ಕ್ರೈಂ

ಪೊಲೀಸರ ಅಭಿರಕ್ಷೆಯಿಂದ ತಪ್ಪಿಸಿಕೊಳ್ಳಲು ಅರ್ಷದ್ ಖಾನ್ ಮಾಡಿದ್ದೇನು?

ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ರೌಡ್ ಶೀಟರ್ ಮೇಲೆ ಪಿಐ ಮಂಜುನಾಥ್ ಗುಂಡು ಹಾರಿಸಿದ್ದೇಕೆ?

IMG_20220603_123049
ಮಹಜರ್ ರೌಡಿ ಶೀಟರ್

ಸುದ್ದಿಲೈವ್.ಕಾಂ/ಶಿವಮೊಗ್ಗ

ಪೊಲೀಸರ ಅಭಿರಕ್ಷೆಯಿಂದ ತಪ್ಪಿಸಿಕೊಳ್ಳಲು ಪಿಸಿ ಅರುಣ್ ಕುಮಾರ್ ಮೇಲೆ ಡ್ರ್ಯಾಗರ್ ಬೀಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ರೌಡಿ ಶೀಟರ್ ಅರ್ಷದ್ ಖಾನ್ ವಿರುದ್ಧ ಸುಮೋಟೋ ಪ್ರಕರಣ ದಾಖಲಾಗಿದೆ.

ಸೂಳೆಬೈಲಿನ ನಿವಾಸಿ ಮಂಜುನಾಥ್ ಎಂಬಾತ ಯುವಕನಿಗೆ ಚಾಕು ತೋರಿಸಿ ದರೋಡೆ ಮಾಡಲು ಯತ್ನಿಸಿದ ಅರ್ಷದ್ ಖಾನ್ ಯಾನೆ ಜಾಮೂನು ಈತನನ್ನ ತುಂಗನಗರ ಪೊಲೀಸರು ಬಂಧಿಸಿ ಜೂ.3 ರಂದು ಬೆಳಿಗ್ಗೆ ಲೀಡಿಂಗ್ ಚೈನ್ ಮೂಲಕ ತುಂಗನಗರ ಪೊಲೀಸ್ ಠಾಣೆಯಿಂದ ಅನುಪಿನ ಕಟ್ಟೆ ಚಾನೆಲ್ ಬಳಿ ಆತ ಇಟ್ಟಿದ್ದ ಡ್ರ್ಯಾಗರ್ ನನ್ನ ವಶಪಡಿಸಿಕೊಳ್ಳಲು ಮಹಜರ್ ಗೆ ಕರೆದು ಕೊಂಡು ಹೋಗಲಾಗಿತ್ತು.

IMG_20220603_115027

ಚಾನೆಲ್ ಬಳಿಯಿದ್ದ ಪೊದೆಯಲ್ಲಿ ಬಚ್ಚಿಟ್ಟಿದ್ದ ಡ್ರ್ಯಾಗರ್ ನನ್ನ ಅರ್ಷದ್ ಕೈಗೆತ್ತಿಕೊಂಡು ಲೀಡಿಂಗ್ ಚೈನ್ ಹಿಡಿದುಕೊಂಡಿದ್ದ ಪಿಸಿ ಅರುಣ್ ಕುಮಾರ್ ಮೇಲೆ ಏಕಾಏಕಿ ಮುಗಿಬಿದ್ದಿದ್ದಾನೆ. ಈ ದಾಳಿಯಲ್ಲಿ ಅರುಣ್ ನ ಬಲಭುಜಕ್ಕೆ ಗಾಯವಾಗಿದೆ.

ಸ್ಥಳದಲ್ಲಿಯೇ ನಿಂತಿದ್ದ ಪಿಐ ಮಂಜುನಾಥ್ ರೌಡಿ ಅರ್ಷದ್ ಗೆ ವಾರ್ನ್ ಮಾಡಿದ್ದಾರೆ. ಆದರೂ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ತನ್ನ ಸರ್ವಿಸ್ ಗನ್ ನಿಂದ ಗುಂಡು ಹಾರಿಸಿದ್ದಾರೆ. ಗುಂಡು ಆತನ ಕಾಲಿಗೆ ಬಿದ್ದಿದೆ. ಕುಸಿದುಬಿದ್ದಾನೆ. ಅರುಣ್ ಮತ್ತು ಅರ್ಷದ್ ನನ್ನ‌ಮೆಗ್ಗಾನ್ ಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಲಾಗಿದೆ.

IMG_20220603_115301

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button