ಕ್ರೈಂ

ನಿಹಾಲ್ ಕೋಬ್ರಾ ಸಹಚರರಿಂದ ಮೀನುಗಾರರ ಮೇಲೆ ಹಲ್ಲೆ

IMG-20220607-WA0194

ಸುದ್ದಿಲೈವ್.ಕಾಂ/ಶಿವಮೊಗ್ಗ

ಮಂಡಗದ್ದೆ ನೆಲ್ಲಿಸರ ಕ್ಯಾಂಪಿನ ವಾಸಿಗಳ ಮೇಲೆ ನಿಹಾಲ್ ಕೋಬ್ರಾ ಅಂಡ್ ಗ್ಯಾಂಗ್ ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ನಿನ್ನೆ ಸಂಜೆ 6.30 ಗಂಟೆಗೆ ತೀರ್ಥಹಳ್ಳಿ ತಾಲ್ಲೂಕಿನ ಮಂಡಗದ್ದೆ ನೆಲ್ಲಿಸರ ಕ್ಯಾಂಪಿನ ವಾಸಿಗಳಾದ1) ಚೇತನ ಫಕೀರಪ್ಪ 26 ವರ್ಷ 2) ಜೀವಂತ ಬಿನ್ ರವಿ 28 ವರ್ಷ 3) ಪ್ರಸಾದ್ ಬಿನ್ ರಾಜು 28 ವರ್ಷ 4) ರವಿ ಬಿನ್ ಗಸ್ಸು 29 ವರ್ಷ ಇವರುಗಳ ಮೇಲೆ ಹಲ್ಲೆ ನಡೆದಿದೆ.

ಮೀನು ಹಿಡಿಯುವ ಕೆಲಸ ಎಲ್ಲರ ವಾಸ ನೆಲ್ಲಿಸರ ಕ್ಯಾಂಪ್ ಮಂಡಗದ್ದೆ ಹೋಬಳಿ ತೀರ್ಥಹಳ್ಳಿ ತಾಲೂಕು ಇವರುಗಳು ನಾಲ್ಕುಜನ ತಮ್ಮ ತಮ್ಮ ಬೈಕಿನಲ್ಲಿ ಮೀನು ಹಿಡಿಯುವ ಕೆಲಸ ಮುಗಿಸಿಕೊಂಡು ಸಂಜೆ 6:30 ಗಂಟೆ ವೇಳೆಯಲ್ಲಿ ಮಾಳೂರು ಸಮೀಪ ಸಿಕೆ ಹಳ್ಳ ರಸ್ತೆಯಲ್ಲಿ ಕ್ರಾಸ್ ಬಳಿ ಹೋಗುತ್ತಿದ್ದಾಗ ಸೊಸೈಟಿ ಹಾಲ್ ಮುಂದೆ  ನಿಹಾಲ್ ಕೋಬ್ರಾ ಮತ್ತು ಇತರೆ ನಾಲ್ಕು ಜನ ಸಹಚರರು ನಿಂತಿದ್ದರು.

ಮೀನು ಹಿಡಿಯುವರು ದಾರಿ ಬಿಡಿ ಸ್ವಲ್ಪ ಸೈಡಿಗೆ ಬನ್ನಿ ಅಂತ ಹೇಳಿದ ವಿಚಾರದಲ್ಲಿ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದ್ದು ನಂತರ ರಾಜಿ ಪಂಚಾಯಿತಿ ನಡೆಸಿದ್ದು ನಂತರ ಅಲ್ಲಿಂದ ಇದೇ ವಿಚಾರದಲ್ಲಿ ನಿಹಲ್ ಕೋಬ್ರಾ ಮತ್ತು ಸಹಚರರು ಇವರು ಬೈಕಿನಲ್ಲಿ ನೆಲ್ಲಿಸರ ಕ್ಯಾಂಪ್ ಕಡೆ ಹೋಗುತ್ತಿದ್ದ  ನಾಲ್ಕು ಜನರಿಗೆ ಮುಡುಬಾ ಚೌಡೇಶ್ವರಿ ದೇವಸ್ಥಾನ ಸಾಗುವಾನಿ ಪ್ಲಾಂಟೇಶನ್ ಬಳಿ ಬೈಕ್ ನಲ್ಲಿ ಬಂದ ನಿಹಾಲ್ ರಸ್ತೆ ಅಡ್ಡಕಟ್ಟಿದ್ದಾನೆ.

ಸಂಜೆ 7 ಗಂಟೆಗೆ ಶಿವಮೊಗ್ಗ ತೀರ್ಥಹಳ್ಳಿ ಮುಖ್ಯರಸ್ತೆಯಲ್ಲಿ ಜೆನ್ ಕಾರಿನಲ್ಲಿ ಹಾಗೂ ಪಲ್ಸರ್ ಬೈಕಿನಲ್ಲಿ ಬಂದ ನಿಹಾಲ್ ಕೋಬ್ರಾ ಮತ್ತು ಸಹಚರರು ಅಡ್ಡಗಟ್ಟಿ ಅವಾಚ್ಯವಾಗಿ ಬೈದು ಕೈಯಿಂದ ಹಾಗೂ ದೊಣ್ಣೆಯಿಂದ ಹೊಡೆದು ಮಾರಣಾಂತಿಕವಾಗಿ ಹಲ್ಲೆ ನಡೆಸಿರುತ್ತಾರೆ.  ಹಲ್ಲೆಗೊಳಗಾದ ಮೂರು ಜನರು ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುತ್ತಾರೆ.

ಹಲ್ಲೆ ನಡೆಯುತ್ತಿದ್ದ ವೇಳೆ ನಾಲಕ್ಕು ಜನರಲ್ಲಿ ರವಿ ಬಿನ್ ಗಸ್ಸು ತಪ್ಪಿಸಿಕೊಂಡು ಓಡಿಹೋಗಿ ಮಾಳೂರು ಪೊಲೀಸ್ ಠಾಣೆಗೆ ದೂರು ನೀಡಿದ ಮೇರೆಗೆ ಮಾಲೂರು ಪೊಲೀಸ್ ಠಾಣೆ ಪ್ರಕರಣ ದಾಖಲಾಗಿರುತ್ತದೆ

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button