ಎಪಿಎಂಸಿಯಲ್ಲಿ ರಸಗೊಬ್ಬರದ ಲಾರಿ ತಡೆದು ಪ್ರತಿಭಟನೆ-ಸ್ಥಳಕ್ಕೆ ಬಾರದ ಎಪಿಎಂಸಿ ಕಾರ್ಯದರ್ಶಿ

ಸುದ್ದಿಲೈವ್.ಕಾಂ/ಶಿವಮೊಗ್ಗ
ರೈತರಿಗೆ ಸೇರಬೇಕಿರುವ ರಸಗೊಬ್ಬರಗಳನ್ನ ಸಂಗ್ರಹಿಸಿದ ಆರೋಪದ ಅಡಿ ಸಾಮಾಜಿಕ ಕಾರ್ಯಕರ್ತ ಡಿ.ಆರ್.ಗಿರೀಶ್ ನೇತೃತ್ವದಲ್ಲಿ ಎಪಿಎಂಸಿಯಲ್ಲಿ ಲಾರಿಯನ್ನ ತಡೆದು ಪ್ರತಿಭಟನೆ ನಡೆಸಿದ್ದಾರೆ. ಇಲ್ಲಿನ ಕಾರ್ಯದರ್ಶಿ ಮತ್ತು ಗೋದಾಮಿನ ಮಾಲೀಕರು ಕಾನೂನು ಉಲ್ಲಂಘನೆ ಮಾಡಿ ರಸಗೊಬ್ಬರವನ್ನ ಸಂಗ್ರಹಿಸಲು ಅವಕಾಶಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.
ಎಪಿಎಂಸಿ ಯಲ್ಲಿ ರೈತರು ಬೆಳೆದ ಬೆಳೆಗೆ ಸಂಗ್ರಹಕ್ಕೆ ಅವಕಾಶಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗಿರೀಶ್ ಆಗ್ರಹಿಸಿದ್ದು ಜೂ.1 ರಂದು ಎಪಿಎಂಸಿಯ ಆದಿತ್ಯ ಎಂಟರ್ ಪ್ರೈಸಸ್ ನ ಗೋದಾಮಿನಲ್ಲಿ ವಿವಿಧ ಕಂಪನಿಗಳ ರಸಗೊಬ್ವರಗಳನ್ನ ಸಂಗ್ರಹಿಸಿರುವುದಾಗಿ ಆರೋಪಿಸಿದರು.
ಇದನ್ನ ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಗಮನಕ್ಕೆ ತಂದು. ಜೂ.1 ರಂದು ಸೀಜ್ ಮಾಡುವಂತೆ ಮನವಿ ಪತ್ರ ನೀಡಲಾಗಿತ್ತು. ಎಪಿಎಂಸಿ ನಾಗರಾಜ್ ನೇತೃತ್ವದಲ್ಲಿ ಗೋದಾಮನ್ನ ಸೀಜ್ ಸಹಮಾಡಲಾಗಿತ್ತು.ಆದರೆ ಇಂದು ಅಧಿಕಾರಿಗಳು ಇಲ್ಲದೆ ಗೋದಾಮಿನ ಸಾಮಾಗ್ರಿಗಳನ್ನ ಲಾರಿಯಲ್ಲಿ ಲೋಡ್ ಮಾಡಿ ಸ್ಥಳಾಂತರ ಮಾಡಲಾಗುತ್ತಿದೆ.
ಸೀಜ್ ಮಾಡಿದ ಗೋದಾಮಿನ ಬಾಗಿಲನ್ನ ಅಧಿಕಾರಿಗಳು ಇಲ್ಲದೆ ತೆಗೆಯಲಾಗಿದೆ ಎಂದು ಗಿರೀಶ್ ಆರೋಪಿಸಿದ್ದಾರೆ. ಆದರೆ ಎಪಿಎಂಸಿ ಕಾರ್ಯದರ್ಶಿ ನಾಗರಾಜ್ ಕ್ಷಮಾಪಣಾ ಪತ್ರ ನೀಡಿದ್ದರಿಂದ ಗೋದಾಮನ್ನ ಖಾಲಿ ಮಾಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಸುದ್ದಿಲೈವ್ ಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಸಹ ಹೋರಾಟಗಾರರು ಆಕ್ಷೇಪಣೆವೆತ್ತಿದ್ದು ಈ ಗೋದಾಮು ಕೋರ್ಟ್ ನಲ್ಲಿದ್ದು ಸೀಜ್ ಮಾಡಿದ ಗೋದಾಮನ್ನ ಮೌಖಿಕವಾಗಿ ಹೇಗೆ ಬಿಡುಗಡೆ ಮಾಡಲಾಗುತ್ತಿದೆ ಎಂದು ಹೋರಾಟಗಾರರ ಆಗ್ರಹವಾಗಿದೆ.
ಈ ಬಗ್ಗೆ ಮಾತನಾಡಿದ ಗೋದಾಮಿನ ಮಾಲೀಕ ಈ ಬಗ್ಗೆ ಅನೇಕ ಫೊನ್ ಕರೆ ಬಂದಿದ್ದು ವ್ಯವಹಾರ ಸರಿಮಾಡಿಕೊಳ್ಳಲು ಹೋರಾಟಗಾರರು ಫೊನ್ ಕರೆ ಮಾಡಿದ್ದಾರೆ ಎಂದು ಆರೋಪಿಸಿದ್ದು, ಈ ಹೇಳಿಕೆ ಹೋರಾಟಗಾರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಬಗ್ಗೆ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಡಿ.ಆರ್ ಗಿರೀಶ್ ನಮಗೆ ಮಾಲೀಕರೇ ಸಂಧಾನಕ್ಕೆ ಕರೆದಿದ್ದಾರೆ. ನಾವು ಹೋರಾಟಬಿಟ್ಟಿಲ್ಲ. ಯಾವ ಸಂಧಾನಕ್ಕೆ ಹೋಗಿಲ್ಲ. ಈಗ ಏಕಾಏಕಿ ನಮ್ಮ ಮೇಲೆ ಬೆದರಿಕೆ ಕರೆ ಮಾಡಿದ್ದಾರೆ ಎಂದು ಮಾಲೀಕರು ಹೇಳಿಕೆ ನೀಡುತ್ತಿದ್ದಾರೆ. ನಾವು ಎಪಿಎಂಸಿ ಕಾರ್ಯದರ್ಶಿ ಕಚೇರಿಯನ್ನ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದರು.
ಯೂತ್ ಕಾಂಗ್ರೆಸ್ ನ ಜಿಲ್ಲಾ ಅಧ್ಯಕ್ಷ ಹೆಚ್.ಪಿ ಗಿರೀಶ್, ಹೆಸ್ ಕುಮರೇಶ್ ಮೊದಲಾದವರು ಉಪಸ್ಥಿತರಿದ್ದರು.
