ಕ್ರೈಂ

ಬೈಕ್ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಹೇಳಿ ಹೋದ ಯುವಕ ಶವವಾಗಿ ಪತ್ತೆ!

ತಂದೆಯಿಂದ ತನಿಖೆಗೆ ಮನವಿ

ಸುದ್ದಿಲೈವ್. ಕಾಂ/ತೀರ್ಥಹಳ್ಳಿ

ತಾಲೂಕಿನ ಕೊಳಗೇರಿ ಬಸ್ ನಿಲ್ದಾಣದ‌ ಎದುರಿನ ರಸ್ತೆಯಲ್ಲಿ ಯುವಕನ ಶವವೊಂದು ಪತ್ತೆಯಾಗಿದ್ದು, ಪತ್ತೆಯಾದ ಶವವನ್ನ ಶಂಖದಹೊಳೆಯ ಮುಡುಗೊಳ್ಳಿ ಸರಲ ಗ್ರಾಮದ ಚೇತನ್ (27) ಎಂದು ಗುರುತಿಸಲಾಗಿದೆ.

ಈ ಪ್ರಕರಣದ ಬಗ್ಗೆ ಮೃತ ಚೇತನನ ಕುಟುಂಬ ಅನುಮಾನ ವ್ಯಕ್ತಪಡಿಸಿದ್ದು ಈ ಬಗ್ಗೆ ತನಿಖೆಯ ಮೂಲಕ ನಿಜಾಂಶವನ್ನ ತಿಳಿಸುವಂತೆ ಕೋರಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರೊಂದನ್ನ ದಾಖಲಿಸಲಾಗಿದೆ.

ಈ ಘಟನೆ ನಿನ್ನೆ ನಡೆದಿದೆ. ಜೂ. 3 ರಂದು ಮಧ್ಯಾಹ್ನ ಚೇತನ್ ಕೆಎ 15 ಎಲ್ 0286 ಕ್ರಮ ಸಂಖ್ಯೆಯ ಸ್ಪ್ಲೆಂಡರ್ ಪ್ಲಸ್ ಬೈಕ್ ನ್ನ ರಿಪೇರಿ ಮಾಡಿಸಿಕೊಂಡು ಬರುವುದಾಗಿ ಹೇಳಿ ಮನೆ ಬಿಟ್ಟು ಹೋಗಿದ್ದನು.

ಜೂ. 4 ರಂದು ಬೆಳಿಗ್ಗೆ ಚೇತನ್ ಅವರ ಚಿಕ್ಕಮ್ಮ ತಂದೆಗೆ ಫೋನ್ ಮಾಡಿ ತೀರ್ಥಹಳ್ಳಿಯ ಕೊಳಗೇರಿಯ ಬಸ್ ನಿಲ್ದಾಣದ ಎದುರಿನ ರಸ್ತೆಯಲ್ಲಿ ಅಪಘಾತಗೊಂಡು ಬಿದ್ದಿದ್ದಾನೆ ಎಂದು ತಿಳಿಸಿದ್ದಾರೆ.

ತಂದೆ ಶಂಕರಪ್ಪರವರು ಬಂದು ಪರಿಶೀಲಿಸಿದಾಗ ಚೇತನನ ಉಸಿರು ಆಡುತ್ತಿರಲಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದಾರೆ. ನಂತರ‌ ಆತನನ್ನ ತೀರ್ಥಹಳ್ಳಿ ಶವಗಾರಕ್ಕೆ ತೆಗೆದುಕೊಂಡು ಹೋಗಿ ಸೇರಿಸಲಾಗಿದೆ. ಶಂಕರಪ್ಪನವರು ಮಗನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

ತನ್ನ ಮಗನಿಗೆ ಯಾವುದೋ ವಾಹನ ಅಪಘಾತ ಪಡಿಸಿದ್ದು ಅಥವಾ ತನ್ನ ಮಗ  ಸೆಂಡರ್ ಪ್ಲಸ್ ಬೈಕ್ ನಿಂದ, ಬಿದ್ದು ಮೃತ ಪಟ್ಟಿರಬಹುದು ಆದ್ದರಿಂದ ತನಿಖೆಯ ಮೂಲಕ ನಿಜಾಂಶವನ್ನು ಪತ್ತೆ ಮಾಡಬೇಕು ಎಂದು ದೂರಿನಲ್ಲಿ ದಾಖಲಿಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button