ಕ್ರೈಂ

ಸ್ನೇಹಿತರ ಹೊಡೆತ ತಾಳಲಾರದೆ ಓಡಲಾರಂಭಿಸಿ ಚರಂಡಿಗೆ ಬಿದ್ದು ಯುವಕ ಸಾವು!

ಸ್ನೇಹಿತರ ನಿರ್ಲಕ್ಷತನದಿಂದ ಪತಿ ಸಾವು ಎಂದು ಎಫ್ಐಆರ್ ದಾಖಲು

ಸುದ್ದಿಲೈವ್. ಕಾಂ/ಭದ್ರಾವತಿ

ಮೊಬೈಲ್ ಕೇಳುವ ನೆಪದಲ್ಲಿ ಗಲಾಟೆ ಮಾಡಿಕೊಂಡು ಸ್ನೇಹಿತರ ಕಲ್ಲೇಟನ್ನ ತಪ್ಪಿಸಿಕೊಳ್ಳಲು ಹೋಗಿ ಚರಂಡಿಗೆ ಬಿದ್ದು ಗಾಯಗೊಂಡ ವ್ಯಕ್ತಿ ಸಾವನ್ನಪ್ಪಿರುವ ಘಟನೆ ನಡೆದಿದೆ.  ಈ ಘಟನೆ ಸ್ನೇಹಿತರ ನಿರ್ಲಕ್ಷತನದಿಂದ ಎಂದು ಆರೋಪಿಸಿ ಪತಿಯ ಸ್ನೇಹಿತರ ವಿರುದ್ಧ ಕೊಲೆಯ ಆರೋಪ ಮಾಡಲಾಗಿದೆ.

ಮೋರಿಗೆ ಬಿದ್ದ ಸಂತೋಷನಿಗೆ ಗಾಯವಾಗಿದ್ದು ಆತನನ್ನ ತಮ್ಮ ಮನೆಗೆ ಕರೆದುಕೊಂಡು ಹೋಗಿ ಮಲಗಿಸಿಕೊಂಡು ಮರುದಿನ ಬಿದ್ದು ಗಾಯವಾಗಿದೆ ಎಂದು ಹೇಳಿ ಸಂತೋಷ್ ಗೆ ಹೊಲಿಗೆ ಹಾಕಿಸಿಕೊಂಡು ಬರಲಾಗಿದೆ. ಆದರೆ ಸಂಜೆಯ ವೇಳೆಗೆ ವಾಂತಿಮಾಡಿಕೊಂಡ ಸಂತೋಷ್ (28) ಅಸುನೀಗಿದ್ದಾನೆ.

ಘಟನೆ ಏನು?

ಸಂತೋಷ್ ಈಗೆ 10 ವರ್ಷಗಳ ಹಿಂದೆ ಪ್ರೀತಿಸಿ ಮಂಜುಳ ಎಂಬುವರನ್ನ ಮದುವೆಯಾಗಿದ್ದನು.  ಸಂತೋಷ, ಉಮೇಶ ಹಾಗೂ ಯಲಪ್ಪ ಇಂದಿರಾ ಕ್ಯಾಂಟಿನ್ ಊಟ ಮಾಡಿಕೊಂಡು ಬರುತ್ತಿರುವಾಗ ಉಮೇಶನ ಮೊಬೈಲ್ ಕಾಣದೇ ಇದ್ದು ನೀನೆ ಮೊಬೈಲ್ ತೆಗೆದುಕೊಂಡಿದ್ದೀಯಾ ಕೊಡು ಅಂತ ಸಂತೋಷನೊಂದಿಗೆ ಜಗಳಕ್ಕೆ ಬೀಳುತ್ತಾನೆ.

ಈ ವೇಳೆ ಉಮೇಶನು ಕಲ್ಲಿನಿಂದ ಸಂತೋಷನಿಗೆ ಬೀಸಿ ಹೊಡೆದಿದ್ದಾನೆ. ಇಲ್ಲೆ ಇದ್ದರೆ ಹನುಮಂತ ಮತ್ತು ಉಮೇಶ್ ಇಬ್ಬರು ಸೇರಿ ನನಗೆ ಹೊಡೆಯುತ್ತಾರೆ ಎಂದು ಸಂತೋಷ ಗಾಬರಿಯಿಂದ ಓಡಲು ಆರಂಭಿಸಿದ್ದಾನೆ.  ಕಾಲು ಜಾರಿ ಉಡುಗಲಮ್ಮ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ಆರ್ಚ ಪಕ್ಕದ ಶೆಟರ್ ಅಂಗಡಿ ಮುಂದೆ ಇದ್ದ ಚರಂಡಿಗೆ ಬಿದ್ದು ತಲೆಗೆ ಗಾಯ ಮಾಡಿಕೊಂಡಿದ್ದಾನೆ.

ಅದನ್ನು ನೋಡಿಯು ಸಹ ಉಮೇಶ ಮತ್ತು ಹನುಮಂತ ಚಿಕಿತ್ಸೆ ಕೊಡಿಸದೆ ಸಂತೋಷನನ್ನ ತಮ್ಮ ಮನೆಯಲಿ ಮಲಗಿಸಿರುತ್ತಾರೆ. ಮರುದಿನ ಪರಿಚಯಸ್ಥ ಯಲಪ್ಪನಿಗೆ ಸ್ವಲ್ಪ ಆಸ್ಪತ್ರೆಗೆ ತೋರಿಸು ಅಂತ ಹೇಳಿದ್ದ ಸಂತೋಷ್ ನನ್ನ ಯಲ್ಲಪ್ಪ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಿ್ದಾನೆ.  ಬಿದ್ದು ಗಾಯವಾಗಿರುತ್ತೆ ಎಂದು ತಿಳಿಸಿ ಸಂತೋಷ್ ಗೆ ಹೊಲಿಗೆ ಹಾಕಿಸಿಕೊಂಡು ಮನೆಗೆ ಕರೆದುಕೊಂಡು ಹೋಗಿ ಮಲಗಿಸಲಾಗಿರುತ್ತದೆ.

ಅಂದು ಸಂಜೆ ಸಂತೋಷನಿಗೆ ವಾಂತಿ ಯಾಗುತ್ತಿದಾಗ ಯಲಪ್ಪ, ಹರೀಶ ಮತ್ತು ಇತರರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವೈದ್ಯರು ಪರಿಶೀಲಿಸಿ ಮೃತ ಪಟ್ಟಿರುವುದಾಗಿ ತಿಳಿಸಿದ್ದಾರೆ.

ಸಂತೋಷನ ಸಾವಿಗೆ  ಉಮೇಶ ಮತ್ತು ಹನುಮಂತರ ನಿರ್ಲಕ್ಷತನವೇ ಕಾರಣ ಎಂದು ಆರೋಪಿಸಿ ಸಂತೋಷನ ಪತ್ನಿ ಎಫ್ಐಆರ್ ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button