ಕಳ್ಳತನ ನಡೆಯದಿದ್ದರೂ ಎಫ್ಐಆರ್ ಆಗಿರುವ ಘಟನೆ ಕೇಳಿದ್ದೀರಾ?

ಸುದ್ದಿಲೈವ್.ಕಾಂ/ಶಿವಮೊಗ್ಗ
ಮನೆಯ ಬೀಗ ಒಡೆದರೂ ಕಳ್ಳತನವಾಗಿಲ್ಲ. ಬೀರುವಿನ ಬಟ್ಟೆ ಚಿಲ್ಲಾಪಿಲ್ಲಿಯಾದರೂ ಒಂದು ಗ್ರಾಂ ಚಿನ್ನಾಭರಣ ಕಳುವಾಗಿಲ್ಲ. ಆದರೂ ಎಫ್ಐಆರ್ ಆಗಿದೆ.
ಇಂತಹದ್ದೊಂದು ಪ್ರಕರಣ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ. ಬಸವೇಶ್ವರ ನಗರದ 7 ನೇ ತಿರುವು 1 ನೇ ಮುಖ್ಯರಸ್ತೆಯಲ್ಲಿರುವ ಮನಯೊಂದರಲ್ಲಿ ಮನೆಯ ಮುಂಬಾಗಿಲನ್ನ ಆಯುಧದಿಂದ ಮೀಟಿ ಕಳುವಿಗೆ ಯತ್ನ ನಡೆದಿದೆ.
ವರ್ಚಸ್ ಎಂಬ ಯುವಕ ಈ ಬಗ್ಗೆ ದೂರು ನೀಡಿದ್ದು ಮನೆಯ ಬಾಗಿಲು ಮುರಿದು ಬೀರುವಿನ ಬಟ್ಟೆಗಳು ಚೆಲ್ಲಾಪಿಲ್ಲಿಯಾದರೂ ಯಾವ ಕಳುವು ಪ್ರಕರಣ ನಡೆದಿಲ್ಲವೆಂದು ದೂರು ದಾಖಲಿಸಿದ್ದಾರೆ.
ಇಂಜಿನಿಯರ್ ಓದುತ್ತಿದ್ದ ವರ್ಚಸ್ ಎಂಬ ಯುವಕ ತಂದೆ ತಾಯಿ ವಿದೇಶಕ್ಕೆ ಹೋಗಿದ್ದು ತಾನು ಬೆಳಗಾವಿಯಲ್ಲಿರುವ ಅತ್ತೆ ಮನೆಗೆ ಹೋದವೇಳೆ ಈ ಕಳವು ಘಟನೆ ನಡೆದಿದೆ. ಪಕ್ಕದ ಮನೆಯವರು ಕರೆ ಮಾಡಿ ಮನೆಯ ಬಾಗಿಲು ತೆರೆದಿದೆ ಎಂದು ವಿಷಯ ತಿಳಿಸಿದ್ದಾರೆ.
ವರ್ಚಸ್ ತನ್ನ ಚಿಕ್ಕಪ್ಪನಿಗೆ ವಿಷಯ ತಿಳಿಸಿದ್ದರಿಂದ ಮನೆಯ ಬಳಿ ಬಂದು ನೋಡಿಕೊಂಡು ಹೋಗಿ ಮನೆಯ ಬಾಗಿಲು ತೆರೆದಿರುವುದಾಗಿ ವಿಷಯ ತಿಳಿಸುತ್ತಾರೆ. ವಿಷಯ ತಿಳಿದ ದಿನವೇ ವರ್ಚಸ್ ವಾಪಾಸ್ ಶಿವಮೊಗ್ಗಕ್ಕೆ ಬಂದು ಮನೆಯನ್ನ ನೋಡಿ ಮನೆಯ ಬಾಗಿಲನ್ನ ಮುರಿದು ಬೀರುವಿನಲ್ಲಿರುವ ಬಟ್ಟೆಗಳು ಚೆಲ್ಲಾಪಿಲ್ಲಿ ಮಾಡಲಾಗಿದೆ. ಆದರೆ ಯಾವ ವಸ್ತುವೂ ಕಳ್ಳತನ ಆಗಿಲ್ಲ ಎಂದು ಎಫ್ಐಆರ್ ದಾಖಲಿಸಿದ್ದಾರೆ.
ಈ ಮನೆಕಳ್ಳತನದ ಯತ್ನ ನಡೆದಿರುವುದಕ್ಕೆ ಪ್ರಕರಣವನ್ನ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
