ಗೋವು ರಕ್ಷಣೆ ಮಾಡಿದ ಹಿಂದೂ ಕಾರ್ಯಕರ್ತನಿಗೆ ಧಮ್ಕಿ,ಕೊಲೆಬೆದರಿಕೆ!

ಸುದ್ದಿಲೈವ್.ಕಾಂ/ಶಿವಮೊಗ್ಗ
ಅಕ್ರಮ ಗೋಸಾಗಾಣಿಕೆ ಮಾಡುತ್ತಿರುವ ವಿಷಯವನ್ನ ಪೊಲೀಸರಿಗೆ ತಿಳಿಸಿದ್ದಕ್ಕೆ ಹಿಂದೂ ಕಾರ್ಯಕರ್ತನ ಮತ್ತು ಆತನ ಕುಟುಂಬಕ್ಕೆ ಜೀವ ಬೆದರಿಕೆ ಹಾಕಿರುವ ಘಟನೆ ನಡೆದಿದೆ.
ಇಂದು ಸಂಜೆ ಪುರುದಾಳಿನಿಂದ ಶಿವಮೊಗ್ಗಕ್ಕೆ ಕೆಎ 17 ಬಿ 6466 ಕ್ರಮ ಸಂಖ್ಯೆಯ ಬೊಲೆರೋ ಪಿಕಪ್ ವಾಹನದಲ್ಲಿ ಹೋರಿ ಮತ್ತು ಕರವನ್ನ ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ತಿಳಿದ ಹಿಂದೂ ಕಾರ್ಯಕರ್ತ ತುಂಗ ನಗರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಗೋಪಾಳಕ್ಕೆ ಬರುತ್ತಿದ್ದಂತೆ ಪೊಲೀಸರು ತಪಾಸಣೆ ನಡೆಸಿ ಸೂಕ್ತ ದಾಖಲಾತಿಯನ್ನ ಪರಿಶೀಲಿಸಿದ್ದಾರೆ. ಹೋರಿ ಕರುಗಳನ್ನ ಸಾಗಿಸಲು ಸೂಕ್ತ ದಾಖಲಾತಿ ಇಲ್ಲದ ಹಿನ್ನಲೆಯಲ್ಲಿ ಪೊಲೀಸರು ವಾಹನವನ್ನ ಸೀಜ್ ಮಾಡಿ ಗೋವುಗಳನ್ನ ರಕ್ಷಿಸಿದ್ದಾರೆ. ಈ ವೇಳೆ ಮಾರಕಾಸ್ತ್ರಗಳು ಪತ್ತೆಯಾಗಿವೆ.
ಆದರೆ ಈ ವಿಷಯವನ್ನ ಪೊಲೀಸರಿಗೆ ತಿಳಿಸಿದ್ದು ಹಿಂದೂವಕಾರ್ಯಕರ್ತನೇ ಎಂದು ಆರೋಪಿಸಿ ಜಬೀ ಯಾನೇ ಗೂಳಿ ಜಬೀನೇ ಖುದ್ದು ಫೀಲ್ಡಿಗೆ ಇಳಿದಿದ್ದಾನೆ. ಹಿಂದೂ ಕಾರ್ಯಕರ್ತ ಗೋಪಾಳದ ವಿನಾಯಕ ವೃತ್ತದ ಬಳಿಯ ಯಾದವ ಮೆಡಿಕಲ್ ಬಳಿ ನಿಂತಿದ್ದಾಗ ಸ್ಥಳಕ್ಕೆ ಬಂದ ಜಬೀ ತನ್ನ ಗ್ಯಾಂಗ್ ನ್ನೇ ಕರೆದುಕೊಂಡು ಬಂದಿದ್ದಾನೆ. ನನ್ನ ವ್ಯವಹಾರವನ್ನ ಪದೇ ಪದೇ ಹಾಳು ಮಾಡುತ್ತಿದ್ದೀಯ ಎಂದು ಆರೋಪಿಸಿ ಮಚ್ಚನ್ನ ತೋರಿಸಿ ಕೊಲೆ ಮಾಡುವುದಾಗಿ ಗದರಿಸಿದ್ದಾನೆ.
ಕಳೆದ ಬಾರಿ ಅನುಪಿನ ಕಟ್ಟೆಯಲ್ಲೂ ಹೀಗೆ ಗೋಸಾಗಾಣಿಕೆ ಮಾಡುವಾಗ ಪೊಲೀಸರಿಗೆ ಹಿಡಿದುಕೊಟ್ಟಿದ್ದೀಯ ಇನ್ನೊಮ್ಮೆ ನನ್ನ ವ್ಯಾಪಾರಕ್ಕೆ ಅಡ್ಡ ಬಂದರೆ ನಿನ್ನನ್ನ ಮತ್ತು ನಿನ್ನ ಕುಟುಂಬವನ್ನ ಸುಮ್ಮನೆ ಬಿಡೋಲ್ಲ ಎಂದು ಮಚ್ಚನ್ನಬೀಸಿದ್ದಾನೆ.
ತಪ್ಪಿಸಿಕೊಂಡ ಹಿಂದೂಕಾರ್ಯಕರ್ತ ಪೊಲೀಸ್ ಠಾಣೆಗೆ ದೂರುನೀಡಿ ಸೂಕ್ತ ರಕ್ಷಣೆ ನೀಡುವಂತೆ ಕೋರಿದ್ದಾರೆ. ಒಟ್ಟಿನಲ್ಲಿ ಗೋ ರಕ್ಷಕರಿಗೆ ಸೂಕ್ತ ರಕ್ಷಣೆ ನೀಡಲಿದೆಯಾ ಎಂಬುದನ್ನ ಕಾದು ನೋಡಬೇಕಿದೆ.
