ಚೋರ್ ಬಜಾರ್ ನಲ್ಲಿ ಅಂಗಡಿಗೆ ನುಗ್ಗಿ ವ್ಯಾಪಾರಿಗೆ ಚಾಕುವಿನಿಂದ ಇರಿತ

ಸುದ್ದಿಲೈವ್. ಕಾಂ/ಶಿವಮೊಗ್ಗ
ಹಳೇ ದ್ವೇಶದ ವಿಚಾರದಲ್ಲಿ ಗಾಂಧಿ ಬಜಾರ್ ನ ಚೋರ್ ಬಜಾರ್ ನಲ್ಲಿ ಅಂಗಡಿಗೆ ನುಗ್ಗಿ ವ್ಯಕ್ತಿಯೋರ್ವನನ್ನ ಚಾಕುವಿನಿಂದ ಇರಿಯಲಾಗಿದೆ.
ಸೆಂದಿಲ್ ಚಾಕು ಇರಿತಕ್ಕೆ ಒಳಗಾದವನಾಗಿದ್ದಾನೆ. ಸಂತೋಷ್ ಎಂಬಾತ ಚಾಕುವಿನಿಂದ ಇರಿದವನಾಗಿದ್ದಾನೆ. ಈ ಹಿಂದೆ ಸಂತೋಷ್ ಮತ್ತು ಸೆಂದಿಲ್ ನಡುವೆ ಜಗಳ ಉಂಟಾಗಿ ಸೆಂದಿಲ್ ಚಾಕುವಿನಿಂದ ಇರಿದಿದ್ದನು ಎನ್ನಲಾಗಿದೆ.
ಈ ದ್ವೇಷದ ಹಿನ್ಬಲೆಯಲ್ಲಿ ಸಂತೋಷ್ ಅಲಿಯಾಸ್ ಜೋಗಿ ಇಂದು ಸೆಂದಿಲ್ ಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ. ಸೆಂದಿಲ್ ಚೋರ್ ಬಜಾರ್ ನಲ್ಲಿ ಬಟ್ಟೆ ಅಂಗಡಿ ನಡೆಸುತ್ತಿದ್ದು, ಸಂತೋಷ್ ಈ ಹಿಂದೆ ಚೋರ್ ಬಜಾರ್ ನಲ್ಲಿ ಅಂಗಡಿ ನಡೆಸುತ್ತಿದ್ದನು ಎನ್ನಲಾಗಿದೆ. ಮತ್ತೊಂದು ಮೂಲದ ಪ್ರಕಾರ ಸೆಂದಿಲ್ ಹಣವನ್ನ ಸಂತೋಷ್ ಗೆ ಕೊಡಬೇಕಿತ್ತು ಎಂಬ ಮಾಹಿತಿ ಲಭ್ಯವಾಗಿದೆ.
ಈ ಎಲ್ಲಾ ಪ್ರಕರಣಗಳು ಇನ್ನೂ ಪ್ರಾಥಮಿಕ ಹಂತದಲ್ಲಿದ್ದು ಸಧ್ಯಕ್ಕೆ ಸೆಂದಿಲ್ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ತಿಳಿದುಬಂದಿದೆ. ದೊಡ್ಡಪೇಟಪೊಲೀಸರು ಸ್ಥಳಕ್ಕ ಭೇಟಿನೀಡಿದ್ದಾರೆ.
ಚೋರ್ ಬಜಾರ್ ನಲ್ಲಿ ಕೊಲೆ ಎಂಬ ಸುದ್ದಿ ಬಿರುಗಾಳಿಯಂತೆ ಹರಡಿದ್ದು ಸಧ್ಯಕ್ಕೆ ಸೆಂದಿಲ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂಬ ವರದಿ ಕೇಳಿಬರುತ್ತಿದೆ. ಜನ ಬಜಾರ್ ನಲ್ಲಿ ಈ ಸುದ್ದಿ ಹರಡಿತ್ತಿದ್ದಂತೆ ಚೋರ್ ಬಜಾರ್ ಕಡೆ ಬಿರುಗಾಳಿಯಂತೆ ದಾಂಗುಡಿ ಇಟ್ಟಿದ್ದಾರೆ. 8 ಗಂಟೆಗೆ ಅರ್ಧಕ್ಕೆ ಅರ್ಧ ಬಜಾರ್ ಬಂದಾಗಿದೆ.
