ಕ್ರೈಂ

ಅಪಹರಣಕ್ಕೊಳಗಾದ ಬಾಲಕಿಯ ರಕ್ಷಣೆ-ನವೀನ್ ಕುಮಾರ್ ಮಠಪತಿ ನೇತೃತ್ವದಲ್ಲಿ ಖಡಕ್ ಕಾರ್ಯಾಚರಣೆ

ಸುದ್ದಿಲೈವ್.ಕಾಂ/ಮಾಳೂರು

ಅಪಹರಣಕ್ಕೊಳಗಾದ ಅಪ್ರಾಪ್ತೆ ಬಾಲಕಿಯನ್ನ ಪತ್ತೆಹಚ್ಚಿ ಆಕೆಯನ್ನ ರಕ್ಷಿಸುವಲ್ಲಿ ಮಾಳೂರು ಪಿಎಸ್ಐ ನವೀನ್ ಕುಮಾರ್ ಮಠಪತಿ ಯಶಸ್ವಿಯಾಗಿದ್ದಾರೆ.

ಜೂ.2 ರಂದು ಮಾಲುಾರು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಡಿಕೆ ಸುಲಿಯುವ ಕೆಲಸಕ್ಕೆ ಬಂದಿದ್ದ ಯುವಕ ಅಪ್ರಾಪ್ತೆ ಬಾಲಕಿಯನ್ನ ಅಪಹರಿಸಿಕೊಂಡು ಹೋಗಿದ್ದ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಯಾವ‌ಲೀಡು ಇಲ್ಲ. ಯಾವ ಸಂಪರ್ಕವೂ ಕಡಿತಗೊಂಡಿತ್ತು. ಎಸ್.ಡಾ.ಬಿ.ಎಂ ಲಕ್ಷ್ಮೀಪ್ರಸಾದ್ ಮಾರ್ಗದರ್ಶನದಲ್ಲಿ ನಡೆದಿದ್ದೇ ಮಿಸ್ಸಿಂಗ್ ಆಪರೇಷನ್.

ಮೇಲ್ನೋಟ ಇದೊಂದು ಲವ್ ಪ್ರಕರಣವೆನಿಸಿಕೊಂಡರೂ ಬಾಲಕಿಯು ಅಪ್ರಾಪ್ತರಾಗಿದ್ದರಿಂದ ಇದು ಪೋಸ್ಕೋ ಕಾಯ್ದೆ ಅಡಿ ಪ್ರಕರಣದಾಖಲಾಗಿದೆ. ಯುವಕ ವೆಲ್ಲೂರಿನನಲ್ಲಿ ಪತ್ತೆಯಾಗಿದ್ದಾನೆ. .

ಸಬ್ ಇನ್ಸ್ ಪೆಕ್ಟರ್ ಅವರೊಂದಿಗೆ ಮಂಜುನಾಥ ನೇಕಾರ ಹಾಗೂ ಸಂದೀಪ್ ರವರುಗಳು ಆರೋಪಿಯ ಪತ್ತೆಗೆ ಭಾಗವಹಿಸಿದ್ದರು .

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button