ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಸಂತ್ರಸ್ತ್ರರ ಕುಟುಂಬ ದೊಡ್ಡಪೇಟೆ ಠಾಣೆಗೆ ಬಂದಿದ್ದೇಕೆ?

ಸುದ್ದಿಲೈವ್.ಕಾಂ/ಶಿವಮೊಗ್ಗ
ಫೆ.28 ರಂದು ಬೆಳಿಗ್ಗೆ 11-15 ರ ಸಮಯದಲ್ಲಿ ಹೊಸಮನೆ 5 ನೇ ತಿರುವಿನಲ್ಲಿ ವ್ಯಕ್ತಿಯೋರ್ವ ಪೆಟ್ರೋಲ್ ಸುರಿದುಕೊಂಡು ಸಾವನ್ನಪ್ಪಿದ ಪ್ರಕರಣಕ್ಕೆ ಮೂರು ತಿಂಗಳು ತುಂಬಿದೆ.
ಈ ಮೂರು ತಿಂಗಳ ನಂತರ ಪ್ರಕರಣದ ಪ್ರಮುಖ ಆರೋಪಿ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬಂದಿದ್ದು ಸಂತ್ರಸ್ತರ ಕುಟುಂಬವೂ ಬಂದು ಆಕೆಯನ್ನ ಭೇಟಿಯಾಗಲು ಅವಕಾಶ ಮಾಡಿಕೊಡಿ ಎಂದು ಕೋರಿಕೊಂಡಿದೆ.
ಈ ಪ್ರಕರಣದಲ್ಲಿ ಮಂಜುನಾಥ್ ಮಹಿಳೆಗೆ 25 ಲಕ್ಷ ಹಣಕೊಟ್ಟಿದ್ದು, ಈ ಹಣ ವಾಪಾಸ್ ಕೊಡದೆ ಇರುವ ಹಿನ್ನಲೆಯಲ್ಲಿ ಪೆಟ್ರೋಲ್ ಸುಟ್ಟಿಕೊಂಡು ಆತ್ಮಹತ್ಯೆ ಮಾಡಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಅನ್ನಪೂರ್ಣ ಯಾನೆ ಸುನೀತಾ ಇಂದು ದೊಡ್ಡಪೇಟೆ ಪೊಲೀಸ್ ಠಾಣೆಗೆ ಹೈಕೋರ್ಟ್ ನಿಂದ ನಿರೀಕ್ಷಣ ಜಾಮೀನು ತೆಗೆದುಕೊಂಡು ಬಂದು ಠಾಣೆಯ ಐಒ ಮುಂದೆ ಹಾಜರಾಗಿದ್ದಾರೆ.
ಇದೆಲ್ಲಾ ಕಾನೂನು ಪ್ರಕಾರ ನಡೆಯುತ್ತಿರುವ ಪ್ರಕರಣ ಕುತೂಹಲಕಂಡಿದ್ದು ಯಾಕೆ ಎಂದರೆ ಆತ್ಮಹತ್ಯೆ ಮಾಡಿಕೊಂಡ ಮಂಜುನಾಥ್ ಕುಟುಂಬ ದೊಡ್ಡಪೇಟೆ ಠಾಣೆಯಲ್ಲಿ ಪ್ರತ್ಯಕ್ಷರಾಗಿ ಗಂಡ ಕೊಟ್ಟ ಹಣವನ್ನ ಕೊಡು ಎಂದು ಆಗ್ರಹಿಸಿದ್ದಾರೆ. ನಾನು ಆತನೊಂದಿಗೆ ಹರಬಲ್ಲೈಫ್ ಗಾಗಿ ಓಡಾಡಿರುವುದೇ ವಿನಃ ಬೇರೆಯಾವ ಹಣ ಬಳಸಿಕೊಂಡಿಲ್ಲವೆಂದು ಮಹಿಳೆ ಅನ್ನಪೂರ್ಣ ಉತ್ತರಿಸಿದ್ದಾರೆ.
ಆದರೆ ಈ ಉತ್ತರಕ್ಕೆ ತೃಪ್ತಿಪಡದ ಮೃತ ಮಂಜುನಾಥನ ಕುಟುಂಬ ಮಹಿಳೆಗೆ ಹಿಡಿಶಾಪ ಹಾಕಿದ್ದಾರೆ. ನಮಗೆ ನ್ಯಾಯಬೇಕು. ನನ್ನ ಗಂಡನನ್ನ ಬುಟ್ಟಿಗೆ ಹಾಕಿಕೊಂಡು ಗಂಡನ ಮನೆಯ ಆಸ್ತಿ ಮಾರಿದ ಹಣದಲ್ಲಿ 25 ಲಕ್ಷ ರೂ. ಹಣ ಹೊಡೆದುಕೊಂಡಿದ್ದಾರೆ. ಈ ಹಣ ನಮಗೆ ವಾಪಾಸ್ ಕೊಡಿಸಬೇಕೆಂದು ಕುಟುಂಬ ಆಗ್ರಹಿಸಿದೆ.
