ಸುದ್ದಿ
ಶುಭಾರಂಭಗೊಂಡ ವಿ-ಕೇರ್ ಫಿಟ್ ನೆಸ್ ಹಬ್

ಸುದ್ದಿಲೈವ್.ಕಾಂ/ಶಿವಮೊಗ್ಗ
ಸೋಮಿನಕೊಪ್ಪ ಮುಖ್ಯ ರಸ್ತೆಯ ಸಹ್ಯಾದ್ರಿ ನಗರದಲ್ಲಿರುವ ವಿ-ಕೇರ್ ಫಿಟ್ ನೆಸ್ ಹಬ್ ಶುಭಾರಂಭಗೊಂಡಿದೆ. ದೇಹದ ವ್ಯಾಯಾಮಕ್ಕೆ ಹಾಗೂ ಫಿಟ್ ನೆಸ್ ಗೆ ಈ ಹಬ್ ಗೆ ಭೇಟಿ ನೀಡಬಹುದಾಗಿದೆ.
ಇಂದು ಬೆಳಿಗ್ಗೆ 8 ಗಂಟೆಗೆ ಗಣಪತಿ ಪೂಜೆ ನಡೆಸಲಾಗಿದೆ. 11 ಗಂಟೆಗೆ ಸಚಿವ ಈಶ್ವರಪ್ಪ ಜಿಮ್ ಮಾಡುವ ಮೂಲಕ ಹಬ್ ನ್ನ ಉದ್ಘಾಟಿಸಿದರು.
ಈ ವೇಳೆ ಮೇಯರ್ ಸುನೀತ್ ಅಣ್ಣಪ್ಪ, ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಎಸ್.ದತ್ತಾತ್ರಿ, ಎಂಐಡಿಎ ಮಾಜಿ ಅಧ್ಯಕ್ಷ ಪದ್ಮನಾಭ್ ಭಟ್ ಮೊದಲಾದವರು ಉಪಸ್ಥಿತರಿದ್ದರು.
