ಕ್ಷುಲ್ಲಕ ಕಾರಣಕ್ಕೆ ಬ್ಲೇಡ್ ನಿಂದ ಕೊಯ್ದು ಪರಾರಿ

ಸುದ್ದಿಲೈವ್. ಕಾಂ/ತೀರ್ಥಹಳ್ಳಿ
ಕ್ಷುಲ್ಲಕ ಕಾರಣಕ್ಕೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು ಬ್ಲೇಡ್ ನಿಂದ ಕೊಯ್ಯಲಾಗಿದೆ. ಸಧ್ಯಕ್ಕೆ ಬ್ಲೇಡ್ ನಿಂದ ಹಲ್ಲೆಗೊಳಗಾದ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಬುದ್ದನಗರದ ರವಿಚಂದ್ರ ಎಂಬ ಯುವಕ ಅಶೋಕ ಹೋಟೆಲ್ ರಸ್ತೆಯ ಪಕ್ಕದಲ್ಲಿರುವ ಬುಕ್ ಸ್ಟಾಲ್ ಹತ್ತಿರದಲ್ಲಿ ಸಿಗರೇಟ್ ಹತ್ತಿಸಿಕೊಂಡು ಮಧ್ಯಾರಾತ್ರಿಯಲ್ಲಿ ಕುಳಿತಿದ್ದಾಗ ಬೈಕ್ ನಲ್ಲಿ ಬಂದ ಅದೇ ಏರಿಯಾದ ವಾಸಿ ಅಜಯ್ ಇಲ್ಲಿಯಾಕೆ ಕುಳಿತಿದ್ಯಾ ಎಂದು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ.
ಇದಕ್ಕೆ ಉತ್ತರಿಸಿದ ರವಿಚಂದ್ರ ಯಾಕೆ ಬೈಯ್ಯುತ್ತಿದ್ದೀಯಾ ನೆಮ್ಮದಿಯಾಗಿ ಸಿಗರೇಟ್ ಸೇದುತ್ತಿದ್ದೇನೆ ಎಂದು ಹೇಳಿದ್ದಕ್ಕೆ ಅಜಯ್ ತನ್ನ ಕೈಯ್ಯಲ್ಲಿದ್ದ ಬ್ಲೇಡ್ ನಿಂದ ಎಡಕುತ್ತಿಗೆಯನ್ನ ಕೊಯ್ದು ಪರಾರಿಯಾಗಿದ್ದಾನೆ. ನಂತರ ರವಿಚಂದ್ರನ್ ತಮ್ಮ ಸುಧಾಕರ ಮತ್ತು ಮಾವ ಸತ್ಯವೇಲುಗೆ ಮೊಬೈಲ್ ಮೂಲಕ ವಿಷಯ ತಿಳಿಸಿದ್ದಾನೆ.
ಇಬ್ವರು ಬಂದು ಆತನನ್ನ ಕರೆದುಕೊಂಡು ಮೆಗ್ಗನ್ ಗೆ ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಈ ಬಗ್ಗೆ ರವಿಚಂದ್ರ ದೊಡ್ಡಪೇಟೆ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
