋಪಿಸಲಾಗಿದೆ.

ಅದೇ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ನೀತಿಯನ್ನು ಅನುಸರಿಸಿದರೆ ವಿದ್ಯಾರ್ಥಿಗಳಲ್ಲಿ ಕನ್ನಡ ಮತ್ತು ಹಿಂದಿ ಯಾವ ಭಾಷೆ ಕಲಿಯುವುದಕ್ಕೆ ಇಷ್ಟವಿದೆಯೋ ಆ ಭಾಷೆಯನ್ನು ಕಲಿಯಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಮತ್ತು 10 ವರ್ಷಗಳ ಕಾಲ ಓದಬೇಕು ಎಂಬ ನಿಯಮಕ್ಕೆ ಬೆಲೆ ಬಂದಂತಾಗುತ್ತದೆ ಎಂದು ಸರ್ಕಾರಕ್ಕೆ  ಸಂಘಟನೆಯು ಮನವಿಯಲ್ಲಿ ಗಮನ ಸಳೆಯುವುದುಕ್ಕಾಗಿ ರಾಜ್ಯಾದ್ಯಾಂತ ಈ ವಿಷಯಕ್ಕೆ ಸಂಬಂಧಪಟ್ಟಂತೆ ಮನವಿಯನ್ನು ಮತ್ತು ಕಳಕಳಿಯನ್ನು ತೋರುತ್ತದೆ. ಹಾಗಾಗಿ ತಮ್ಮ ಸರ್ಕಾರದಿಂದ ಕನ್ನಡಕ್ಕೆ ದಕ್ಕೆ ಬಾರದಂತೆ ಶಿಕ್ಷಣ ನೀತಿಯನ್ನು ಅನುಮೋದನೆ ಮಾಡಬೇಕಾಗಿ ವಿನಂತಿಸಲಾಗಿದೆ.

ರವಿಪ್ರಸಾದ್‌ ಎಂ. ಜಿಲ್ಲಾ ಉಸ್ತುವಾರಿ ಅಧ್ಯಕ್ಷ ರಘುನಂಧನ್, ಜಿಲ್ಲಾಧ್ಯಕ್ಷ ಮಧುಸೂಧನ್, ಜಿಲ್ಲಾ ಉಸ್ತುವಾರಿ ಅಧ್ಯಕ್ಷ ರವಿಪ್ರಸಾದ್‌ ಎಂ., ಜಿಲ್ಲಾ ಸಹಕಾರ್ಯದರ್ಶಿ ಶಿವಕುಮಾರ, ನೂರುಲ್ಲಾ ಖಾನ್ ಮೊದಲಾದವರು ಮನವಿ ನೀಡಲಾಗಿದೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button