ಕ್ರೀಡಾಕೂಟದ ಬಗ್ಗೆ ಮಾಜಿ ಸಚಿವರ ಮತ್ತು ಗ್ರಾಪಂ ಸದಸ್ಯರ ಹೇಳಿಕೆ ಏನು ಗೊತ್ತಾ?

ಸುದ್ದಿಲೈವ್.ಕಾಂ/ಶಿವಮೊಗ್ಗ
ಪಂಚಾಯಿತಿ ಕ್ರೀಡೋತ್ಸವದಲ್ಲಿ ಗ್ರಾಮ ಪಂಚಾಯಿತಿಯ ವರ್ಗ-1 ರಿಂದ 5 ಸಾವಿರ ರೂ. ಸಂಗ್ರಹ ಮಾಡಿರುವ ಬಗ್ಗೆ ಆಕ್ಷೇಪಣೆ ಕೇಳಿ ಬಂದಿದೆ. ಈ ಬಗ್ಗೆ ಮಾಜಿ ಸಚಿವ ಯಾವ ಆಕ್ಷೇಪಣೆ ಇಲ್ಲವೆಂದು ಹೇಳಿದರೆ ಗ್ರಾಪಂ ಸದಸ್ಯ ಸರ್ಕಾರದ ಅನುದಾನ ಹಣ ತಂದು ಕ್ರೀಡಾಕೂಟ ನಡೆಸಬೇಕೆಂದು ಹೇಳಿಕೆ ನೀಡಿದ್ದಾರೆ.
ಈ ಕ್ರೀಡೋತ್ಸವಕ್ಕೆ ಎಲ್ಲಾ ಗ್ರಾಮ ಪಂಚಾಯಿತಿಯವರು ಹಣ ನೀಡಿ ಸಂತೋಷದಿಂದ ಸದಸ್ಯರು ಭಾಗಿಯಾಗಿದ್ದಾರೆ. ಆದರೆ, ಮಾಧ್ಯಮಗಳು ನೀವುಗಳೇ ಯಾವಾಗಲೂ ನಕರಾತ್ಮಕವಾಗಿ ಹೇಳುತ್ತೀರಿ. ಒಂದೊಳ್ಳೆ ಕೆಲಸವನ್ನ ಬೆಂಬಲಿಸಿ. ನಕರಾತ್ಮಕವಾಗಿ ಬಿಂಬಿಸೋದು ಸರಿಯಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಗರಂ ಆದರು.
ಆದರೆ ಹೊಸೂಡಿ ಗ್ರಾಮ ಪಂಚಾಯಿತಿ ಸದಸ್ಯ ಯುವರಾಜ್ ಮಾಧ್ಯಮಗಳಿಗೆ ಮಾತನಾಡಿ ವರ್ಗ-1 ರಲ್ಲಿ ಕ್ರೀಡಾಕೂಟಕ್ಕೆ ಹಣ ಸಂಗ್ರಹಿಸಲಾಗಿದೆ. ಸರ್ಕಾರದಿಂದ ಅನುದಾನ ತಂದು ಕ್ರೀಡಾಕೂಟ ನಡೆಸಲಿ ನಮ್ಮ ಆಕ್ಷೇಪಣೆ ಇಲ್ಲ. ಒಂದೊಂದು ಪಂಚಾಯಿತಿಯಿಂದ 15 ಸಾವಿರ ರೂ ಬಟ್ಟೆ ಖರೀದಿಗೆ ಖರ್ಚನ್ನ ಹಾಕಲಾಗಿದೆ.
ಪ್ರತಿದಿನ ಎದ್ದರೆ ಪಂಚಾಯಿತಿಯ ಮೋರಿ ಸ್ವಚ್ಛತೆಗೆ ಹಣವಿಲ್ಲ. ಕುಡಿಯುವ ನೀರಿನ ವ್ಯವಸ್ಥೆಯಿಲ್ಲ. ಆದರೆ ಹಣಸಂಗ್ರಹಕ್ಕೆ ಮತ್ತು ಬಟ್ಟೆ ಖರೀದಿ ಮಾಡಲು ಯಾವ ಗ್ರಾಮ ಪಂಚಾಯಿತಿಯಲ್ಲಿ ಸಭೆ ನಡೆಸಿ ಚರ್ಚೆ ನಡೆಸಿಲ್ಲ. ಆದರೆ ಏಕಾಏಕಿ ಈ ರೀತಿ ಸಂಗ್ರಹಿಸಲಾಗಿದೆ ಖಡ್ಡಾಯವಾಗಿ ಬರುವಂತೆ ಆದೇಶ ಮಾಡಲಾಗಿದೆ ಎಂದು ಆರೋಪಿಸಿದರು.
