ರಾಜಕೀಯ
ಆರ್ ಎಸ್ ಎಸ್ ನ ಹಿಂದೂ ರಾಷ್ಟ್ರದ ಅಜೆಂಡಾ ಪೂರ್ಣಗೊಳಿಸಲು ಬಿಡೊಲ್ಲ-ಶಾಹೀದ್ ಖಾನ್

ಸುದ್ದಿಲೈವ್.ಕಾಂ/ಶಿವಮೊಗ್ಗ
ಪಿ.ಎಫ್.ಐ ಸಂಘಟನೆಯ ಖಾತೆಗಳನ್ನು ಈಡಿ ತಾತ್ಕಾಲಿಕವಾಗಿ ಮುಟ್ಟುಗೋಲು ಹಾಕಿರುವುದನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಹಾವೀರ ವೃತ್ತದ ಬಳಿ ಬೃತಹತ್ ಪ್ರತಿಭಟನೆ ನಡೆಸಿತು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಮುಖಂಡ ಶಾಹಿದ್ ಖಾನ್ ಪಿಎಫ್ಐ ಸಂಘಟನೆಯನ್ನು ಈಡಿ ಮತ್ತು ಎನ್ ಐ ಎ ಮೂಲಕ ಆರ್ ಎಸ್ ಎಸ್ ಮತ್ತು ಬಿ ಜೆ ಪಿ ಹೆದರಿಸಲು ನೋಡುತ್ತಿದೆ. ಅವರಿಗೇ ಗೊತ್ತು ಪಿ ಎಫ್ ಐ ಇಂತಹ ಬೆದರಿಕೆಗಳಿಂದ ಬೆದರಿ ಹಿಂದೆ ಸರಿಯುವಂತಹ ಸಂಘಟನೆಯಲ್ಲ ಎಂದು ಗುಡುಗಿದರು.
ನಮ್ಮ ಸಂಘಟನೆಯ ಒಬ್ಬನೇ ಒಬ್ಬ ಕಾರ್ಯಕರ್ತ ಇರುವ ವರೆಗೂ ಅವರ ಹಿಂದೂರಾಷ್ಟ್ರ ಅಜೆಂಡಾವನ್ನು ಪೂರ್ಣಗೊಳಿಸಲು ನಾವು ಬಿಡುವುದಿಲ್ಲ ಎಂದು ಈ ಮೂಲಕ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಶಿವಮೊಗ್ಗ ಜಿಲ್ಲಾಧ್ಯಕ್ಷರಾದ ಉಬೆದ್ ವುಲ್ಲಾ ,ಜಿಲ್ಲಾ ಕಾರ್ಯದರ್ಶಿ ಉಮರ್ ಫಾರೂಕ್ ಮತ್ತು ಕಾರ್ಯಕರ್ತರೂ ಹಾಗೂ ಬೆಂಬಲಿಗರು ಉಪಸ್ಥಿತಿ ಇದ್ದರು.
