ಪಾರ್ಕ್ ಬಡಾವಣೆಯಲ್ಲಿ ವಿದ್ಯಾರ್ಥಿಗಳನ್ನ ಅಡ್ಡಗಟ್ಟಿ ರಾಬರಿ!

ಸುದ್ದಿಲೈವ್.ಕಾಂ/ಶಿವಮೊಗ್ಗ
ಸ್ನೇಹಿತನನ್ನ ಕೆಎಸ್ಆರ್ ಟಿಸಿ ಬಸ್ ನಿಲ್ದಾಣಕ್ಕೆ ಬಿಟ್ಟು ವಾಪಾಸ್ ನವುಲೆಯ ಬಿಸಿಎಂ ಹಾಸ್ಟೆಲ್ ಗೆ ಹೋಗುವಾಗ ಇಬ್ವರು ವಿದ್ಯಾರ್ಥಿಗಳನ್ನ ತಡೆದು ದರೋಡೆ ಮಾಡಲಾಗಿದೆ. ಇಬ್ವರು ವಿದ್ಯಾರ್ಥಿಗಳ ಎರಡು ಮೊಬೈಲ್, 50 ಗ್ರಾಂ ಬೆಳ್ಳಿ ಚೈನ್ ಮತ್ತು ಬ್ಯಾಂಕ್ ಎಟಿಎಂ ನ್ನ ಕಿತ್ತುಕೊಂಡು ಹೋಗಿದ್ದಾರೆ.
ಈ ಘಟನೆ ಪಾರ್ಕ್ ಬಡಾವಣೆಯ ಖಾಸಗಿ ಆಸ್ಪತ್ರೆಯ ಬಳಿ ವಿದ್ಯಾರ್ಥಿಗಳ ವಾಹನವನ್ನ ಅಡ್ಡಕಟ್ಟಿ ಕನ್ಸರ್ವೆನ್ಸಿಯ ಬಳಿ ಕರೆದುಕೊಂಡು ಹೋಗಿ ರೆಯಲ್ ಮಿ 8 ಎಸ್ ಮೊಬೈಲ್, ರೆಡ್ ಮಿ ಮೊಬೈಲ್, ಎಸ್ ಬಿಐ ಬ್ಯಾಂಕ್ ನ ಎಟಿಎಂ ಮತ್ತು 50 ಗ್ರಾಂಬೆಳ್ಳಿಯ ಸರ ಸೇರಿ 38,800 ರೂ. ಹಣ ಮೌಲ್ಯದ ವಸ್ತುಗಳನ್ನ ಕಿತ್ತುಕೊಂಡುಹೋಗಿದ್ದಾರೆ.
ನವುಲೆಯ ಬಿಸಿಎಂ ಹಾಸ್ಟೆಲ್ ನಿಂದ ಸ್ನೇಹಿತ ಉಮೇಶ್ ನನ್ನ ದಾವಣಗೆರೆಗೆ ಹೋಗಲು ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣಕ್ಕೆ ವೀರೇಶ್ ಮತ್ತು ಭರತ್ ವಿ ಎಂಬ ವಿದ್ಯಾರ್ಥಿಗಳು ಆಕ್ಟೀವ್ ಹೊಂಡ ಬೈಕ್ ನಲ್ಲಿ ಕರೆದುಕೊಂಡು ಹೋಗಿ ವಾಪಾಸಾಗುವ ವೇಳೆ ಮೊನ್ನೆ ರಾತ್ರಿ 11-30 ಕ್ಕೆ ಗೋಪಿ ವೃತ್ತದ ಬಳಿ ಬೈಕ್ ನಲ್ಲಿ 3 ಅಪರಿಚಿತರು ಬಂದು ವಾಹನ ನಿಲ್ಲಿಸುವಂತೆ ಹೇಳಿದ್ದಾರೆ.
ವಾಹನ ನಿಲ್ಲಸದ ಭರತ್ ಬಾಲರಾಜ್ ಅರಸ್ ರಸ್ತೆ ಮೂಲಕ ಚಲಿಸಿ ನಂತರ ಜ್ಯುವೆಲ್ ರಾಕ್ ಹೋಟೆಲ್ ಬಳಿ ಹೋಗಿ ಪಾರ್ಕ್ ಎಕ್ಸಟೆನ್ಷನ್ ಗೆ ಬಂದಿದ್ದಾರೆ. ಇವರ ಬೆನ್ನು ಬಿಡದ ಮೂವರು ಅಪರಿಚಿತರು ಪಾರ್ಕ್ ಎಕ್ಸಟೆನ್ಷನ್ ಬಳಿ ಅಪರಿಚಿತರು ವಿದ್ಯಾರ್ಥಿಗಳನ್ನ ಅಡ್ಡಹಾಕಿ ಇವರ ಬಳಿ ವಸ್ತುಗಳನ್ನ ಕಿತ್ತುಕೊಂಡು ಹೋಗಿದ್ದಾರೆ.
ವಿದ್ಯಾರ್ಥಿ ಭರತ್ ಘಟನೆ ಕುರಿತು ಜಯನಗರ ಪೊಲೋಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
