ಕ್ರೈಂ

ಬಾಟ್ಲಿ ನೀರಿನಲ್ಲಿ ನೋಟು ಬರುವ ಕಲೆಗೆ ಫಿದಾ ಆದವನು ಕಳೆದುಕೊಂಡ ಹಣವೆಷ್ಟು ಗೊತ್ತಾ?

ಸುದ್ದಿಲೈವ್.ಕಾಂ/ಶಿವಮೊಗ್ಗ

ನೋಡಿ ನೋಡಿ ಗುಂಡಿಗೆ ಬೀಳುವುದು ಬೇರೆ, ತೋರಿಸಿ, ತೋರಿಸಿ ಗುಂಡಿಗೆ ಬೀಳಿಸ್ತಾರೆ ಹುಷಾರ್​, ಇದಕ್ಕೆ ಸಾಕ್ಷಿ ಎಂಬಂತ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.

ಅಂದಹಾಗೆ, ಈ ಘಟನೆಯ ಆರಂಭವಾಗಿದ್ದು ಕಳೆದ ಮೇ 22 ರಂದು, ಸಾಗರ ಇಂದಿರಾ ಕಾಲೇಜ್​ ಬಳಿಯಿರುವ ಟಿ ಶಾಪ್​ ನಡೆಸ್ತಿದ್ದ ವ್ಯಕ್ತಿಯನ್ನ ಸಂಪರ್ಕಿಸಿದ ಇಬ್ಬರು ವ್ಯಕ್ತಿಗಳು, ಅವರ ಬಳಿ, ಬಾಟ್ಲಿ ನೀರಿನಲ್ಲಿ ನೋಟು ಬರುವ ಕಲೆ ತೋರಿಸಿದ್ರು.

ಕಪ್ಪು ಪೇಪರ್​ವೊಂದನ್ನ ಬಾಟ್ಲಿಯೊಳಕ್ಕೆ ಹಾಕಿ, ಅದರಿಂದ 500 ರೂಪಾಯಿ ನೋಟು ತೆಗೆದು ತೋರಿಸಿ, ಹೀಗೆ ಬರುತ್ತೆ ನೋಡು, ಕಷ್ಟದಲ್ಲಿದ್ಯಾ ಅಂತಾ ಗೊತ್ತಾಯ್ತು, ಅದಕ್ಕೆ ಸಹಾಯ ಮಾಡೋಣ ಅಂತಾ ಈ ಬಾಟ್ಲಿ ಕೊಡುವುದಾಗಿ ಹೇಳಿದ್ದಾರೆ. ಇಂತಹದ್ದನ್ನೆಲ್ಲಾ ಯಾವ ಕಾರಣಕ್ಕೂ ನಂಬೋದಿಲ್ಲ ಎಂದು ಟೀಶಾಪ್​ ಮಾಲೀಕರು ಹೇಳಿದ್ದಾರೆ. ಹಾಗಿದ್ರೂ ಬಿಡದ ಆರೋಪಿಗಳು, ಬಾಟ್ಲಿಯಿಂದ ತೆಗೆದ 500 ರೂಪಾಯಿ ನೋಟನ್ನ ಇದನ್ನ ನಿಮ್ಮ ಎಟಿಎಂ ಮೂಲಕ ಖಾತೆಗೆ ಹಾಕಿಕೊಳ್ಳಿ ಅಂತಾ ಹೇಳಿದ್ದಾರೆ. ಅದೇರೀತಿ ದೂರುದಾರರು ಮಾಡಿದ್ದಾರೆ. ನೋಟು ವರಿಜಿನಲ್​ ಎಂಬುದು ಗೊತ್ತಾಗಿದೆ.

ಮರುದಿನ ಸಂಜೆ ಕರೆ ಮಾಡಿದ ಆರೋಪಿಗಳು ರೂಪಿಸಿದ್ರು ಸ್ಕೆಚ್​
ಸಿಕ್ಕ ಐನೂರು ರೂಪಾಯಿಯನ್ನ ಎಟಿಎಂಗೆ ಹಾಕಿ ದೂರುದಾರರು ಸುಮ್ಮನಾಗಿದ್ರೆ, ಆರೋಪಿಗಳು ಮತ್ತೆ ಮರುದಿನ ಕರೆ ಮಾಡಿ, ಅದೇ ಜಾಗಕ್ಕೆ ಬಂದು, ಮತ್ತೆ ಬಾಟ್ಲಿಯೊಳಕ್ಕೆ ಕಪ್ಪು ಕಾಗದ ಹಾಕಿ, ನೋಟು ಬರುವುದನ್ನ ತೋರಿಸಿದ್ದಾರೆ. ಅಲ್ಲದೆ ಕಷ್ಟ ಇದೆ ಎಂಬ ಕಾರಣಕ್ಕೆ ಸಹಾಯಕ್ಕೆ ಬಂದಿದ್ದೇವೆ ಎಂದಿದ್ದಾರೆ. ಇದೆಲ್ಲದರ ನಡುವೆ ಕಳೆದ ಮೆ 28 ರಂದು ಒಂದು ಲಕ್ಷ ರೂಪಾಯಿ ಕೊಡಿ, ನಾವು ನಿಮಗೆ 2 ಲಕ್ಷ ರೂಪಾಯಿ ಸಿಗುವಂತೆ ಮಾಡುತ್ತೇವೆ ಎಂದು ದೂರುದಾರರನ್ನ ಪುಸಲಾಯಿಸಿದ್ದಾರೆ.

80 ಸಾವಿರ ರೂಪಾಯಿ ದೋಖಾ
ಆರೋಪಿಗಳ ಪದೆ ಪದೇ ಫೋನ್ ಕಾಲ್ ಹಾಗೂ ಬಾಟ್ಲಿಯಿಂದ ಬರುತ್ತಿದ್ದ ಐನೂರು ರೂಪಾಯಿ, ಟೀಶಾಪ್ ಮಾಲೀಕರ ಮನಸ್ಸಿನಲ್ಲಿ ಹುಳಬಿಟ್ಟಂತೆ ಮಾಡಿದೆ. ಅಲ್ಲದೆ ಆರೋಪಿಗಳು ಇನ್ನಿಲ್ಲದ ಮಾತನಾಡ್ತಿದ್ದರಿಂದ ಅವರ ಮಾತುಗಳು ಮರಳು ಮಾಡಿವೆ, ತಮಗೆ ಅರಿವಿಲ್ಲದೆ, ಅವರ ಟ್ರ್ಯಾಪ್​ಗೆ ಬಿದ್ದ ದೂರುದಾರರು ತಮ್ಮ ಬಳಿ 80 ಸಾವಿರ ಇದೆ, ಲಕ್ಷ ರೂಪಾಯಿ ಇಲ್ಲ ಎಂದಿದ್ದಾರೆ. ಇದನ್ನ ಕೇಳಿದ ಆರೋಪಿಗಳು ಸರಿ ಶಿವಮೊಗ್ಗಕ್ಕೆ ಬನ್ನಿ, ದುಡ್ಡು ಬರುವ ಮಾಯಾಜಾಲದ ಬಾಟಲಿಯನ್ನು ನೀಡುತ್ತೇವೆ ಎಂದಿದ್ದಾರೆ.

ಶಿವಮೊಗ್ಗ ಕೆಇಬಿ ಸರ್ಕಲ್​ನಲ್ಲಿ ಮೋಸ
ಆರೋಪಿಗಳು ಹೇಳಿದಂತೆ ಶಿವಮೊಗ್ಗಕ್ಕೆ ಬಂದ ದೂರುದಾರರನ್ನ, ಕೆಇಬಿ ಸರ್ಕಲ್​ಗೆ ಬರುವಂತೆ ಮೋಸಗಾರರು ತಿಳಿಸಿದ್ದಾರೆ. ಅಲ್ಲದೆ, ಅಲ್ಲಿಯು ಬಾಟ್ಲಿಯಿಂಧ ಹೊಸ ಐನೂರು ರೂಪಾಯಿ ನೋಟು ತೆಗೆದು ತೋರಿಸಿ, ಮನೆಗೆ ತೆಗೆದುಕೊಂಡು ಹೋಗಿ ಎಂದು ಬಾಟ್ಲಿ ಕೊಟ್ಟು,80 ಸಾವಿರ ರೂಪಾಯಿ ಇಸ್ಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಇತ್ತ ಸಂತ್ರಸ್ತರು, ಮನೆಗೆ ಬಂದು ಬಾಟಲಿಗೆ ಪೇಪರ್​ ಅದ್ದಿ ಎಷ್ಟು ಸಲ ತೆಗೆದರೂ 500 ರೂಪಾಯಿ ಆಗದ್ದನ್ನ ನೋಡಿ, ತಾವು ಮೋಸ ಹೋಗಿರುವುದು ಗೊತ್ತಾಗಿದೆ. ಹೀಗಾಗಿ ತುಂಗಾ ಠಾಣೆಯಲ್ಲಿ ಈ ಸಂಬಂಧ ಕಂಪ್ಲೇಂಟ್ ದಾಖಲಿಸಿದ್ದಾರೆ. ಪೊಲೀಸರು ಕೂಡ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button