ರಾಜಕೀಯ

ವೀರಶೈವ-ಲಿಂಗಾಯಿತರ ನಡೆ ಬಸವಕಲ್ಯಾಣದ ಕಡೆ ಕಾರ್ಯಕ್ರಮಕ್ಕೆ ಶಿವಮೊಗ್ಗದಿಂದ 2 ಸಾವಿರ ಜನ ಭಾಗವಹಿಸುವ ನಿರೀಕ್ಷೆ

ಸುದ್ದಿಲೈವ್.ಕಾಂ/ಶಿವಮೊಗ್ಗ

ಜೂ.12 ರಂದು ವೀರಶೈವ ಲಿಂಗಾಯತರ ನಡೆ ಅನುಭವ ಮಂಟಪದ ಕಡೆ ಎಂಬ ಅಭಿಯಾನ ನಡೆಯುತ್ತಿದ್ದು ಈ ಬೃಹತ್ ಸಮಾವೇಶಕ್ಕೆ ಶಿವಮೊಗ್ಗದಿಂದ ಎರಡು ಸಾವಿರಾರು ಜನ ಭಾಗಿಯಾಗಲಿದ್ದಾರೆ ಎಂದು ವೀರಶೈವ ಲಿಂಗಾಯಯತ ಸಂಘಟನಾ ವೇದಿಕೆಯ ತಾಲೂಕ ಅಧ್ಯಕ್ಷ ಧನ್ ರಾಜ್ ತಿಳಿಸಿದರು.

ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 12 ನೇ ಶತಮಾನದಲ್ಲಿ ಬಸವಣ್ಣ ಬಸವಕಲ್ಯಾಣದಲ್ಲಿ ನಿರ್ಮಾಣಗೊಳಿಸಿದ್ದನು. ಈ ಸಂಧರ್ಭದಲ್ಲಿ ನಿರ್ಮಾಣವಾದ ಈ ಅನುಭವ ಮಂಟಪ ನಿಜಾಮರ ಕಾಲದಲ್ಲಿ ಮಸೀದಿಯನ್ನಾಗಿ ಬದಲಾಯಿಸಲಾಗಿದೆ ಎಂದು ಹೇಳಿದರು.

12 ರಂದು ಭಾನುವಾರ ಬಸವಕಲ್ಯಾಣದಲ್ಲಿ ಸಮಾವೇಶ ನಡೆಯಲಿದೆ.‌ 770‌ಮಠಾಧೀಶರು ಭಾಗಿಯಾಗಲಿದ್ದಾರೆ.ಶಿವಮೊಗ್ಗ, ಶಿಕಾರಿಪುರ, ಸೊರಬ, ಭದ್ರಾವತಿ ತಾಲೂಕಿನಿಂದ ಒಟ್ಟು 15 ಬಸ್ ಗಳಲ್ಲಿ ಎರಡು ಸಾವಿರಾರ ಕಾರ್ಯಕರ್ತರು ಭಾಗಿಯಾಗಿಲಿದ್ದಾರೆ ಎಂದು ತಿಳಿಸಿದರು.

ಸಂಸತ್ ನಡೆದಿದ್ದು ಇದೇ ಜಾಗದಲ್ಲಿ ಎಂದು ಪ್ರಧಾನಿಯವರೇ ಹೇಳಿದ್ದಾರೆ.ವೀರಶೈವ ಪಂಗಡದವರು ಶನಿವಾರ ಬೆಳಿಗ್ಗೆ ಹೊರಡಲಿದ್ದೇವೆ ಎಂದರು.

ನಂತ ಮಾತನಾಡಿದ ವೇದಿಕೆಯ ಕೋಶಾಧ್ಯಕ್ಷ ಜ್ಯೋತಿ ಪ್ರಕಾಶ್ ಒಬ್ಬ ಸ್ವಾಮೀಜಿಯರು ಇದು ಅನುಭವ ಮಂಟಪ ಅಲ್ಲವೆಂದಿದ್ದಾರೆ. ಆದರೆ ನಿನ್ನೆ ಬಸವಕಲ್ಯಾಣದ ಶಾಸಕರು ಸಿಎಂ ಗೆ ಮನವಿ ಮಾಡಿ ಈ ಮಸೀದಿಯನ್ನ ವೀರಶೈವ ಸಂಘಟನೆಗೆ ಒಪ್ಪಿಸುವಂತೆ ಮನವಿ ಮಾಡಿದ್ದಾರೆ.

ಅಲ್ಲದೆ ಅನೇಕ ಸ್ವಾಮೀಜಿಗಳು ಇಲ್ಲಿ ಅನುಭವ ಮಂಟಪ ಇತ್ತು. ಇದನ್ನ ವಾಪಾಸ್ ಪಡೆಯುವಂತೆ ಆಗ್ರಹಿಸಿದ್ದಾರೆ. ಅಲ್ಲದೆ ಅನೇಕ ವರ್ಷಗಳಿಂದ ಇಲ್ಲಿ ಯಾರೂ ನಮಾಜ್ ಅಥವಾ ಪೂಜಾ ಕೈಂರ್ಯಗಳನ್ನಮಾಡುತ್ತಿಲ್ಲ. ಹಾಗಾಗಿ ನಮಗೆ ಒಪ್ಪಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ವೇದಿಕೆಯ ಉಪಾಧ್ಯಕ್ಷ ಶಿವರಾಜ್ ಪದಾಧಿಕಾರಿಗಳಾದ ಉಮೇಶ್ ಶೆಟ್ಟಿ, ಬಿಂದು ಕುಮಾರ್, ಸೋಮಶೇಖರ್ ಮೊದಲಾದವರು ಉಪಸ್ಥಿತರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button