ಜೂ.8 ರಂದು 7 ಗ್ರಾಮದ ಶಕ್ತಿದೇವತೆಯ ಸಿಡಿ ಮಹೋತ್ಸವ
24 ವರ್ಷಗಳ ನಂತರ ನಡೆಯುತ್ತಿದೆ ಶಕ್ತದೇವಿಯ ಜಾತ್ರಾ ಮಹೋತ್ಸವ

ಸುದ್ದಿಲೈವ್. ಕಾಂ/ಶಿವಮೊಗ್ಗ
ಆನವೇರಿ,ಮಂಗೋಟೆ ಸೇರಿ 7 ಗ್ರಾಮಗಳ ಶಕ್ತಿದೇವಿ ಹಿರಿಮಾವುರದಮ್ಮ ದೇವಿಯ ಜಾತ್ರೆ ನಾಳೆಯಿಂದ 5 ದಿನ ಜರುಗಲಿದ್ದು ಜೂ.8 ರಂದು ದೇವಿಯ ಸಿಡಿ ಜಾತ್ರ ಮಹೋತ್ಸವ ಜರುಗಲಿದೆ.
ಈ ಜಾತ್ರೆ 24 ವರ್ಷಗಳ ನಂತರ ಜರುಗುತ್ತಿದೆ. ಇದೇ ವಿಶೇಷ. ಈ ಜಾತ್ರೆ 24 ವರ್ಷ ಯಾಕೆ ನಡೆಯಲಿಲ್ಲವೆಂಬುದೇ ಇಲ್ಲಿ ಕುತೂಹಲ. 24 ವರ್ಷದಿಂದ ಈ ದೇವಿಯ ಬಳಿ ಅನುಮತಿ ಪಡೆಯಲಾಗುತ್ತದೆ. ದೇವಿ ಪ್ರಸಾದ ನೀಡಿದರೆ ಮಾತ್ರ ಜಾತ್ರೆ ನಡೆಸಲಾಗುತ್ತದೆ.
ಪ್ರತಿ ವರ್ಷ ದೇವಿಯ ಬಳಿ ಜಾತ್ರೆಗೆ ಅನುಮತಿ ಪಡೆಯಲಾಗುತ್ತದೆ. ಪ್ರಸಾದವನ್ನ ಎಡಭಾಗದಲ್ಲಿಯಾಗಲಿ ಮಧ್ಯವಾಗಲಿ ಅನುಕರಿಸಿದರೆ ಜಾತ್ರೆ ನಡೆಯುವುದಿಲ್ಲ. ಬಲಭಾಗದಲ್ಲಿ ಹೂವು ಬಿದ್ದರೆ ಮಾತ್ರ ಜಾತ್ರೆ ನಡೆಯುತ್ತದೆ. ಪ್ರತಿ ವರ್ಷ ಬಸವನ ಜಯಂತಿಯ ನಂತರ ಕೇಳಲಾಗುತ್ತದೆ.
ತಾನು ಈ ಸಿಡಿ ನಡೆಸುತ್ತೇನೆ ಅನುಕರಣಿಸು ಎಂದಾಗ ಪ್ರಸಾದ ಬಲಭಾಗಕ್ಕೆ ಈ ಭಾರಿ ಹೊನ್ನಳಿಯ ಶ್ರೀನಿವಾಸ ಎಂಬುವರಿಗೆ ಪ್ರಸಾದವಾಗಿದೆ. ಕೆಲವರು ಕೇಳಿದಾಗ ಪ್ರಸಾದವಾಗಿಲ್ಲ. ಈ ಹಿನ್ನಲೆಯಲ್ಲಿ 24 ವರ್ಷದ ಬಳಿಕ ದೇವಿಯ ಜಾತ್ರೆ ನಡೆಯುತ್ತಿದೆ.
ಈ ಬಗ್ಗೆ ಸುದ್ದಿಲೈವ್ ನೊಂದಿಗೆ ಮಾತನಾಡಿದ ಜಾತ್ರ ಮಹೋತ್ಸವ ಸಮಿತಿಯ ಕುಬೇಂದ್ರಪ್ಪ, ಈ ಹಿಂದೆ ಮಹಿಳೆಯರಿಗೂ ಜಾತ್ರೆ ನಡೆಸುವಂತೆ ದೇವಿ ಆಶೀರ್ವದಿಸಿತ್ತು. ಯಾರಬೇಕಾದರೂ ದೇವಿಯ ಬಳಿ ಪ್ರಸಾದ ಕೇಳಬಹುದು.
ದೇವಿಯ ಬಲಭಾಗದಲ್ಲಿ ಪ್ರಸಾದ ವಾದರೆ ಮಾತ್ರ ಜಾತ್ರೆ ಜರುಗಲಿದೆ. 10 ಜನ ಹೆಸರು ಕೊಡಲಾಗುತ್ತದೆ. ಉದರಲ್ಲಿ ಒಬ್ವರಿಗೆ ಪ್ರಸಾದ ಆಗಿದೆ. ಹೊನ್ನಳಿ ತಾಲೂಕು ಸಾಸಿವೆಹಳ್ಳಿಯ ಶ್ರೀನಿವಾಸ ಎಂಬುವರಿಗೆ ಪ್ರಸಾದ ಆಗಿದೆ ಎಂದರು.
ಈ ಹಿಂದೆ ಮಹಿಳೆಯರಿಗೂ ಪ್ರಸಾದವಾಗಿತ್ತು. ಈ ಬಾರಿ ಪ್ರಸಾದ ಕೇಳಕ್ಕೆ ಮಹಿಳೆಯರು ಬಂದಿದ್ದರು. ಆದರೆ ಪ್ರಸಾದವಾಗಿರಲಿಲ್ಲ. ಜೂ.7 ಮತ್ತು 8 ರಂದು ಜಾತ್ರೆ ವಿಶೇಷವಾಗಿರುತ್ತದೆ. ಜೂ.7 ರಂದು ದೇವಿಗೆ ಮಡ್ಲಕ್ಕಿ ತುಂಬಿಸಲಾಗುತ್ತದೆ. ಪ್ರಸಾದ ವಿನಿಯೋ ನಡೆಯಲಿದೆ. ಜೂ.8 ರಂದು ಸಿಡಿ ನಡೆಯಲಿದೆ. ಎಲ್ಲರೂ ಜಾತ್ರಗೆ ಬರುವಂತೆ ಕೋರಿದರು.
