ಆನವೇರಿ ಜಾತ್ರೆಗೆ ಮೆಸ್ಕಾಂ ಅನುಮತಿಯಿಲ್ಲದೆ ವಿದ್ಯುತ್ ಬಳಸದಂತೆ ಮನವಿ

ಸುದ್ದಿಲೈವ್.ಕಾಂ/ಹೊಳೆಹೊನ್ನೂರು
ಆನವೇರಿ ಗ್ರಾಮದಲ್ಲಿ ನಾಳೆ ಮತ್ತು ನಾಡಿದ್ದು ನಡೆಯುವ ಶ್ರೀ ಹಿರಿ ಮಾವುರದಮ್ಮ ದೇವಿಯ ಜಾತ್ರಾ ಮಹೋತ್ಸವ ಆಚರಣೆಗೆ ಯಾವುದೇ ಕಾರಣಕ್ಕೂ ಮೆಸ್ಕಾಂನ ಅನುಮತಿಯಿಲ್ಲದೆ ಜಾಲದಿಂದ ವಿದ್ಯುತ್ ಪಡೆಯದಂತೆ ಪ್ರಕಟಣೆ ಹೊರಡಿಸಿದೆ. ,
ಈ ಜಾತ್ರಾ ಮಹೋತ್ಸವದಲ್ಲಿ ಸಾರ್ವಜನಿಕರು ಸಾಮೂಹಿಕ ಔತಣ ಕೂಟ ಏರ್ಪಡಿಸುವುದು, ವಿದ್ಯುತ್ ಲೈನ್/ಕಂಬಗಳಲ್ಲಿ ಅಲಂಕಾರಿಕ ದೀಪಗಳನ್ನು ಅಳವಡಿಸುವುದು, ಜಾತ್ರೆಗೆ ಮಳಿಗೆ ಹಾಕುವ ವರ್ತಕರು, ಮನೋರಂಜನಾ ಆಟಿಕೆಯವರು, ಸರ್ಕಸ್ / ನಾಟಕ ಕಂಪನಿಯವರು ಇತ್ಯಾದಿಯವರು ಮೆಸ್ಕಾಂನ ಪೂರ್ವಾನುಮತಿ ಇಲ್ಲದೇ ಯಾವುದೇ ಕಾರಣಕ್ಕೂ ಮೆಸ್ಕಾಂ ವಿದ್ಯುತ್ ಜಾಲದಿಂದ ವಿದ್ಯುತ್ನ್ನು ಉಪಯೋಗಿಸಬಾರದು ಹೊಖೆಹೊನ್ನೂ ಮೆಸ್ಕಾಂ ಅಧಿಕಾರಿಗಳು ಪ್ರಕಟಣೆ ಹೊರಡಿಸಿದ್ದಾರೆ.
ಒಂದು ವೇಳೆ ಬಳಸಿದ್ದಲ್ಲಿ, ಇದರಿಂದ ಸಾರ್ವಜನಿಕ ಆಸ್ತಿ ಪಾಸ್ತಿಗೆ, ಜೀವ ಹಾನಿಯಂತಹ ಘಟನೆಗಳು ಸಂಭವಿಸಿದಲ್ಲಿ ಮೆಸ್ಕಾಂ ಹೊಣೆಯಾಗಿರುವುದಿಲ್ಲ ಹಾಗೂ ಪೂರ್ವಾನುಮತಿ ಪಡೆಯದೆ ವಿದ್ಯುತ್ ಬಳಸುವವರ ವಿರುದ್ಧ ವಿದ್ಯುತ್ ದುರ್ಬಳಕೆ/ಕಳ್ಳತನ ಪ್ರಕರಣ ದಾಖಲಿಸಿಕೊಂಡು ಭಾರತೀಯ ವಿದ್ಯುಚ್ಛಕ್ತಿ ನಿಯಮಾವಳಿಗಳ ಪ್ರಕಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಹೊಳೆಹೊನ್ನೂರು ಮೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂನಿಜಿಯರ್ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
