ಕ್ರೈಂ
ಸಾಲದ ಒತ್ತಡದ ಹಿನ್ನಲೆಯಲ್ಲಿ ಮಹಿಳೆ ನಾಪತ್ತೆಯಾದರಾ?

ಸುದ್ದಿಲೈವ್.ಕಾಂ/ಶಿವಮೊಗ್ಗ
ಸಾಲದ ಒತ್ತಡದಿಂದಾಗಿ ಮಹಿಳೆಯೋರ್ವರು ಮನೆಬಿಟ್ಟು ಹೋಗಿರುವ ಘಟನೆ ನಡೆದಿದೆ. ತನ್ನ ಸಂಬಂಧಿಕರ ಮನೆಗೆ ಹೋದ ಮಹಿಳೆ ವಾಪಾಸ್ ಮನೆಗೆ ಬಂದಿಲ್ಲವೆಂದು ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಾಗಿದೆ.
ತಬುಸಮ್ ಎಂಬ 36 ವರ್ಷದ ವಿವಾಹಿತ ಮಹಿಳೆ ಹರಕೆರದಿಂದ ಹಳೇ ಮಂಡ್ಲಿಯಲ್ಲಿರುವ ಸಂಬಂಧಿಕರ ಮನೆಗೆ ಹೋಗಿ ನಂತರ ಮನೆಗೆ ವಾಪಾಸಾಗಿಲ್ಲವೆಂದು ಮಗ ಶಾಬಾಸ್ ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮೀಣ ಕೂಟ, ಎಲ್ಐಸಿ, ಚಿನ್ನಾಭರಣ ಗಿರವಿ ಇಟ್ಟು ಹಣ ಪಡೆದಿರುವ ಸಾಲ, ಕೈಸಾಲಗಳು ತೆಗೆದುಕೊಂಡಿರುವುದಲ್ಲದೆ, ರಿಯಾದ್ ನಲ್ಲಿರುವ ತಂದೆಯು ಸಹಿ ಹಾಕಿರುವ ಚೆಕ್ ಗಳನ್ನ ಅಡವಿಟ್ಟು ಸಹ ಸಾಲ ಪಡೆದಿರುವ ತಾಯಿ ತಬುಸಮ್ ಸಾಲ ಕಟ್ಟಲು ಸಾಧ್ಯವಾಗದ ಹಿನ್ನಲೆಯಲ್ಲಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
