ಚಿಕಿತ್ಸೆಗೆ ಹಣಕಟ್ಟಲಾಗದೆ ಬಡ ರಾಮಪ್ಪ ಸಾವು..!

ಸುದ್ದಿಲೈವ್. ಕಾಂ/ಭದ್ರಾವತಿ
ರಸ್ತೆ ಅಪಘಾತವಾಗಿ 70 ದಿನಗಳ ನಂತರ ಚಿಕಿತ್ಸೆಗೆ ಹಣವಿಲ್ಲದೆ ವ್ಯಕ್ತಿಯೋರ್ವರು ಸಾವನ್ನಪ್ಪಿದ್ದಾರೆ. ಹೆಚ್ಚಿನ ಚಿಕಿತ್ಸೆಗೆ ಹಣ ಕೊಡುವುದಾಗಿ ನಂಬಿಸಿ ಕೊನೆಗೆ ಜಾತಿನಿಂದನೆ ಮಾಡಿ ಯಾವ ಹಣ ನೀಡದೆ ಬಡಜೀವದ ಜೊತೆ ಆಟವಾಡಿರುವ ಘಟನೆ ನಡೆದಿದೆ.
ಭದ್ರಾವತಿ ತಾಲೂಕಿನ ಮಲ್ಲಾಪುರ ಸರ್ಕಲ್ ಬಳಿ ಸೈಕಲ್ ಹೊಡೆದುಕೊಂಡು ಹೋಗುತ್ತಿದ್ದ ರಾಮಪ್ಪ(56) ವರ್ಷದ ವ್ಯಕ್ತಿಗೆ ಹಿಂಬದಿಯಿಂದ ಬಂದ KA14 EW 4267ಕ್ರಮಸಂಖ್ಯೆಯ ಬೈಕ್ ಸವಾರ ಡಿಕ್ಕಿ ಹೊಡೆದು ಸ್ಥಳದಿಂದ ಪರಾರಿಯಾಗಿದ್ದನು.
ಪ್ರಜ್ಞೆ ತಪ್ಪಿಬಿದ್ದಿದ್ದ ರಾಮಪ್ಪರನ್ನ ಅಲ್ಲಿನ ಸುತ್ತಮುತ್ತಲಿನ ಜನ ಅಂಬ್ಯುಲೆನ್ಸ್ ಮೂಲಕ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಿಸಿದ್ದರು. ನಂತರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಪಘಾತಪಡಿಸಿದ್ದ ಸುರೇಶ್ ರಾವ್ ತನ್ನ ಸಹಚರರೊಂದಿಗೆ ಬಂದು ಯಾವ ದೂರು ಕೊಡಬೇಡಿ ಚಿಕಿತ್ಸೆಗೆ ಎಷ್ಟು ಖರ್ಚಾದರೂ ಕೊಡುತ್ತೇನೆ ಎಂದು ಭರವಸೆ ನೀಡಿದ್ದರು.
ಈ ವೇಳೆ ತನ್ನ ಮಗ ವೆಂಕಟೇಶ್ ನೊಂದಿಗೆ 50 ಸಾವಿರ ಹಣ ಕೊಟ್ಟುಕಳುಹಿಸಿದ್ದು ಆ ಹಣವನ್ನ ಖಾಸಗಿ ಆಸ್ಪತ್ರೆಯ ಬಿಲ್ ತುಂಬಿಸಲಾಗಿತ್ತು. ಆದರೆ ರಾಮಪ್ಪನವರು ಗುಣವಾಗುವ ಲಕ್ಷಣ ಕಂಡುಬರಲಿಲ್ಲ. ಇವರನ್ನ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆದರೂ ಸಹ ಹೆಚ್ಚಿನ ಚಿಕಿತ್ಸೆಗೆ ಹಣಬೇಕಾದ ಕಾರಣ ರಾಮಪ್ಪನವರ ಕುಟುಂಬ ಸುರೇಶ್ ರಾವ್ ಅವರಿಗೆ ಕರೆಮಾಡಿ ಹಣಕೊಡಿ ಅವರ ಚಿಕಿತ್ಸೆಗೆ ಬೇಕಾಗಿದೆ ಎಂದು ರಾಮಪ್ಪನವರ ಕುಟುಂಬ ಕರೆಮಾಡಿದ್ದಾರೆ. ಈ ವೇಳೆ ಅವ್ಯಚ್ಯ ಶಬ್ದಗಳಿಂದ ಬೈದ ಸುರೇಶ್ ರಾವ್ ಜಾತಿ ನಿಂದನೆ ಮಾಡಿದ್ದಾರೆ ಎಂದು ರಾಮಪ್ಪರ ಪತ್ನಿ ಲಕ್ಕಮ್ಮ ಆರೋಪಿಸಿದ್ದಾರೆ.
ಜೂ.3 ರಂದು ರಾಮಪ್ಪ ಸ್ಪೈನಲ್ ಕಾರ್ಡ್ ತೊಂದರೆಯಿಂದ ಕೊನೆ ಉಸಿರು ಎಳೆದಿದ್ದಾರೆ. ಹಣದ ಭರವಸೆ ನೀಡಿದ್ದ ಸುರೇಶ್ ರಾವ್ ಕೊನೆಗಳಿಗೆಯಲ್ಲಿ ಕೈಕೊಟ್ಟ ಹಿನ್ನಲೆಯಲ್ಲಿ ಬಡ ರಾಮಣ್ಣನನ್ನ ಉಳಿಸಿಕೊಳ್ಳಲಾಗಿಲ್ಲವೆಂದು ಆರೋಪಿಸಿ ಲಕ್ಕಮ್ಮ ದೂರಿನಲ್ಲಿ ದಾಖಲಿಸಿದ್ದಾರೆ.
