ಶಿಕ್ಷಣ

ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ವನಮಹೋತ್ಸವ ಸಮಾರಂಭ – ಡಾ. ಧನಂಜಯ್‌ ಸರ್ಜಿ

ಸುದ್ದಿಲೈವ್. ಕಾಂ/ಶಿವಮೊಗ್ಗ

ಶಿವಮೊಗ್ಗ ಸರ್ಜಿ ಫೌಂಡೇಷನ್ ಪ್ರಾಯೋಜಕತ್ವ ಹಾಗೂ ಶಿವಮೊಗ್ಗ ಸೇಂಟ್ ಜೋಸೆಫ್ ಅಕ್ಷರರಾದ ವಿದ್ಯಾಸಂಸ್ಥೆಯ ಸಹಯೋಗದೊಂದಿಗೆ ಪದ್ಮಶ್ರೀ ಪುರಸ್ಕೃತ ಸಾಲುಮರದ ತಿಮ್ಮಕ್ಕ ಅವರ ನೇತೃತ್ವದಲ್ಲಿ ವನಮಹೋತ್ಸವ ಹಾಗೂ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಜೂನ 17 ರಂದು ಹಮ್ಮಿಕೊಳ್ಳಲಾಗಿದೆ ಎಂದು ಸರ್ಜಿ ಫೌಂಡೇಷನ್ ಮ್ಯಾನೇಜಿಂಗ್ ಟ್ರಸ್ಟಿಡಾ, ಧನಂಜಯ ಸರ್ಜೆ ತಿಳಿಸಿದರು.

ಅವರು ಶನಿವಾರ ಬೆಳಗ್ಗೆ ಸರ್ಚಿ ಸೂಪರ ಸ್ಪೇಷಾಲಿಟಿ ಆಸ್ಪತ್ರೆಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಂಗಳವಾರ ಜೂನ 17 ರಂದು ಬೆಳಗ್ಗೆ 09, 30ಕ್ಕೆ ವನಮಹೋತ್ಸವ ಕಾರ್ಯಕ್ರಮವನ್ನು ಪದಶ್ರೀ ಪುರಸ್ಕೃತ ವೃಕ್ಷಮಾತೆ ಸಾಲುಮರದ ತಿಮ್ಬಕ್ಕೆ ಅವರು ಸಾಗರ ರಸ್ತೆಯ ಸೇಂಟ್ ಜೋಸೆಫ್ ಅಕ್ಷರಧಾಮ ವಿದ್ಯಾಸಂಸ್ಥೆಯ ಆವರಣದಲ್ಲಿ ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಡಾ. ಸಲಮಣಿ, ಡಿಎಫ್ ಓ ಶಂಕರ, ಬಸವಕೇಂದ್ರದ ಪರಮಪೂಜ್ಯರಾದ ಶ್ರೀ ಬಸವ ಮರುಳಸಿದ್ದ ಸ್ವಾಮಿಜಿಯವರು, ಸೇಂಟ ಜೋಸಫ ಅಕ್ಷರಧಾಮ ಶಾಲೆಯ ಪ್ರಾಯಪಾಲರಾದ ಫಾದರೆ ನಿಕ್ಸನ, ಪೇಂಟಿ ಧಾಮ ಸ್ಕೂಲ ಪ್ರಾಶುಪಾಲರಾದ ಫಾದರ ವಿನ್ನೆಂಟ, ಸರ್ಜಿ ಫೌಂಡೇಷನ ಮ್ಯಾನೇಜಿಂಗ್ ಟ್ರಸ್ಟಿ ಡಾ.ಧನಂಜಯ ಸರ್ಜಿ ಭಾಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ಸೇರಿಟ ಜೋಸೆಫ ಶಾಲೆಯ ಸಾವಿರ ಮಕ್ಕಳಿಗೆ ಸಸ್ಯ ಪೋಷಕಾ ಅಭಿಯಾನವನ್ನೂ ಸಹ ಹಮ್ಮಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ವಿಶ್ವ ಪರಿಸರ ದಿನಾಚರಣೆಯನ್ನು ವಿಭಿನ್ನ ಅತ್ಯಂತ ಅರ್ಥಪೂರ್ಣವಾಗಿ ಆಚರಿಸುವ ಸಲುವಾಗಿ ನಗರದ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲಾ ಸ್ಪರ್ಧೆ ಮತ್ತು ಪ್ರಬಂಧ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು, “ಭೂಮಿ ರಕ್ಷಣೆ ನಮ್ಮ ಹೊಣೆ’ ಎಂಬ ವಿಷಯ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ನಡೆಸಲಾಗಿದೆ.

ನಗರದ ವಿವಿಧ 15 ಶಾಲೆಗಳಿಂದ 2,200 ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು. 5,6,7 ನೇ ತರಗತಿ ಮಕ್ಕಳಿಗೆ ಪ್ರಥಮ (7,500/-), ದ್ವಿತೀಯ (5,500/-). ತೃತೀಯ (2,500/-).ನಗದು ಬಹುಮಾನಗಳನ್ನು ಹಾಗೂ ಪ್ರಶಸ್ತಿ ಪತ್ರದೊಂದಿಗೆ ನೀಡಲಾಗುತ್ತಿದೆ ಹಾಗೂ 8,9, 10 ನೇ ತರಗತಿ ಮಕ್ಕಳಿಗೆ (10,000/-), aros (6,000/-), arods (3,000/-) ನಗದು ಬಹುಮಾನಗಳನ್ನು ಹಾಗೂ ಪ್ರಶಸ್ತಿ ಪತ್ರದೊಂದಿಗೆ ನೀಡಲಾಗುತ್ತಿದೆ ಹಾಗೂ ಸಮಾಧಾನಕರ ಬಹುಮಾನಗಳನ್ನೂ ಸಹ ನೀಡಲಾಗುತ್ತಿದೆ.

ಇದು ನಿಜಕ್ಕೂ ಮಕ್ಕಳಿಗೆ ಪರಿಸರದ ಬಗ್ಗೆ ಇರುವ ಕಾಳಜಿಯನ್ನು ಬಿಂಬಿಸುತ್ತದೆ. ಇದೇ ರೀತಿ ನಗರದ ಪದವಿ ಕಾಲೇಜುಗಳ ವಿದ್ಯಾರ್ಥಿಗಳಿಗೆ ಕಸ ತ್ಯಾಜ್ಯ ನಿರ್ವಹಣೆ, ವಿಲೇವಾರಿ ಹಾಗೂ ಚರಂಡಿ ಸ್ವಚ್ಛತೆಯಲ್ಲಿ ಸಮುದಾಯದ ಪಾತ್ರ” ಎಂಬ ವಿಷಯ ಕುರಿತು ಪ್ರಬಂಧ ಸ್ಪರ್ಧೆ ಆಯೋಜಿಸಲಾಗಿತ್ತು, ಈ ಸ್ಪರ್ಧೆಯಲ್ಲಿ 118ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿ ಅತ್ಯಂತ ಅರ್ಥಪೂರ್ಣವಾಗಿ ಪ್ರಬಂಧಗಳನ್ನು ಬರೆದು ಕಳಿಸಿದ್ದರು. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಬಂದ ಪ್ರಬಂಧಗಳು ಹಾಗೂ ಕಲಾ ಚಿತ್ರಗಳನ್ನು ಆಯ್ಕೆ ಮಾಡುವುದೇ ಒಂದು ಸವಾಲಾಗಿತ್ತು.

ಅತ್ಯಂತ ಪಾರದರ್ಶಕವಾಗಿ ಆಯ್ಕೆ ಮಾಡಲಾಗಿದ್ದು, ಪ್ರಥಮ 10,000/-) Darodo (6,000/-). garoto (3,000/-)) ನಗದು ಬಹುಮಾನಗಳನ್ನು ಹಾಗೂ ಪ್ರಶಸ್ತಿ ಪತ್ರದೊಂದಿಗೆ ನೀಡಲಾಗುತ್ತಿದೆ ಹಾಗೂ ಸಮಾಧಾನಕರ ಬಹುಮಾನಗಳನ್ನೂ ಸಹ ನೀಡಲಾಗುತ್ತಿದೆ ಎಂದರು.

ಮಕ್ಕಳಿಗೆ ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಕಾಳಜಿ ಹಾಗೂ ಭೂಮಿ ರಕ್ಷಣೆ ಬಗ್ಗೆ ಆಸಕ್ತಿ ಮೂಡಿಸುವ ಸಲುವಾಗಿ ಹಾಗೂ ಪ್ರೇರಣೆ ಆಗಲಿ ಎಂಬ ಸದುದ್ದೇಶದಿಂದ ಸಾಲುಮರದ ತಿಮ್ಮಕ್ಕ ಅವರಿಂದಲೇ ಮಕ್ಕಳಿಗೆ ಬಹುಮಾನ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸೇಂಟ ಜೋಸಫ ಅಕ್ಷರಧಾಮ ಶಾಲೆಯ ಪ್ರಾಂಶುಪಾಲರಾದ ಘಾಧದ ನಿಕ್ಸನ, ಸೇಂಟ್ ಥಾಮಸ್ಥ ಸ್ಕೂಲ ಪ್ರಾಂಶುಪಾಲರಾದ ಫಾದರ ವಿನ್ನೆಂಟ, ಟ್ರಸ್ಟಿಗಳಾದ ಶ್ರೀಮತಿ ನಮಿತಾ ಸರ್ಜಿ ಹಾಗೂ ಪುರುಷೋತ್ತಮ ಕೆ.ಆರ ಮತ್ತಿತರು ಉಪಸ್ಥಿತರಿದ್ದರು.

Spread the love

Soori

ಶಿವಮೊಗ್ಗ ಜಿಲ್ಲಾ ಸುದ್ದಿಗಳನ್ನ ಪ್ರಪಂಚಕ್ಕೆ ತಿಳಿಸುವ ಪ್ರಯತ್ನ ಸುದ್ದಿಲೈವ್ ನದು. ಪತ್ರಿಕೆ ಮತ್ತು ಟಿವಿ ಮಾಧ್ಯಮಗಳಿಗಿಂತ ವಿಭಿನ್ನ ಪ್ರಯತ್ನದಲ್ಲಿ ಪರ್ಯಾಯ ಮಾಧ್ಯಮವಾಗಿ ಪ್ರಕಟಿಸುವ ಸಣ್ಣಪ್ರಯತ್ನವೂ ಹೌದು! ದಯಮಾಡಿ ಹರಿಸಿ,ಬೆಂಬಲಿಸಿ

Related Articles

Leave a Reply

Your email address will not be published.

Back to top button