ಯಾಕೆ ನಮ್ಮಲ್ಲಿನ ರಾಜರು ಹುಲಿಯಾಗಿರಲಿಲ್ವಾ?ಈಶ್ವರಪ್ಪ

ಸುದ್ದಿಲೈವ್.ಕಾಂ/ಶಿವಮೊಗ್ಗ
ಹಿಂದೆ ಬರಗೂರು ರಾಮಚಂದ್ರಪ್ಪ ಪಠ್ಯಪುಸ್ತಕ ಸಮಿತಿ ಅಧ್ಯಕ್ಷರಾದಾಗ ಅವರ ವಿಚಾರಕ್ಕೆ ತಕ್ಕಂತೆ ಪಠ್ಯ ಪುಸ್ತಕ ಗಳನ್ನು ಜಾರಿಗೆತಂದಿದ್ದರು. ಇವತ್ತು ವಿದ್ಯಾರ್ಥಿಗಳಿಗೆ ಭಾರತೀಯ ಸಂಸ್ಕೃತಿಯನ್ನು ತಲುಪಿಸುವ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಮಾಜಿ ಸಚಿವ ಈಶ್ವರಪ್ಪ ತಿಳಿಸಿದ್ದಾರೆ.
ಅವರು ಮಾಧ್ಯಮಗಳಿಗೆ ಮಾತನಾಡಿ, ಯಾವುದು ಸರಿ ಇಲ್ಲ ಎಂಬ ಅಂಶದ ಬಗ್ಗೆ ಪ್ರಮಾಣಿಕವಾಗಿ ತಿದ್ದುಕೊಳ್ಳಿ ಎಂದು ಹೇಳಿ ತಿದ್ದಿಸಬೇಕಿತ್ತು. ಇದರಲ್ಲಿ ರಾಜಕೀಯ ತಂದು, ಅವರ ವೈಚಾರಿಕ ಸಿದ್ದಾಂತ ಗಳನ್ನು ಇಲ್ಲಿಗೆ ತಂದು ರಾಜ್ಯದಲ್ಲಿ ಗೊಂದಲ ಸೃಷ್ಟಿಸಿರುವುದೇಕೆ ಎಂದು ಪ್ರಶ್ನಿಸಿದರು.
ಯಾವುದು ಸರಿ ಇಲ್ಲ ಎಂಬುದನ್ನು ಮಾಧ್ಯಮ ಗಳಿಗೆ ಹೇಳಿಕೆ ನೀಡುವುದು. ನಮ್ಮ ಪಠ್ಯ ವನ್ನು ವಾಪಸ್ ತೆಗೆದುಕೊಳ್ಳಿ ಎಂದು ಹೇಳುವುದು ಇದು ರಾಜಕಾರಣ. ಒಂಬತ್ತು ಜನ ನಮ್ಮ ಪಠ್ಯ ಬೇಡ ಎಂದು ಪತ್ರ ಬರೆದಿದ್ದರು.
ಅದರಲ್ಲಿ ಏಳು ಜನ ಪಠ್ಯದಲ್ಲಿ ಅವರ ಪಾಠವೇ ಇಲ್. ಇದರಲ್ಲಿ ಎಷ್ಟು ರಾಜಕಾರಣ ಇದೆ ನೋಡಿ ಎಂದು ಹೇಳಿದ ಮಾಜಿ ಸಚಿವರು, ಪಠ್ಯದಲ್ಲಿ ಯಾವುದು ಸತ್ಯ ಎಂಬುದನ್ನು ಮಕ್ಕಳಿಗೆ ತಿಳಿಸಬೇಕೋ, ಆ ಸತ್ಯವನ್ನ ಅಮೃತ ಮಹೋತ್ಸವದ ವರೆಗೆ ಪ್ರಕಟಿಸಲೇ ಇಲ್ಲ ಎಂದರು.
ಟಿಪ್ಪು ಮೈಸೂರು ಹುಲಿ, ಅಲೆಕ್ಸಾಂಡರ್ ದಿ ಗ್ರೇಟ್ ಎಂದು ಪಾಠದಲ್ಲಿ ಹೇಳಲಾಗಿದೆ. ನಮ್ಮ ದೇಶದಲ್ಲಿ ಒಳ್ಳೆ ಆಡಳಿತಗಾರರು ಇರಲಿಲ್ವ. ಒಬ್ಬ ಸ್ವದೇಶಿ ರಾಜನನ್ನ ಮೈಸೂರು ಹುಲಿ ಅಂತ ಕರೆದಿದ್ದೇವ. ನಮ್ಮಲ್ಲಿ ಯಾರು ಗ್ರೇಟ್ ಅಂತ ಇರಲಿಲ್ವ.
ನಮ್ಮ ದೇಶದ ಮಹಾ ಪುರಷರ ಬಗ್ಗೆ ಹೇಳಬಾರದು ಎಂದು ಹಳೆ ಪಠ್ಯದಿಂದ ಹೇಳಲಾಗುತ್ತಿದೆ. ಯಾವುದಾದರೂ ವ್ಯತ್ಯಾಸ ವಾಗಿದ್ದರೆ ನಾನು ಪ್ರಾಮಾಣಿಕವಾಗಿ ಹೇಳುತ್ತೇನೆ.ಅವರ ವಿರೋಧ ಮಾಡುವುದನ್ನು ನಾವು ನೋಡುತ್ತೇವೆ. ಮಕ್ಕಳಿಗೆ ಒಳ್ಳೆಯದು ತಿಳಿಸಬೇಕು ಎಂದರು
