ನಾನು ಹಿಂದು ಎನ್ನುವ ಸಿದ್ದರಾಮಯ್ಯ ಹಿಂದೂಗಳಿಗೆ ಶಕ್ತಿ ತುಂಬುವ ಕೆಲಸ ಯಾವಾಗ ಮಾಡಿದ್ದಾರೆ?ಚನ್ನಬಸಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ
ಪಠ್ಯ ಪುಸ್ತಕ ವಿಚಾರದಲ್ಲಿ ವ್ಯಾಪಕ ಚರ್ಚೆ ಪನಡೆಯುತ್ತಿದೆ. ಭಾರತೀಯ ಸಂಸ್ಜೃತಿಯನ್ನ ಎತ್ತಿಹಿಡಿಯುವ ಕೆಲಸ ಮಾಡಿದರ ಪಠಗಯ ಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷ ರೋಹಿತ್ ಚಕ್ರತೀರ್ಥರ ವಿರುದ್ಧ ಕಾಂಗ್ರೆಸ್ ಮತ್ತು ಸಾಹಿತಿಗಳು ಮಾಡುತ್ತಿದ್ದಾರೆ ಎಂದು ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ ಆರೋಪಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ಸರ್ಕಾರ ಅಧಿಕಾರದಲ್ಲಿದ್ದಾಗ ಭಾರತೀಯ ಸಂಸ್ಕೃತಿಯ ವಿರೋಧವಾದ ಮತ್ತು ಎಡ ಪಂಥೀಯ ಪರವಾದ ಇತಿಹಾಸವನ್ನ ತರಲಾಗಿದೆ ಎಂದು ಆರೋಪಿಸಿದರು.
ದೇಶದಲ್ಲಿ ಯಾವುದು ಸತ್ಯ ಎಂದು ಹೇಳಲು ಯೋಗ್ಯವಾಗಿಲ್ಲವೋ ಅದನ್ನ ಪಠ್ಯದಲ್ಲಿ ಬಿಂಬಿಸಲಾಗಿತ್ತು. ಚರಿತ್ರೆಯ ಇತಿಯಾಸವನ್ನ ಮತ್ತು ಶ್ರೇಷ್ಠತೆಯನ್ನ ಚಕ್ರತೀರ್ಥರ ಸಮಿತಿ ಎತ್ತಿ ಹಿಡಿದಿದೆ ಎಂದರು.
ದೇಶದಲ್ಲಿ ಅಟ್ಟಹಾಸ ಮೆರೆದ ಜನರನ್ನ ಬಿಂಬಿಸಿದ್ದು ಕಾಂಗ್ರೆಸ್, ಕಾಂಗ್ರೆಸ್ ದೇಶದ ಒಂದುಗೂಡಿಸುವ ವಂದೇ ಮಾತರಂ ನ್ನ ತುಷ್ಠೀಕರಣಕ್ಕೆ ಸ್ಥಗಿತಗೊಳಿಸಿತು. ಮುಸ್ಲೀಂರಿಗೆ ನೋವಾಗುತ್ತದೆ ಎಂಬ ಕಾರಣಕ್ಕೆ ವಂದೇ ಮಾತರಂನ್ನ ತನ್ನ ಸಭೆಯಲ್ಲಿ ಹಾಡುವುದನ್ಬೂ ನಿಲ್ಲಿಸಿತು. ಈ ಮೊದಲು ಕಾಂಗ್ರೆಸ್ ವಂದೇ ಮಾತರಂನ್ನ ಹಾಡ್ತಾ ಇತ್ತು ಎಂದು ಆರೋಪಿಸಿದರು.
ಪಠ್ಯ ಪುಸ್ತಕ ವಿಚಾರದಲ್ಲಿ ಯಾವುದುಬೇಡವೋ ಅದನ್ನ ತುರಕಲಾಯಿತು. ರಾಮನನ್ನ ವಿರೋಧ ಮಾಡಿ, ರಾಮನಿಗೆ ಚಪ್ಪಲಿ ಹಾರಹಾಕಿದವರ ಪಠ್ಯದಲ್ಲಿ ವಿಜೃಂಭಿಸಲಾಗಿದೆ. ಮಕ್ಕಳ ಭವಿಷ್ಯದ ಬಗ್ಗೆ ವಿರೋಧ ಸರಿಯಲ್ಲ ಎಂದರು.
20 ವರ್ಷದಲ್ಲಿ 3 ಬಾರಿ ಪಠ್ಯಪುಸ್ತಕದಲ್ಲಿ ಪರಿಷ್ಕರಿಸಲಾಗಿದೆ. ಚಕ್ರತೀರ್ಥರ ಪರಿಶ್ಕರಣೆ 4 ನೇ ಬಾರಿ ರೋಹಿತ್ ಚಕ್ರ ತೀರ್ಥ ನಡೆಸಿದೆ. ಮೂರು ಬಾರಿ ವಿರೋಧವ್ಯಕ್ತವಾದರೂ ಕಾಂಗ್ರೆಸ್ ವಿರೋಧದ ನಡುವೆಯೂ ಹಲವು ಪಠ್ಯ ಪುಸ್ತಕ ಪರಿಷ್ಕರಣೆಯನ್ನ ಜಾರಿಗೆ ತಂದವು. ಪಠ್ಯ ಪುಸ್ತಕವನ್ನ ಮೂರು ವಿಭಾಗಗಳಲ್ಲಿ ಪರಿಷ್ಕರಿಸಿ ಜಾರಿಗೆ ತರಲಾಗುತ್ತದೆ. ಪಠ್ಯ ಪರಿಷ್ಕರಣ,ರಚನೆ ಹಾಗೂ ಪರಿಶೀಲನಾ ಸಮಿತಿ ನೋಡಿಕೊಳ್ಳುತ್ತದೆ.
74 ವರ್ಷದಲ್ಲಿ ಸಳ್ಳು ಹೇಳಿಕೊಂಡೇ ಬಂದಿದೆ. ನೂರು ಬಾರಿ ಸುಳ್ಳು ಹೇಳಿ ನಿಜ ಎಂದು ಬಿಂಬಿಸಲಾಗಿದೆ. ಈಗ ಬಿಜೆಪಿ ಪರಿಷ್ಕರಿಸಿದರೆ ಕೇಸರೀಕರಣವಾಗಿದೆ ಎಂದು ಬಿಂಬಿಸಲಾಗುತ್ತದೆ. ವೈಚಾರಿಕತೆಯನ್ನ ಹಲ್ಲೆ ಮಾಡುವ ರೀತಿಯಲ್ಲಿ ಕಾಂಗ್ರೆಸ್ ದಾಳಿ ನಡೆಸಿದೆ. ಆ ಬಗ್ಗೆ ಯಾರೂ ಚಕಾರವೆತ್ತುತ್ತಿಲ್ಲ. ರಾಷ್ಟ್ರಧ್ವಜದಲ್ಲಿ ಕೇಸರಿ ಇದೆ. ಇದು ಕೇಸರಿಗೆ ಮಾಡುವ ಅಪಮಾನವೆಂದು ಹೇಳಿದರು.
ಕಾಂಗ್ರೆಸ್ ನ ನೀತಿ ಬದಲಾಗಬೇಕು. ಹಿಂದೂಗಳಿಗೆ ಸಹನೆ ಇದೆ ಹಾಗಾಗಿ ಬದುಕಿದ್ದೀರ. ಸಿದ್ದರಾಮಯ್ಯನವರು ನಾನೂ ಹಿಂದು ಎಂದು ಹೇಳುತ್ತೀರ ಅವರಿಗೆ ಶಕ್ತಿತುಂಬುವ ಕೆಲಸ ಯಾವಾಗ ಮಾಡಿದ್ದೀರ ಎಂದು ಪ್ರಶ್ನಿಸಿದರು. ಸೋನಿಯಾ ಗಾಂಧಿಗೆ ತೃಪ್ತಿ ಪಡಿಸಲು ಹಿಂದೂ ವಿರೋಧಿ ಹೇಳಿಕೆನೀಡುತ್ತೀರ ಇದು ಸರಿನಾ ಎಂದು ಪ್ರಶ್ನಿಸಿದರು.
ಔರಂಗಜೇಬ್ ನ ಸಂತಾನ ನೀವು ರೋಹಿತ್ ಚಕ್ರತೀರ್ಥರನ್ನ ವಿರೋಧಿಸಿದಿರಿ ಮತ್ತು ಕೆಲ ಸಾಹಿತಿಗಳು ತಮಗೆ ಬಂದ ಪ್ರಶಸ್ತಿಯನ್ನ ವಾಪಾಸ್ ನೀಡುತ್ತಿದ್ದಾರೆ.11 ಜನ ವಿರೋಧ ವ್ಯಕ್ತಪಡಿಸಿದ ಸಾಹಿತಿಯರಲ್ಲಿ 4 ಜನ ಪ್ರಶಸ್ತಿ ದೊರೆತ ಸಾಹಿತಿಗಳು ತಮ್ಮ ಪ್ರಶಸ್ತಿಯನ್ನು ವಾಪಾಸ್ ನೀಡುತ್ತಿದ್ದಾರೆ. ರಾಜ್ಯ ಪ್ರಶಸ್ತಿಯನ್ನ ವಾಪಾಸ್ ಕೊಟ್ರಿ ಹಣ ಯಾಕೆ ವಾಪಾಸ್ ನೀಡಲಿಲ್ಲ ಎಂದರು.
ಯಾರು ಪ್ರಶಸ್ತಿಯನ್ನ ವಾಪಾಸ್ ನೀಡಿದ್ದಾರೆ ಅವರ ಪ್ರಶಸ್ತಿಯನ್ನ ಸರ್ಕಾರ ವಾಪಾಸ್ ಪಡೆಯಬೇಕು. ಹಣನೂ ವಾಪಾಸ್ ಇಸ್ಕೊಬೇಕೆಂದರು. ಡಿ ಮಂಜುನಾಥ್ ರೋಹಿತ್ ಚಕ್ರತೀರ್ಥ ಬಗ್ಗೆ ಮಾತನಾಡುತ್ತಿದ್ದಾರೆ. ನೀವು ಏನು ಕಡಿದು ಕಟ್ಟೆ ಹಾಕಿದ್ದೀರಿ ಮೊದಲು ಹೇಳಿ ಎಂದು ಪ್ರಶ್ನಿಸಿದರು.
10 ಲಕ್ಷ್ಕ್ಕೂ ಹೆಚ್ಚು ಜನರನ್ನ ಭೇಟಿ ಮಾಡಿ ಪಠ್ಯ ಪುಸ್ತಕ ಸಮಿತಿ ಬದಲಾವಣೆ ತಂದಿತು. ಇದನ್ನ ವಿರೋಧಿಸುವುದು ಎಷ್ಟು ಸರಿ ಎಂದುಪ್ರಶ್ನಿಸಿದರು. ಆದರೆ ಪಿಯುಸಿ ಪಠ್ಯಪುಸ್ತಕ ಪರಿಷ್ಕರಣೆ ಆಗದೆ ಸರಕಾರ ವಿಸರ್ಜನೆ ಗೊಳಿಸಿರುವುದು ಎಷ್ಟು ಸರಿ ಎಂದು ಪತ್ರಕರ್ತರ ಪ್ರಶ್ನೆಯನ್ನ ತೇಲಿಸಿದರು.
