ಪಂಚಾಯತ್ ಕ್ರೀಡೋತ್ಸವ-2022 ಕ್ಕೆ ಚಾಲನೆ

ಸುದ್ದಿಲೈವ್.ಕಾಂ/ಶಿವಮೊಗ್ಗ
ನಗರದನೆಹರೂ ಕ್ರೀಡಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿವಮೊಗ್ಗ ಒಲಂಪಿಕ್ ಅಸೋಸಿಯೇಷನ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಾಯದೊಂದಿಗೆ ಶಿವಮೊಗ್ಗ ತಾಲೂಕು ಮಟ್ಟದ ಪಂಚಾಯತ್ಕ್ರೀಡೋತ್ಸವ-2022 ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಸಚಿವ ಈಶ್ವರಪ್ಪ ದೀಪಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಟ್ಟು 42 ಗ್ರಾಮ ಪಂಚಾಯಿತಿಗಳಲ್ಲಿ 40 ಗ್ರಾಮ ಪಂಚಾಯಿತಿಗಳು ಕ್ರೀಡೋತ್ಸವದಲ್ಲಿ ಭಾಗಿಯಾಗಿದ್ದವು.
ಕ್ರೀಡೋತ್ಸವದ ಧ್ವಜ ನೆರವೇರಿಸಿದ ಶಿವಮೊಗ್ಗ ಗ್ರಾಮಾಂತರ ಶಾಸಕ ಕೆ.ಬಿ.ಅಶೋಕ್ ನಾಯ್ಕ್ ಮಾತನಾಡಿ, ಒತ್ತಡದ ಬದುಕಿನ ನಡುವೆ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಪ್ರತಿಭೆಗಳು ಹೊರಹೊಮ್ಮುತ್ತದೆ. ಗುಡ್ಡಪ್ಪ ಜೋಗಿ ಸೇರಿದಂತೆ ಅನೇಕ ಜನ ಕ್ರೀಡೆ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ಪ್ರತಿಭೆಗಳಿಗೆ ವೇದಿಕೆಯ ಸಿಗುವುದಿಲ್ಲ ಭಾಗಿಯಾಗಲು ಕರೆದರು.
ಗ್ರಾಮೀಣಾಭಿವೃದ್ಧಿಯಲ್ಲಿ ಅಕ್ಟೋಬರ್ ಮತ್ತು ನವೆಂಬರ್ ಯುವ ಸಮಾವೇಶವನ್ನ ಹಮ್ಮಿಕೊಳ್ಳುವ ಮೂಲಕ ಪ್ರತಿಭೆಯನ್ನ ಹೊರಗೆ ತೆಗೆಯೋಣ ಎಂದು ಒತ್ತಾಯಿಸಿದರು.
ಎಂಎಲ್ ಸಿ ಡಿ.ಎಸ್.ಅರುಣ್ ಮಾತನಾಡಿ, ಕ್ರೀಡೋತ್ಸವದ ಜೊತೆಗೆ ಮುಂದಿನ ದಿನಗಳಲ್ಲಿ ಜಿಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ನಡೆಸೋಣವೆಂದು ಕರೆ ನೀಡಿದರು. ನಾವು ವಿದ್ಯಾರ್ಥಿಜೀವನದಲ್ಲಿ ಕ್ರೀಡೆ ಗೆ ವೇದಿಕೆನೇ ಸೃಷ್ಠಿಯಾಗುತ್ತಿರಲಿಲ್ಲ. ಈಗ ಕ್ರೀಡೆಗೆ ವೇದಿಕೆ ಸೃಷ್ಠಿಸಲಾಗುತ್ತಿದೆ ಎಂದರು.
ಸಚಿವ ಈಶ್ವರಪ್ಪ ಮಾತನಾಡಿ, . ನಿಮ್ಮ ಗ್ರಾಮದಲ್ಲಿ ಗ್ರಾಪಂನ ವ್ಯಾಪ್ತಿಯ ಕೆರೆಗಳನ್ನ ಅಭಿವೃದ್ಧಿ ಪಡಿಸಲು ಕರೆನೀಡಿದರು.
