ಸೆಟ್ ಬ್ಯಾಕ್ ಕಬಳಿಕೆ-ಖಾಸಗಿ ಕಟ್ಟಡದ ಮಾಲೀಕನ ವಿರುದ್ಧ ದೂರು

ಸುದ್ದಿಲೈವ್.ಕಾಂ/ಶಿವಮೊಗ್ಗ
ಶಿವಮೊಗ್ಗ ಮಹಾನಗರ ಪಾಲಿಕೆಯ ಆಸ್ತಿಗಳನ್ನ ಸೆಟ್ ಬ್ಯಾಕ್ ಗಳ ಮೂಲಕ ಕಬಳಿಸುವ ಮೂಲಕ ಅಲ್ಲಿನ ಖಾಸಗಿ ಸೈಟ್ ನ ಮಾಲೀಕರು ಒತ್ತುವರಿ ಮಾಡಿರುವ ಕುರಿತು ಪಾಲಿಕೆ ಇಂಜಿನಿಯರ್ ದೂರು ದಾಖಲಸಿದ್ದಾರೆ.
ವಿನೋಬ ನಗರದ ಮುನಿಯಪ್ಪ ಲೇ ಔಟ್ ನಲ್ಲಿ ಕೆಲ ಖಾಸಗಿ ಲೇ ಔಟ್ ನವರು ಪಾಲಿಕೆ ಸೈಟ್ ನ ಸೆಟ್ ಬ್ಯಾಕ್ ನ್ನ ಉಲ್ಲಂಘಿಸಿ ಯತಿರಾಜ್ ಕಟ್ಟಡ ನಿರ್ಮಾಣ ಮಾಡಿದ್ದರು. ಈ ಸೆಟ್ ಬ್ಯಾಕ್ ನ್ನ ಪ್ರಶ್ನಿಸಿ ಪಾಲಿಕೆ ಇಂಜಿನಿಯರ್ ಶಾಂತಯ್ಯ ಮೂರು ಬಾರಿ ನೋಟೀಸ್ ನೀಡಿದ್ದರು.
ನೋಟೀಸ್ ನ್ನ ದಿಕ್ಕರಿಸಿ ಯತಿರಾಜ್ ಸೆಟ್ ಬ್ಯಾಕ್ ನ್ನ ಸರಿಪಡಿಸದೆ ಕಟ್ಟಡದ ಮೇಲ್ಚಾವಣಿಯ ನಿರ್ಮಾಣಕ್ಕೆ ಮುಂದಾಗಿದ್ದರು ಪಾಲಿಕೆ ಇಂಜಿನಿಯರ್ ಶಾಂತಯ್ಯ, ಮತ್ತೋರ್ವ ಇಂಜನಿಯರ್ ಹಾಲೇಶಪ್ಪ, ಪ್ರಿಯಾ, ಮೇಸ್ತ್ರಿ ದೇವೇಂದ್ರಪ್ಪ, ಗ್ಯಾಂಗ್ ಮ್ಯಾನ್ ದೇವರಾಜ್ ಸ್ಥಳಕ್ಕೆ ಹೋದಾಗ ಕಟ್ಟಡದ ಮಾಲೀಕ ಯತಿರಾಜ್ ಪತ್ನಿ ಹೇಮ ಲತಾ ಹಾಗೂ ಪುತ್ರ ಅವ್ಯಾಚ್ಯ ಶಬ್ದದಿಂದ ಬೈದಿದ್ದಾರೆ.
ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಡಿಸಿ ಇಬ್ವರು ಸಿಬ್ಬಂದಿ ಮೇಲೆ ಕೈ ಮಾಡಲಾಗಿದೆ. ಈ ಬಗ್ಗೆ ಇಂಜಿನಿಯರ್ ಶಾಂತಯ್ಯ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
